Pension Rule 2023: ಇನ್ಮುಂದೆ ಈ ನೌಕರರ ಮಕ್ಕಳಿಗೆ ಸಿಗಲಿದೆ ಪಿಂಚಣಿ, ಪಿಂಚಣಿ ಹಕ್ಕು ನಿಯಮದಲ್ಲಿ ದೊಡ್ಡ ಬದಲಾವಣೆ

ಈ ನೌಕರರ ಪಿಂಚಣಿ ಹಕ್ಕು ನಿಯಮದಲ್ಲಿ ದೊಡ್ಡ ಬದಲಾವಣೆ, ನೌಕರರ ಮಕ್ಕಳಿಗಿದೆ ಹಕ್ಕು

Pension Rule Change In India: ಸರ್ಕಾರೀ ನೌಕರರು ತಮ್ಮ ನಿವೃತ್ತಿಯ ನಂತರ ಸರ್ಕಾರದಿಂದ ಪಿಂಚಣಿಯ ಮೊತ್ತವನ್ನು ಪಡೆಯುವುದರ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಸರ್ಕಾರ ನೌಕರರಿಗೆ ನೀಡುವಂತಹ ಪಿಂಚಣಿಗೆ ಸಂಬಂಧಿಸಿದಂತೆ ಅನೇಕ ನಿಯಮಾವಳಿಗಳು ರೂಪಿಸಿರುತ್ತದೆ.

ಸರ್ಕಾರದ ನಿಯಮಾನುಸಾರವೇ ಸರ್ಕಾರೀ ನೌಕರರಾಉ ಪಿಂಚಣಿಯನ್ನು ಪಡೆಯುತ್ತಾರೆ. ಇನ್ನು ಯಾವುದೇ ಸರ್ಕಾರೀ ನೌಕರರು ಪಿಂಚಣಿಯನ್ನು ಪಡೆಯುತ್ತಿದ್ದರೆ, ಆ ವ್ಯಕ್ತಿಯ ಮರಣದ ನಂತರ ಪಿಂಚಣಿಯ ಮೊತ್ತವು ಆ ವ್ಯಕ್ತಿಯ ಸಂಗಾತಿಗೆ ನೀಡಲಾಗುತ್ತದೆ. ಈ ಬಗ್ಗೆ ಕಾನೂನಿನಲ್ಲಿ ಅನೇಕ ತಿದ್ದುಪಡಿಗಳಿವೆ. ಸದ್ಯ ಕೇಂದ್ರದಿಂದ ಹೊಸ ಪಿಂಚಣಿ ನಿಯಮ ಜಾರಿಯಾಗಿದೆ. ಸದ್ಯ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನ ಕೇಂದ್ರ ಜಾರಿಗೆ ತಂದಿದ್ದು ಈ ನಿಯಮ ಎಲ್ಲರಿಗೂ ಅನ್ವಯ ಆಗಲಿದೆ ಎಂದು ಹೇಳಲಾಗಿದೆ.

Pension Rule Change
Image Credit: Kisantak

ಪಿಂಚಣಿ ಹಕ್ಕು ನಿಯಮದಲ್ಲಿ ದೊಡ್ಡ ಬದಲಾವಣೆ
ಪಿಂಚಣಿ ಪಡೆಯುತ್ತಿರುವ ಸರ್ಕಾರೀ ನೌಕರರ ಮರಣದ ನಂತರ ಆ ಪಿಂಚಣಿಯು ಪಿಂಚಣಿದಾರರ ಕುಟುಂಬಕ್ಕೆ ತಲುಪಬೇಕು ಎಂದು ಕಾನೂನು ಹೇಳುತ್ತದೆ. ವ್ಯಕ್ತಿಯ ಮರಣದ ನಂತರ ಪಿಂಚಣಿಯು ಪಿಂಚಣಿದಾರರ ಪತಿ/ಪತ್ನಿ ಗೆ ಸೇರುತ್ತದೆ. ಪತಿ ಮರಣದ ನಂತರ ಪತ್ನಿ ಪಿಂಚಣಿಯ ಹಕ್ಕನ್ನು ಪಡೆಯುತ್ತಾಳೆ. ಇಬ್ಬರು ಮರಣ ಹೊಂದಿದರೆ ಮಾತ್ರ ಪಿಂಚಣಿದಾರರ ಮಕ್ಕಳು ಅಥವಾ ಕುಟುಂಬ ಪಿಂಚಣಿಯ ಹಕ್ಕನ್ನು ಪಡೆಯುತ್ತಾರೆ. ಇನ್ನು ಕೆಲವೊಮ್ಮೆ ವೈವಾಹಿಕ ಜೀವನದಲ್ಲಿ ಕಲಹಗಳು ಏರ್ಪಡುವುದು ಸಾಮಾನ್ಯ. ಈ ವೇಳೆ ದಂಪತಿಗಳು ಬೇರೆಯಾಗುತ್ತಾರೆ. ಆ ಸಮಯದಲ್ಲಿ ಮಕ್ಕಳಿಗೆ ಪಿಂಚಣಿ ಮೇಲೆ ಅಧಿಕಾರ ಇರುತ್ತದೆ.

ಇನ್ಮುಂದೆ ಈ ನೌಕರರ ಮಕ್ಕಳಿಗೆ ಸಿಗಲಿದೆ ಪಿಂಚಣಿ
ಈ ವೇಳೆ ಪಿಂಚಣಿದಾರರು ತಮ್ಮ ಮರಣದ ನಂತರ ತಮ್ಮ ಮಕ್ಕಳಿಗೆ ಪಿಂಚಣಿ ಲಾಭ ದೊರೆಯಲಿ ಎಂದು ಬಯಸುತ್ತಾರೆ. ಸದ್ಯ ಈ ಪಿಂಚಣಿ ಹಕ್ಕು ನಿಯಮದಲ್ಲಿ ದೊಡ್ಡ ಬದಲಾವಣೆ ತರಲಾಗಿದೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಮಂಗಳವಾರ CCS (ಪಿಂಚಣಿ) ನಿಯಮಗಳು, 2021 ಗೆ ತಿದ್ದುಪಡಿಯನ್ನು ಪರಿಚಯಿಸಿದೆ, ಇದು ಮಹಿಳಾ ಸರ್ಕಾರಿ ಉದ್ಯೋಗಿ ಅಥವಾ ಪಿಂಚಣಿದಾರರಿಗೆ ಮರಣದ ನಂತರ ಅವರ ಸಂಗಾತಿಯ ಬದಲಿಗೆ ಅರ್ಹ ಮಗು ಅಥವಾ ಮಕ್ಕಳಿಗೆ ಕುಟುಂಬ ಪಿಂಚಣಿ ನೀಡಲು ಅನುವು ಮಾಡಿಕೊಡುತ್ತದೆ.

Pension Rule Change 2024
Image Credit: Original Source

ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ, ವರದಕ್ಷಿಣೆ ನಿಷೇಧ ಅಥವಾ ಭಾರತೀಯ ದಂಡ ಸಂಹಿತೆ ಕಾಯಿದೆಗಳ ಅಡಿಯಲ್ಲಿ ದಾಂಪತ್ಯ ವೈವಾಹಿಕ ಭಿನ್ನಾಭಿಪ್ರಾಯವು ವಿಚ್ಛೇಧನ ಪ್ರಕ್ರಿಯೆಗಳಿಗೆ ಕಾರಣವಾಗುವ ಪ್ರಕರಣಗಳಿಗೆ ತಿದ್ದುಪಡಿಯನ್ನು ಒದಗಿಸುತ್ತದೆ. ಈ ಹಿಂದೆ ಸಂಗಾತಿಯ ಅನರ್ಹತೆ ಅಥವಾ ನಿಧನದ ನಂತರ ಮಾತ್ರ ಇತರ ಕುಟುಂಬ ಸದಸ್ಯರು ಪಿಂಚಣಿಗೆ ಅರ್ಹರಾಗುತ್ತಾರೆ. ಸದ್ಯ ಹೊಸ ತಿದ್ದುಪಡಿಯು ಮಹಿಳಾ ಸರ್ಕಾರಿ ನೌಕರರು ಅಥವಾ ಪಿಂಚಣಿದಾರರು ತಮ್ಮ ಸಂಗಾತಿಯ ಬದಲಿಗೆ ತಮ್ಮ ಮರಣದ ನಂತರ ತಮ್ಮ ಅರ್ಹ ಮಗು/ಮಕ್ಕಳಿಗೆ ಕುಟುಂಬ ಪಿಂಚಣಿ ಮಂಜೂರು ಮಾಡಲು ಅವಕಾಶ ನೀಡಲಾಗಿದೆ.

Join Nadunudi News WhatsApp Group

Join Nadunudi News WhatsApp Group