Pension Update: ಇಂತಹ ನೌಕರರಿಗೆ ಸಿಗಲಿದೆ 50 ನೇ ವಯಸ್ಸಿಗೆ ಪಿಂಚಣಿ ಹಣ, ಪೆನ್ಷನ್ ನಿಯಮದಲ್ಲಿ ಮತ್ತೆ ಬದಲಾವಣೆ

ಇದೀಗ ಇಂತಹ ನೌಕರರ ಪಿಂಚಣಿ ಪಡೆಯುವ ವಯಸ್ಸಿನ ಮಿತಿಯನ್ನು ಕಡಿಮೆ ಮಾಡಿದ ಸರ್ಕಾರ

Pensioners Age Reduction: ದೇಶದಲ್ಲಿ ವಿವಿಧ ಪಿಂಚಣಿಯ ಯೋಜನೆಗಳು ಲಭ್ಯವಿದೆ. ನಿವೃತ್ತಿಯ ನಂತರ ಜೀವನ ನಿರ್ವಹಣೆಗಾಗಿ ಜನರು ಪಿಂಚಣಿ ಯೋಜನೆಯಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲ ಪಿಂಚಣಿಯ ಯೋಜನೆಗಳ ಲಾಭವನ್ನು ಹೂಡಿಕೆದಾದರೂ 60 ವರ್ಷದ ಬಳಿಕ ಪಡೆಯುತ್ತಾರೆ.

ವ್ಯಕ್ತಿಯ ನಿವೃತ್ತಿಯ ವಯಸ್ಸು 60 ವರ್ಷ ಆಗಿರುವುದರಿಂದ ಯಾವುದೇ ರೀತಿಯ ಪಿಂಚಣಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರು ಕೂಡ ನಿಮಗೆ 60 ವರ್ಷ ಆದ ಬಳಿಕ ಮಾತ್ರ ನಿಮಗೆ ಪಿಂಚಣಿಯ ಹಣ ಲಭ್ಯವಾಗುತ್ತದೆ. ಆದರೆ ಇದೀಗ ಈ ಪಿಂಚಣಿಯ ನಿಯಮದಲ್ಲಿ ಮಹತ್ವದ ಬದಲಾವಣೆ ಆಗಿದೆ.

Pension Rules Chnage
Image Credit: Rewariyasat

ಪೆನ್ಷನ್ ನಿಯಮದಲ್ಲಿ ಮತ್ತೆ ಬದಲಾವಣೆ
ಸದ್ಯ ಈ ರಾಜ್ಯ ಸರ್ಕಾರ ಪಿಂಚಣಿ ಪಡೆಯುವ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಜಾರ್ಖಂಡ್ ನಲ್ಲಿ ಪಿಂಚಣಿ ಪಡೆಯುವ ವಯಸ್ಸನ್ನು ಕಡಿತಗೊಳಿಸಲಾಗಿದೆ. ಸದ್ಯ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಪಿಂಚಣಿ ಪಡೆಯುವ ವಯಸ್ಸಿನ ಮಿತಿಯನ್ನು ಕಡಿಮೆಗೊಳಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ 60 ವರ್ಷದ ಬಳಿಕ ಪಿಂಚಣಿ ನೀಡಲಾಗುತ್ತಿತ್ತು. ಆದರೆ ಜಾರ್ಖಂಡ್ ಸರ್ಕಾರ ಈ ಪಿಂಚಣಿ ಪಡೆಯುವ ವಯಸ್ಸನ್ನು 50 ವರ್ಷಕ್ಕೆ ನಿಗದಿಪಡಿಸಿದೆ. ಇನ್ನುಮುಂದೆ ಜಾರ್ಖಂಡ್ ನಲ್ಲಿ ಜನರು ಪಿಂಚಣಿಯನ್ನು 50 ವರ್ಷ ತುಂಬಿದ ಬಳಿಕ ಪಡೆದುಕೊಳ್ಳಬಹುದು.

ಇಂತಹ ನೌಕರರಿಗೆ ಸಿಗಲಿದೆ 50 ನೇ ವಯಸ್ಸಿಗೆ ಪಿಂಚಣಿ ಹಣ
ಪಿಂಚಣಿಯ ಲಾಭವನ್ನು ಹೂಡಿಕೆಯ ಮಾಡಿದ ಪ್ರತಿಯೊಬ್ಬರೂ ಕೂಡ ಪಡೆಯಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಪಿಂಚಣಿಯ ನಿಯಮದಲ್ಲಿ ಬದಲಾವಣೆಯನ್ನು ಮಾಡಿದೆ. ಪಿಂಚಣಿ ಪಡೆಯುವ ವಯಸ್ಸಿನ ಮಿತಿಯನ್ನು ಕಡಿಮೆ ಮಾಡಿದ್ದರಿಂದ ಎಲ್ಲರು ಕೂಡ ಪಿಂಚಣಿಯ ಲಾಭವನ್ನು ಪಡೆಯಬಹುದು.

Pension Age Reduce
Image Credit: Businesstoday

ಹೆಚ್ಚಿನ ಪಿಂಚಣಿ ಹೂಡಿಕೆದಾರರು 60 ವರ್ಷಕ್ಕೂ ಮೊದಲು ಮರಣ ಹೊಂದಿರುವುದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಜಾರ್ಖಂಡ್ ಸರ್ಕಾರ ಪಿಂಚಣಿ ಪಡೆಯುವ ವಯಸ್ಸಿನ ಮಿತಿಯನ್ನು ಕಡಿಮೆಗೊಳಿಸಿದೆ. ಇನ್ನುಮುಂದೆ ಜಾರ್ಖಂಡ್ ನಲ್ಲಿ ಪಿಂಚಣಿಯ ಲಾಭ ಪಡೆಯಲು 60 ವರ್ಷದ ತನಕ ಕಾಯುವ ಅಗತ್ಯವಿಲ್ಲ. ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ ಆದಿವಾಸಿಗಳು ಮತ್ತು ದಲಿತರಿಗೆ 50 ವರ್ಷದಲ್ಲಿಯೇ ಪಿಂಚಣಿಯ ಲಾಭವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group