Price Hike: ವಾಹನ ಸವಾರರಿಗೆ ಬೇಸರದ ಸುದ್ದಿ, ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ.

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ ,ವಾಹನ ಸವಾರರಿಗೆ ಬೇಸರದ ಸುದ್ದಿ

Petrol -Diesel Price Hike: ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ (New financial Year) ಆರಂಭಗೊಂಡಿದ್ದು ಅನೇಕ ನಿಯಮಗಳು ಬದಲಾಗಿವೆ. ಇತ್ತಿಚೆಗಂತೂ ಪ್ರತಿ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ.

ಈ ಬಾರಿಯ ಹಣಕಾಸು ವರ್ಷ ಹಣದುಬ್ಬರದ ಪರಿಸ್ಥಿಯನ್ನು ಹೆಚ್ಚಿಸಿದೆ. ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಆರ್ಥಿಕ ನಷ್ಟವನ್ನು ಎದುರಿಸುತ್ತಿದ್ದಾರೆ. ಇನ್ನು ಕಚ್ಚಾ ತೈಲಗಳ ಬೆಲೆ ವಿಪರೀತ ಏರಿಕೆಯಾಗುತ್ತಲೇ ಇದೀಗ, ಇಂದು ಮತ್ತೆ ಪೆಟ್ರೋಲ್ (petrol) , ಡೀಸೆಲ್ (Diesel) ಗಳ ಬೆಲೆ ಏರಿಕೆಯಾಗಿದೆ.

Petrol -Diesel Price Hike
Image Credit: lagatar24

ಪೆಟ್ರೋಲ್ ಡೀಸೆಲ್ ಗಳ ಬೆಲೆಯಲ್ಲಿ ಮತ್ತೆ ಏರಿಕೆ
ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೂಡ ಪೆಟ್ರೋಲ್ ಡೀಸೆಲ್ ಗಳ ಮೇಲಿನ ಬೇಡಿಕೆ ಹೆಚ್ಚಾಗಿವೆ. ಹಾಗಾಗಿ ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಹಲವಾರು ಕಾರಣಗಳಿಂದ ಕಚ್ಚಾ ತೈಲಗಳ ಬೆಲೆ ಹೆಚ್ಚುತ್ತಿದೆ.

ಹಲವಾರು ಜಾಗತಿಕ ವಿದ್ಯಮಾನಗಳಿಂದ ಪೆಟ್ರೋಲ್, ಡೀಸೆಲ್ ಗಳ ಬೆಲೆ ಪ್ರಭಾವಿಸಲ್ಪಡುತ್ತದೆ. ಕಳೆದ ಬಾರಿ ರಷ್ಯಾ ಹಾಗೂ ಉಕ್ರೇನ್ ಯುದ್ಧವೂ ಪ್ರಾರಂಭದ ಕಾರಣಕ್ಕಾಗಿ ಕಚ್ಚಾ ತೈಲಗಳ ಬೆಲೆ ಗಗನಕ್ಕೇರಿದೆ. ಇನ್ನು ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ಗಳ ಬೆಲೆ ಎಷ್ಟಕ್ಕೆ ತಲುಪಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಇಂದಿನ ಪೆಟ್ರೋಲ್ ದರ
ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ರೂ. 101.94 ಆಗಿದೆ. ಚಿಕ್ಕಮಗಳೂರಿನಲ್ಲಿ ಇಂದು ಪೆಟ್ರೋಲ್ ದರ ರೂ. 102.36 ಆಗಿದ್ದು, 24 ಪೈಸೆ ಇಳಿಕೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಇಂದು ಪೆಟ್ರೋಲ್ ದರ ರೂ. 101.26 ಆಗಿದ್ದು, 59 ಪೈಸೆ ಇಳಿಕೆಯಾಗಿದೆ. ಮೈಸೂರಿನಲ್ಲಿ ಇಂದು ಪೆಟ್ರೋಲ್ ದರ ರೂ. 101.50 ಆಗಿದೆ. ಉಡುಪಿಯಲ್ಲಿ ಇಂದು ಪೆಟ್ರೋಲ್ ದರ ರೂ. 101.44 ಆಗಿದ್ದು, 37 ಪೈಸೆ ಇಳಿಕೆಯಾಗಿದೆ.

Join Nadunudi News WhatsApp Group

petrol and diesle price latest update
Image Credit: firstpost

ಇಂದಿನ ಡೀಸೆಲ್ ದರ
ಬೆಂಗಳೂರಿನಲ್ಲಿ ಇಂದು ಡಿಸೇಲ್ ದರ ರೂ. 87.89 ಆಗಿದೆ. ಚಿಕ್ಕಮಗಳೂರಿನಲ್ಲಿ ಇಂದು ಡಿಸೇಲ್ ದರ ರೂ. 88.18 ಆಗಿದೆ. ದಕ್ಷಿಣ ಕನ್ನಡದಲ್ಲಿ ಇಂದು ಡಿಸೇಲ್ ದರ ರೂ. 87.25 ಆಗಿದೆ. ಮೈಸೂರಿನಲ್ಲಿ ಇಂದು ಡಿಸೇಲ್ ದರ ರೂ. 87.49 ಆಗಿದೆ. ಉಡುಪಿಯಲ್ಲಿ ಇಂದು ಡಿಸೇಲ್ ದರ ರೂ. 87.41 ಆಗಿದೆ.

Join Nadunudi News WhatsApp Group