Petrol Price: ಪೆಟ್ರೋಲ್ ವಾಹನ ಇದ್ದವರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್, ಬೆಲೆ ಇಳಿಕೆಗೆ ಪ್ಲ್ಯಾನ್ ಮಾಡಿದ ಸರ್ಕಾರ

ಪೆಟ್ರೋಲ್ ಡಿಸೇಲ್ ದರ ಇಳಿಕೆ ಬಗ್ಗೆ ಕೇಂದ್ರದ ನಿರ್ಧಾರ

Petrol Diesel Price Down: ಸದ್ಯ ದೇಶದಲ್ಲಿ ಲೋಕ ಸಭಾ ಚುನಾವಣಾ ಹತ್ತಿರವಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ಸರ್ಕಾರ ಬಾರಿ ಸಿದ್ಧತೆ ನಡೆಸುತ್ತಿದೆ. ಮೋದಿ ಸರ್ಕಾರ ಮುಂದಿನ ಲೋಕಸಭಾ ಚುನಾವಣೆಗೆ ಈಗಾಗಲೇ ಹೆಚ್ಚಿನ ಯೋಜನೆ ಹಾಕಿಕೊಂಡಿದೆ.

ಈ ಹಿನ್ನಲೆ ಜನಸಾಮಾನ್ಯರ ಬಹುದಿನದ ನಿರೀಕ್ಷೆಯ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಬೆಲೆ ಇಳಿಕೆ ಮಾಡಲು ಸರ್ಕಾರ ತೈಲ ಮಾರುಕಟ್ಟೆಯ ಜೊತೆಗೆ ಚರ್ಚೆ ನಡೆಸುತ್ತಿದೆ. ಹೌದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಕಾರಣ ವಾಹನ ಸವಾರರು ಕೇಂದ್ರ ಸರ್ಕಾರಕ್ಕೆ ಶಾಪವನ್ನ ಹಾಕುತ್ತಿದ್ದರು. ಸದ್ಯ ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನ ಇಳಿಕೆ ಮಾಡಲು ಹೊಸ ಪ್ಲ್ಯಾನ್ ರೂಪಿಸಿದೆ ಎಂದು ಹೇಳಬಹುದು.

Petrol Diesel Price Down
Image Credit: Live Mint

ವಾಹನ ಹೊಂದಿರುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಸದ್ಯ ದೇಶದ ಜನತೆಗೆ ಹೊಸ ವರ್ಷದ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ವಿಚಾರವಾಗಿ ಸಿಹಿಸುದ್ದಿಯೊಂದು ಹೊರಬೀಳಲಿದೆ. ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಕೇಂದ್ರದ ಮೋದಿ ಸರ್ಕಾರ ಹೊಸ ಪ್ಲಾನ್ ಹೂಡುತ್ತಿದೆ. ಮುಂದಿನ ಲೋಕಸಭಾ ಚುಬಾವನೆಯ ಸಭೆಯಲ್ಲಿ ಜನರಿಗೆ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲವನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮಾರುಕಟ್ಟೆಯಲ್ಲಿ ಇಂಧನ ಚಾಲಿತ ವಾಹನಗಳ ಮಾರಾಟ ಕೂಡ ಕಡಿಮೆಯಾಗುತ್ತ ಬಂದಿದೆ. ಈ ಎಲ್ಲ ಕಾರಣಗಳನ್ನು ಗಮನಿಸಿ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನ ಇಳಿಕೆ ಮಾಡುತ್ತಾ ಎನ್ನುವುದು ವಾಹನ ಮಾಲೀಕರ ಸದ್ಯದ ಕುತೂಹಲವಾಗಿದೆ. ಸದ್ಯ ವಾಹನ ಹೊಂದಿರುವವರಿಗೆ ಹೊಸ ವರ್ಷಕ್ಕೆ ಕೇಂದ್ರದಿಂದ ಇಂಧನದ ವಿಚಾರವಾಗಿ ಗುಡ್ ನ್ಯೂಸ್ ಬರಲಿದೆ. ಪೆಟ್ರೋಲ್, ಡೀಸೆಲ್ ಬೆಲೆಯ ಇಳಿಕೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಯೋಜನೆ ಹೂಡಿದೆ.

Petrol Diesel Price Latest Update
Image Credit: ABP News

ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ
ಕಚ್ಚಾ ತೈಲ ಬೆಲೆ 52 ವಾರಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ ಸುಮಾರು 6336 ರೂ. ಮತ್ತು WTI ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ ಸುಮಾರು ರೂ. 5,919 ಆಗಿದೆ. ಜಾಗತಿಕ ಬೇಡಿಕೆ ಕಡಿಮೆಯಾದ ಕಾರಣ ಈ ವಾರ ಕಚ್ಚಾ ತೈಲ ಕುಸಿದಿದೆ.

Join Nadunudi News WhatsApp Group

ತೈಲೋತ್ಪಾದಕ ದೇಶಗಳ ನಿರಂತರ ಕಡಿತವು ಬೆಲೆಗಳನ್ನು ಹೆಚ್ಚಿಸಲು ಕಚ್ಚಾ ತೈಲ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭವಿಷ್ಯದಲ್ಲಿಯೂ ಕಚ್ಚಾ ತೈಲದ ಬೆಲೆ ಕಡಿಮೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಮುಂದಿನ ವರ್ಷದಲ್ಲಿ ಕಚ್ಚಾ ತೈಲಗಳ ಬೆಲೆಯಲ್ಲಿ ಬಾರಿ ಇಳಿಕೆಯಾಗುವ ಸಾಧ್ಯತೆ ಇದೆ.

Join Nadunudi News WhatsApp Group