Petrol Price: ಪ್ರತಿನಿತ್ಯ ವಾಹನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸುವವರಿಗೆ ಸಿಹಿಸುದ್ದಿ, ಬೆಲೆ ಇಳಿಕೆಗೆ ಮೋದಿ ಸರ್ಕಾರದ ದೊಡ್ಡ ಪ್ಲ್ಯಾನ್

ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ

Petrol Price Down In India: ಸದ್ಯ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಳೆ ಗಣನೀಯ ಏರಿಕೆ ಕಾಣುತ್ತಿದೆ. ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ದೇಶದಲ್ಲಿ ಕಚ್ಚಾ ತೈಲಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

ವಾಹನ ಮಾಲೀಕರು ಪೆಟ್ರೋಲ್, ಡೀಸೆಲ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿಯೇ ಈ ವರೆಗೂ ಕಾದು ಕುಳಿತಿದ್ದಾರೆ. ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ಗಳ ದರದ ಏರಿಕೆಯ ಪರಿಣಾಮ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಬೇಡಿಕೆ ಪಡೆದಿದ್ದು, ಇಂಧನ ಚಾಲಿತ ವಾಹನಗಳು ಮೂಲೆಗುಂಪಾಗಿದೆ ಎನ್ನಬಹುದು.

Petrol Price Down
Image Credit: Hindustantimes

ವಾಹನ ಹೊಂದಿರುವವರಿಗೆ ಹೊಸ ವರ್ಷಕ್ಕೆ ಕೇಂದ್ರದಿಂದ ಗುಡ್ ನ್ಯೂಸ್
ಮಾರುಕಟ್ಟೆಯಲ್ಲಿ ಇಂಧನ ಚಾಲಿತ ವಾಹನಗಳ ಮಾರಾಟ ಕೂಡ ಕಡಿಮೆಯಾಗುತ್ತ ಬಂದಿದೆ. ಈ ಎಲ್ಲ ಕಾರಣಗಳನ್ನು ಗಮನಿಸಿ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನ ಇಳಿಕೆ ಮಾಡುತ್ತಾ ಎನ್ನುವುದು ವಾಹನ ಮಾಲೀಕರ ಸದ್ಯದ ಕುತೂಹಲವಾಗಿದೆ. ಸದ್ಯ ವಾಹನ ಹೊಂದಿರುವವರಿಗೆ ಹೊಸ ವರ್ಷಕ್ಕೆ ಕೇಂದ್ರದಿಂದ ಇಂಧನದ ವಿಚಾರವಾಗಿ ಗುಡ್ ನ್ಯೂಸ್ ಬರಲಿದೆ. ಪೆಟ್ರೋಲ್, ಡೀಸೆಲ್ ಬೆಲೆಯ ಇಳಿಕೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಯೋಜನೆ ಹೂಡಿದೆ.

ವಾಹನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸುವವರಿಗೆ ಸಿಹಿಸುದ್ದಿ
ಸದ್ಯ ದೇಶದ ಜನತೆಗೆ ಹೊಸ ವರ್ಷದ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ವಿಚಾರವಾಗಿ ಸಿಹಿಸುದ್ದಿಯೊಂದು ಹೊರಬೀಳಲಿದೆ. ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಕೇಂದ್ರದ ಮೋದಿ ಸರ್ಕಾರ ಹೊಸ ಪ್ಲಾನ್ ಹೂಡುತ್ತಿದೆ. ಮುಂದಿನ ಲೋಕಸಭಾ ಚುಬಾವನೆಯ ಸಭೆಯಲ್ಲಿ ಜನರಿಗೆ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲವನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Diesel And Petrol Price Latest
Image Credit: Live Mint

ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ
ಕಚ್ಚಾ ತೈಲ ಬೆಲೆ 52 ವಾರಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ ಸುಮಾರು 6336 ರೂ. ಮತ್ತು WTI ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ ಸುಮಾರು ರೂ. 5,919 ಆಗಿದೆ. ಜಾಗತಿಕ ಬೇಡಿಕೆ ಕಡಿಮೆಯಾದ ಕಾರಣ ಈ ವಾರ ಕಚ್ಚಾ ತೈಲ ಕುಸಿದಿದೆ. ತೈಲೋತ್ಪಾದಕ ದೇಶಗಳ ನಿರಂತರ ಕಡಿತವು ಬೆಲೆಗಳನ್ನು ಹೆಚ್ಚಿಸಲು ಕಚ್ಚಾ ತೈಲ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭವಿಷ್ಯದಲ್ಲಿಯೂ ಕಚ್ಚಾ ತೈಲದ ಬೆಲೆ ಕಡಿಮೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಮುಂದಿನ ವರ್ಷದಲ್ಲಿ ಕಚ್ಚಾ ತೈಲಗಳ ಬೆಲೆಯಲ್ಲಿ ಬಾರಿ ಇಳಿಕೆಯಾಗುವ ಸಾಧ್ಯತೆ ಇದೆ.

Join Nadunudi News WhatsApp Group

Join Nadunudi News WhatsApp Group