Platform Ticket: Platform ನಿಯಮದಲ್ಲಿ ಮತ್ತೆ ಬದಲಾವಣೆ ಮಾಡಿದ ಭಾರತೀಯ ರೈಲ್ವೆ, ಇನ್ನುಮುಂದೆ ಕೊಡಬೇಕು ಹೆಚ್ಚಿನ ಹಣ.

Platform Ticket: ಭಾರತೀಯ ರೈಲ್ವೆ (Indian Railway) ಮತ್ತೆ ತನ್ನ ಪ್ಲಾಟ್ಫಾರ್ಮ್ ಟಿಕೀಟ್ (Platform Ticket) ದರವನ್ನ ಹೆಚ್ಚಳ ಮಾಡಿದೆ. ಹೌದು ಮತ್ತೆ ಟಿಕೆಟ್ ದರವನ್ನ ಹೆಚ್ಚಳ ಮಾಡುವುದರ ಮೂಲಕ ರೈಲಿನಲ್ಲಿ ಪ್ರಯಾಣ ಮಾಡುವ ಜನರಿಗೆ ಬೇಸರದ ಸುದ್ದಿಯನ್ನ ನೀಡಿದೆ ಭಾರತೀಯ ರೈಲ್ವೆ. ಇನ್ನುಮುಂದೆ ರೈಲ್ವೆ ಸ್ಟೇಷನ್ ನಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ಖರೀದಿ ಮಾಡಿದರೆ ಮೂರೂ ಪಟ್ಟು ಹೆಚ್ಚಿನ ಹಣವನ್ನ ಪಾವತಿ ಮಾಡಬೇಕು. ಹಬ್ಬ ಮತ್ತು ಇತರೆ ಸಮಯದಲ್ಲಿ ರೈಲು ನಿಲ್ದಾಣದಲ್ಲಿ ಹೆಚ್ಚಿನ ಜನರು ಕಾಣಿಸಿಕೊಳ್ಳುತ್ತಾರೆ ಮತ್ತು ಅದೇ ರೀತಿಯಲ್ಲಿ ಪ್ರಯಾಣಿಕರ ಬದಲಾಗಿ ಅವರನ್ನ ಡ್ರಾಪ್ ಮಾಡಲು ಬಂದ ಡ್ರೈವರ್ ಮತ್ತು ಅವರ ಮನೆಯವರು ಇರುವ ಕಾರಣ ಈಗ ಭಾರತೀಯ ರೈಲ್ವೆ ತನ್ನ ನಿಯಮದಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದೆ.

ಅದೇ ರೀತಿಯಲ್ಲಿ ರೈಲು ನಿಲ್ದಾಣದಲ್ಲಿ ಜನ ಸಂಖ್ಯೆಯನ್ನ ಕಡಿಮೆ ಮಾಡುವ ಉದ್ದೇಶದಿಂದ ಈಗ ಇಂಡಿಯನ್ ರೈಲ್ವೆ ತನ್ನ ಪ್ಲಾಟ್ಫಾರ್ಮ್ ಟಿಕೆಟ್ ದರವನ್ನ ಹೆಚ್ಚಳ ಮಾಡಿದ್ದು ಇದು ಜನರ ಆಶ್ಚರ್ಯಕ್ಕೆ ಕಾರಣಾವಾಗಿದೆ. ಅದೇ ರೀತಿಯಲ್ಲಿ ಈ ದರ ಹೆಚ್ಚಳ ತಾತ್ಕಾಲಿಕ ಕೂಡ ಆಗಿದ್ದು ಹಬ್ಬಗಳ ನಂತರ ಟಿಕೆಟ್ ದರ ಮೊದಲಿನ ಹಾಗೆ ಇರಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಅಕ್ಟೋಬರ್ 31 ರ ತನಕ ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ಗಳು 10 ರೂಪಾಯಿಯ ಬದಲಾಗಿ 30 ರೂಪಾಯಿ ಆಗಿದ್ದು ಇನ್ನುಮುಂದೆ ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ಖರೀದಿ ಮಾಡುವ ಜನರು ಹೆಚ್ಚಿನ ಹಣವನ್ನ ಕೊಟ್ಟು ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ಖರೀದಿ ಮಾಡಬೇಕಾಗಿದೆ.

Indian railway platform ticket
Image Credit: www.dnaindia.com

ಸದ್ಯ ಇದರ ಕುರಿತಂತೆ ಮಂಗಳವಾರ ಆದೇಶವನ್ನ ಕೂಡ ಹೊರಡಿಸಲಾಗಿದ್ದು ನವದೆಹಲಿ, ಹಳೆಯ ದೆಹಲಿ, ನಿಜಾಮುದ್ದೀನ್, ಆನಂದ್ ವಿಹಾರ್ ಮತ್ತು ಕೆಲವು ಪ್ಲಾಟ್ಫಾರ್ಮ್ ಗಳಲ್ಲಿ ಟಿಕೆಟ್ ದರ ಅಕ್ಟೋಬರ್ ಐದನೇ ತಾರೀಕಿನಿಂದ ಹೆಚ್ಚಳ ಆಗಿದೆ. ಸದ್ಯ ಕರ್ನಾಟಕದಲ್ಲಿ ಯಾವುದೇ ರೀತಿಯಲ್ಲಿ ಏರಿಕೆ ಆಗಿಲ್ಲ. ಕರ್ನಾಟಕ ಮತ್ತು ಬೇರೆಬೇರೆ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಹಬ್ಬ ಮತ್ತು ಇತರೆ ಸಮಯದಲ್ಲಿ ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ದರಗಳು ಹೆಚ್ಚಾಗಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ಇದರ ಕುರಿತು ಮುಂದಿನ ದಿನಗಳಲ್ಲಿ ಅಧಿಕೃತ ಆದೇಶ ಕೂಡ ಹೊರಬರುವ ಸಾಧ್ಯತೆ ಇದ್ದು ಮುಂದಿನ ದಿನಗಳಲ್ಲಿ ರೈಲು ಪ್ಲಾಟ್ಫಾರ್ಮ್ ಗಳಲ್ಲಿ ಸುಮ್ಮನೆ ಟೈಮ್ ಪಾಸ್ ಮಾಡುವವರ ಸಂಖ್ಯೆ ಕಡಿಮೆ ಕೂಡ ಆಗಲಿದೆ. ಈ ನಿಯಮಗಳ ಬಗ್ಗೆ ರೈಲಿನಲ್ಲಿ ಪ್ರಯಾಣ ಮಾಡುವವರು ಮತ್ತು ಪ್ರಯಾಣಿಕರನ್ನ ಡ್ರಾಪ್ ಮಾಡಲು ಬಂದು ರೈಲು ನಿಲ್ದಾಣದಲ್ಲಿ ಟೈಮ್ ಪಾಸ್ ಮಾಡುವ ಜನರು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.

Join Nadunudi News WhatsApp Group

Join Nadunudi News WhatsApp Group