PM Kisan 18th Installment: ಕಿಸಾನ್ 18 ನೇ ಕಂತಿನ ಹಣ ಈ ದಿನದಂದು ಖಾತೆಗೆ ಜಮಾ, ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್.

ಕಿಸಾನ್ 18 ನೇ ಕಂತಿನ ಹಣ ಈ ದಿನದಂದು ಖಾತೆಗೆ ಜಮಾ

PM Kisan 18th Installment Amount Release Date: ದೇಶದ ಅರ್ಹ ರೈತರು ನಾಲ್ಕು ತಿಂಗಳಿಗೊಮ್ಮೆ PM Kisan ಯೋಜನೆಯಡಿ 2000 ರೂ. ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಈ ಯೋಜನೆಯಡಿ 17 ಕಂತುಗಳ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ.

ಸದ್ಯ Kisan ಯೋಜನೆಯಡಿ 18 ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. Kisan 18 ನೇ ಕಂತಿನ ಹಣ ಬಿಡುಗಡೆಯ ದಿನಾಂಕವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಯಾವ ದಿನದಂದು Kisan ಯೋಜನೆಯ 18 ನೇ ಕಂತಿನ ಹಣ ಜಮಾ ಆಗಲಿದೆ ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

PM Kisan 18th Installment Amount Release Date
Image Credit: Informalnewz

ಕಿಸಾನ್ 18 ನೇ ಕಂತಿನ ಹಣ ಈ ದಿನದಂದು ಖಾತೆಗೆ ಜಮಾ
ಕಿಸಾನ್ ಯೋಜನೆಯ ಫಲಾನುಭವಿಗಳು ಸದ್ಯ Kisan ಯೋಜನೆಯ 18 ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಯೋಜನೆಯ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಬಗ್ಗೆ ರೈತರು ಕುತೂಹಲರಾಗಿದ್ದಾರೆ. ಇನ್ನು ಜುಲೈ 18 ರಂದು ಕಿಸಾನ್ ಫಲಾನುಭವಿಗಳು 17 ನೇ ಕಂತಿನ ಹಣವನ್ನು ಪಡೆದಿದ್ದಾರೆ. ಸದ್ಯ ಕೇಂದ್ರ ಸರ್ಕಾರ 18 ನೇ ಕಂತಿನ ಹಣದ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆ. ಜುಲೈ 23 ರಂದು ಕೇಂದ್ರ ಸರ್ಕಾರ 2024 ರ ಬಜೆಟ್ ಅನ್ನು ಘೋಷಣೆ ಮಾಡಿದೆ. ಈ ಬಜೆಟ್ ನಲ್ಲಿ ಸರ್ಕಾರ ಕಿಸಾನ್ ಮೊತ್ತವನ್ನು ಹೆಚ್ಚಿಸುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು.

ಆದರೆ ಸರ್ಕಾರ ಬಜೆಟ್ ನಲ್ಲಿ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕಾರಣಕ್ಕೆ Kisan ಯೋಜನೆಯ ಫಲಾನುಭವಿಗಳು 18 ನೇ ಕಂತಿನ 2000 ರೂ. ಹಣವನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪಡೆಯಲಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ರೈತರ ಖಾತೆಗೆ ನೇರವಾಗಿ 2000 ರೂ. ಜಮಾ ಮಾಡಲಿದೆ. ಇನ್ನು ಕಿಸಾನ್ ಯೋಜನೆಯ ಹಣ ಖಾತೆಗೆ ಜಮಾ ಆಗಲು ಇ -ಕೆವೈಸಿ, ಭೂ ದಾಖಲೆಗಳ ನವೀಕರಣ ಮತ್ತು ನಿಮ್ಮ ಆಧಾರ್ ಕಾರ್ಡ್ ಅನ್ನು NPCI ಗೆ ಲಿಂಕ್ ಮಾಡುವುದು ಅಗತ್ಯವಾಗಿದೆ. ಈ ಕೆಳಗಿನ ಹಂತವನ್ನು ಅನುಸರಿಸುವ ಮೂಲಕ ಕಿಸಾನ್ ಹಣ ಜಮಾ ಆಗಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದು.

PM Kisan 18th Installment Amount
Image Credit: Zeebiz

ಈ ರೀತಿಯಾಗಿ PM Kisan ಯೋಜನೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
•PM-Kisan pmkisan.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿನೀಡಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಬಹುದು.

Join Nadunudi News WhatsApp Group

•ಮುಖಪುಟದಲ್ಲಿ ‘Farmer’s Corner’ ಆಯ್ಕೆಮಾಡಿ.

•ಇದರ ನಂತರ ‘Beneficiary Status’ ಮೇಲೆ ಕ್ಲಿಕ್ ಮಾಡಿ

•ಇದರ ನಂತರ ನೀವು ಡ್ರಾಪ್- ಡೌನ್ ಮೆನುವಿನಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಅಥವಾ ಗ್ರಾಮವನ್ನು ಆಯ್ಕೆ ಮಾಡಬಹುದು.

•ಇದರ ನಂತರ ಸ್ಟೇಟಸ್ ತಿಳಿಯಲು ‘Get Report’ ಮೇಲೆ ಕ್ಲಿಕ್ ಮಾಡಿ ಸುಲಭವಾಗಿ PM Kisan ಯೋಜನೆಯ ಸ್ಟೇಟಸ್ ಪರಿಶೀಲಿಸಿಕೊಳ್ಳಬಹುದು.

PM Kisan 18th Installment
Image Credit: Karnatakatimes

Join Nadunudi News WhatsApp Group