Kisan Amount: ಕಿಸಾನ್ ಫಲಾನುಭವಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್, ಇನ್ನುಮುಂದೆ ಪ್ರತಿ ತಿಂಗಳು ಸಿಗಲಿದೆ ಹಣ.

ಕಿಸಾನ್ ಫಲಾನುಭವಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್

PM Kisan Amount Hike Update: ಸದ್ಯ ಜುಲೈ 23 ರಂದು ಮಂಡನೆಯಾಗಲಿರುವ ಬಜೆಟ್ ಮೇಲೆ ಎಲ್ಲರು ಗಮನ ಹರಿಸುತ್ತಿದ್ದಾರೆ. ಈ ಬಾರಿ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಹಣಕಾಸು ಬಜೆಟ್ ಮಂಡಿಸಿದ ಮೊದಲ ಮಹಿಳಾ ವಿತ್ತ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Kisan Amountಇನ್ನು ಎಲ್ಲ ವರ್ಗದ ಜನರು ಈ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶಗಳನ್ನು ಮೆಚ್ಚಿಸಲು ರೈತರಿಗೆ ಉಡುಗೊರೆಗಳನ್ನು ನೀಡಬಹುದು ಎನ್ನಲಾಗುತ್ತಿದೆ. ಈ ಬಜೆಟ್ ನಲ್ಲಿ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

PM Kisan Samman Nidhi Scheme
Image Credit: cabkgoyal

ಕಿಸಾನ್ ಫಲಾನುಭವಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತುಗಳ ಮೊತ್ತವನ್ನು ಸರ್ಕಾರವು ಗಣನೀಯವಾಗಿ ಹೆಚ್ಚಿಸಬಹುದು ಎಂದು ನಂಬಲಾಗಿದೆ. ಕಂತಿನ ಮೊತ್ತವನ್ನು 6 ಸಾವಿರದಿಂದ 12 ಸಾವಿರಕ್ಕೆ ಹೆಚ್ಚಿಸಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ. ಇದಲ್ಲದೇ ಮೂರು ಕಂತುಗಳಲ್ಲಿ ಹಣ ನೀಡುವ ಬದಲು ರೈತರಿಗೆ ಪ್ರತಿ ತಿಂಗಳು 1000 ರೂ. ನೀಡಬೇಕು ಎಂಬ ಯೋಜನೆಯನ್ನು ಸರಕಾರ ರೂಪಿಸುತ್ತಿದೆ. ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆಯಾದರೆ ರೈತರಿಗೆ ಮಾಸಿಕ ಲಾಭವೂ ಸಿಗುತ್ತದೆ.

ಹಣಕಾಸು ಬಜೆಟ್‌ ನಲ್ಲಿ, ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ಸಂಬಂಧಿಸಿದ ಎಲ್ಲಾ 12 ಕೋಟಿ ರೈತರ ಮೇಲೆ ಕೇಂದ್ರೀಕರಿಸುತ್ತದೆ. ದೇಶಾದ್ಯಂತ ರೈತ ಸಂಘಟನೆಗಳು ಕಂತಿನ ಮೊತ್ತವನ್ನು ಹೆಚ್ಚಿಸುವಂತೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರೂ ಸರಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ಕಾರವು ವಿಭಿನ್ನ ಯೋಜನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದೆ ಎಂದು ನಿರೀಕ್ಷಿಸಲಾಗಿದೆ.

PM Kisan Samman Nidhi Amount Hike
Image Credit: Moneycontrol

ಇನ್ನುಮುಂದೆ ಪ್ರತಿ ತಿಂಗಳು ಸಿಗಲಿದೆ ಹಣ
ಸದ್ಯ  ಸರ್ಕಾರ ಕಿಸಾನ್ ಯೋಜನೆಯಡಿ ವಾರ್ಷಿಕವಾಗಿ ಮೂರು ಕಂತುಗಳ ಬದಲಿಗೆ ಪ್ರತಿ ತಿಂಗಳು 1,000 ರೂ. ಜಮಾ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆಯಂತೆ. ಇದು ಸಂಭವಿಸಿದಲ್ಲಿ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದ ರೈತರಿಗೆ ವಾರ್ಷಿಕ 12,000 ರೂ. ಜಮಾ ಆಗಲಿದೆ.

Join Nadunudi News WhatsApp Group

ಇಲ್ಲಿಯವರೆಗೆ ಸರ್ಕಾರವು ಈ ಯೋಜನೆಯಡಿಯಲ್ಲಿ ತಲಾ 2,000 ರೂಪಾಯಿಯಂತೆ ಮೂರು ಕಂತುಗಳಲ್ಲಿ 6,000 ರೂಪಾಯಿಗಳನ್ನು ವರ್ಗಾಯಿಸುತ್ತದೆ. ಇದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಲಾಭ ಪಡೆಯುತ್ತಾರೆ. ಇನ್ನುಮುಂದೆ ಈ ಯೋಜನೆಯ ಮೊತ್ತವು ದ್ವಿಗುಣಗೊಳ್ಳುತ್ತದೆ. ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಅದೆಷ್ಟೋ ರೈತರು ಹೆಚ್ಚಿನ ಲಾಭವನ್ನು ಪಡೆಯಬಹುದು.

PM Kisan Samman Nidhi Amount
Image Credit: Navbharattimes

Join Nadunudi News WhatsApp Group