PM Kisan: ಮೋದಿ ಸರ್ಕಾರದಿಂದ ರೈತರ ಖಾತೆಗೆ 20 ಸಾವಿರ ಕೋಟಿ ಜಮಾ, ಈ ರೀತಿಯಲ್ಲಿ ಖಾತೆ ಚೆಕ್ ಮಾಡಿಕೊಳ್ಳಿ

ಕಿಸಾನ್ 17 ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯೇ ಎಂದು ಈ ರೀತಿಯಾಗಿ ಪರೀಕ್ಷಿಸಿಕೊಳ್ಳಿ

PM Kisan New Update: ಸದ್ಯ PM Kisan ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಹೊರಬಿದ್ದಿದೆ. ಲೋಕಸಭಾ ಚುನ್ವಣೆಯ ಬಳಿಕ ಮೂರನೇ ಬಾರಿಗೆ ಪ್ರಧಾನಿ ಆದ ಬೆನ್ನಲ್ಲೇ ಮೋದಿ ಅವರು ಮೊದಲನೆಯದಾಗಿ PM Kisan 17 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ.

ರೈತರು 17 ನೇ ಕಂತಿನ ಹಣದ ಬರುವಿಕೆಗಾಗಿ ಕಾಯುತ್ತಿದ್ದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 16 ನೇ ಕಂತು ಫೆಬ್ರವರಿ 28 ರ ಸಂಜೆ ಬಿಡುಗಡೆಯಾಯಿತು. ಸದ್ಯ 17 ನೇ ಕಂತಿನ ಹಣ ಕೂಡ ಬಿಡುಗಡೆಯಾಗಿದೆ. 17 ನೇ ಕಂತಿನ ಹಣ ಬಿಡುಗಡೆಯಾಗಿರುವ ಬಗ್ಗೆ ರೈತರು ಇಂದೇ ಪರಿಶೀಲಿಸಿಕೊಳ್ಳಬಹುದು.

PM Kisan New Update
Image Credit: Samacharjagat

ಮೋದಿ ಸರ್ಕಾರದಿಂದ ರೈತರ ಖಾತೆಗೆ 20 ಸಾವಿರ ಕೋಟಿ ಜಮಾ
ಉತ್ತರ ಪ್ರದೇಶದ ವಾರಣಾಸಿಯ ರೈತ ಸಹೋದರರ ಖಾತೆಗೆ ಪ್ರಧಾನಿ ಜೂನ್ 18 ರಂದು ಕಿಸಾನ್ ಯೋಜನೆಯಡಿ 17 ನೇ ಕಂತಿನ ಹಣವನ್ನು ವರ್ಗಾಯಿಸಿದ್ದಾರೆ. ರೈತರು ತಮ್ಮ ಕೃಷಿ ಸಂಬಂಧಿತ ಕೆಲಸಗಳಲ್ಲಿ ಪಿಎಂ ಕಿಸಾನ್ ಯೋಜನೆಯಿಂದ ಹಣವನ್ನು ಬಳಸಿಕೊಳ್ಳುತ್ತಾರೆ. ಈ ಬಾರಿ ಸುಮಾರು 9.26 ಕೋಟಿ ರೈತರಿಗೆ ಈ ಯೋಜನೆಯಡಿ ಆರ್ಥಿಕ ನೆರವು ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರೈತರ ಖಾತೆಗೆ 20 ಸಾವಿರ ಕೋಟಿ ರೂ. ವರ್ಗಾಯಿಸಲಿದ್ದಾರೆ.

ಇದೀಗ 17 ನೇ ಕಂತಿನ ಹಣ ಜೂನ್ 18 ರಂದು ಬಿಡುಗಡೆ ಆಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ದೇಶದ ರೈತರಿಗೆ ಪ್ರತಿ ವರ್ಷ 6,000 ರೂ. ಅವರ ಖಾತೆಗೆ ಮೂರು ಕಂತುಗಳಲ್ಲಿ ಹಣ ರವಾನೆಯಾಗಲಿದೆ. ಈ ಯೋಜನೆಯು ರೈತರಿಗೆ ತಮ್ಮ ಆದಾಯವನ್ನು ಹೆಚ್ಚಿಸಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಎಲ್ಲ ರೈತರ ಖಾತೆಗೆ ಹಣ ಜಮಾ ಆಗಿದ್ದು, ರೈತರು ತಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ಇಂದೇ ಪರಿಶೀಲಿಸಿಕೊಳ್ಳಬಹುದು. ಹಣ ಜಮಾ ಆಗಿರುವ ಬಗ್ಗೆ ತಿಳಿಯಲು ಈ ಕೆಳಗಿನ ಹಂತವನ್ನು ಅನುಸರಿಸಿ.

Join Nadunudi News WhatsApp Group

PM Kisan New Updates 2024
Image Credit: Naidunia

ಈ ರೀತಿಯಲ್ಲಿ ಖಾತೆ ಚೆಕ್ ಮಾಡಿಕೊಳ್ಳಿ
•ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತುಗಳ ಹಣವನ್ನು ಪರಿಶೀಲಿಸಲು ನೀವು ಮೊದಲು ಅಧಿಕೃತ ಪೋರ್ಟಲ್ pmkisan.gov.in ಗೆ ಭೇಟಿ ನೀಡಿ.

•ಇದರ ನಂತರ, ನೀವು ಕಿಸಾನ್ ಪೋರ್ಟಲ್‌ ಗೆ ಹೋದಾಗ, ನೀವು ಇಲ್ಲಿ ‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.

•ನಂತರ ರೈತರು ಪರದೆಯ ಮೇಲೆ ನೀಡಲಾದ ನೋಂದಣಿ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ.

•ನಂತರ ಮಾಹಿತಿಯನ್ನು ಪಟ್ಟಿ ಮಾಡಿ ಮತ್ತು ನಂತರ ನೀವು “ವಿವರಗಳನ್ನು ಪಡೆಯಿರಿ” ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.

•ಇದರ ನಂತರ ನಿಮ್ಮ ಸ್ಥಿತಿಯು ನಿಮ್ಮ ಮುಂದೆ ತೆರೆಯುತ್ತದೆ.

PM Kisan 17th Installment Credit
Image Credit: ABP Live

Join Nadunudi News WhatsApp Group