ದ್ರುವ ಸರ್ಜಾ ಪೊಗರು ಚಿತ್ರಕ್ಕೆ ಖಡಕ್ ಎಚ್ಚರಿಕೆ ನೀಡಿದ ಪೇಜಾವರ ಶ್ರೀಗಳು, ಅಷ್ಟಕ್ಕೂ ಆಗಿದ್ದೇನು ಗೊತ್ತಾ.

ಕನ್ನಡ ಚಿತ್ರರಂಗ ಮಾತ್ರವಲ್ಲದೆ ಸದ್ಯ ಬೇರೆ ಬೇರೆ ಚಿತ್ರರಂಗದಲ್ಲಿ ಕೂಡ ಭಾರಿ ಸದ್ದು ಮಾಡುತ್ತಿರುವ ಚಿತ್ರ ಅಂದರೆ ಪೊಗರು ಚಿತ್ರವೆಂದು ಹೇಳಿದರೆ ತಪ್ಪಾಗಲ್ಲ. ಹೌದು ದಾಖಲೆಯ ಮೇಲೆ ದಾಖಲೆಯನ್ನ ಮಾಡಿ ಮುನ್ನುಗುತ್ತಿರುವ ಪೊಗರು ಚಿತ್ರ ಸದ್ಯ ಸಿನಿ ವೊಕ್ಷಕರ ಮನವನ್ನ ಗೆದ್ದಿದೆ ಎಂದು ಹೇಳಿದರೆ ತಪ್ಪಾಗಲ್ಲ. ದ್ರುವ ಸರ್ಜಾ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದೆ ಎಂದು ಹೇಳಬಹುದು. ಮೂರೂ ವರ್ಷಗಳಿಂದ ಚಿತ್ರತಂಡ ಚಿತ್ರವನ್ನ ತಯಾರು ಮಾಡಿದ್ದು ಸದ್ಯ ಚಿತ್ರ ಅದ್ದೂರಿಯಾಗಿ ತೆರೆಕಂಡಿದ್ದು ಒಳ್ಳೆಯ ಪ್ರದರ್ಶನವನ್ನ ಕೂಡ ಕಾಣುತ್ತಿದೆ ಎಂದು ಹೇಳಬಹುದು. ಇನ್ನು ಬರಿ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯವರು ಕೂಡ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದು ಇದು ಅಭಿಮಾನಿಗಳು ಹೆಮ್ಮೆ ಪಡುವ ವಿಚಾರ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಈಗ ಜನರಿಗೆ ಶಾಕ್ ಆಗುವಂತೆ ಪೊಗರು ಚಿತ್ರತಂಡಕ್ಕೆ ಪೇಜಾವರ ಶ್ರೀಗಳು ಖಡಕ್ ಎಚ್ಚರಿಕೆಯನ್ನ ನೀಡಿದ್ದು ಸದ್ಯ ಈ ಸುದ್ದಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಹಾಗಾದರೆ ಪೇಜಾವರ ಶ್ರೀಗಳು ಪೊಗರು ಚಿತ್ರಕ್ಕೆ ಎಚ್ಚರಿಕೆಯನ್ನ ಕೊಡಲು ಕಾರಣ ಏನು ಮತ್ತು ಅಷ್ಟಕ್ಕೂ ಆಗಿದ್ದು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇನ್ನು ಕೆಲವು ದಿನಗಳಿಂದ ಪೊಗರು ಚಿತ್ರದ ಮೇಲೆ ಬ್ರಾಹ್ಮಣರು ಕೋಪ ಮಾಡಿಕೊಂಡಿದ್ದು ಚಿತ್ರದಲ್ಲಿ ನಮಗೆ ನಮ್ಮ ಸಮಾಜವನ್ನ ಟೀಕಿಸಲಾಗಿದೆ ಎಂದು ಗಂಭೀರವಾದ ಆರೋಪವನ್ನ ಮಾಡಿದ್ದಾರೆ.

Pogaru and pejavara shrigalu

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯಗಳು ಇದ್ದ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಪೇಜಾವರ ಮಠದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಒಂದು ಸಮಾಜವನ್ನು ಕೆಣಕಿ, ಹಳಿದು ಬದುಕಲು ಸಾಧ್ಯವಿಲ್ಲ, ಯಾರು ನೆಮ್ಮದಿಯಾಗಿ ಬದುಕಲು ಸಾಧ್ಯವಲ್ಲ, ಅವಹೇಳನ ಮಾಡುವ ಕೃತ್ಯ ಇಲ್ಲಿಗೆ ಕೊನೆಯಾಗಲಿ ಮತ್ತು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ಯಾರೂ ಮಾಡಬೇಡಿ ಎಂದು ಪೇಜಾವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಹೌದು ಈ ಚಿತ್ರದಲ್ಲಿ ಕೆಲವು ಸನ್ನಿವೇಶ ಇದ್ದು ಇದು ಬ್ರಾಹ್ಮಣ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದ್ದು ಆ ದೃಶ್ಯವನ್ನ ತೆಗೆದು ಹಾಕಬೇಕು ಎಂದು ಬ್ರಾಹ್ಮಣ ಸಮುದಾಯದವರು ಚಿತ್ರ ತಂಡದಲ್ಲಿ ಹೇಳಿದ್ದರು ಮತ್ತು ಇದನ್ನ ಕೇಳಿದ ಚಿತ್ರದ ನಿರ್ದೇಶಕ ಸದ್ಯ ಕ್ಷಮೆಯಾಚಿಸಿದ್ದು ಚಿತ್ರದಲ್ಲಿನ ಆ ದೃಶ್ಯವನ್ನ ಕಟ್ ಮಾಡುವುದಾಗಿ ಹೇಳಿ ಬ್ರಾಹ್ಮಣ ಸಮುದಾಯದವರ ಮಾತಿಗೆ ಬೆಲೆ ಕೊಟ್ಟಿದ್ದಾರೆ. ಏನೇ ಆಗಲಿ ನಾವು ಇನ್ನೊಂದು ಸಮುದಾಯವರ ಮೇಲೆ ಅವಹೇಳನವಾಗಿ ಮಾತನಾಡುವುದು ತಪ್ಪು ಅನ್ನುವುದು ನಮ್ಮ ಆಶಯ. ಸ್ನೇಹಿತರೆ ಪೊಗರು ಚಿತ್ರದ ಈ ದೃಶ್ಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Pogaru and pejavara shrigalu

Join Nadunudi News WhatsApp Group