Pooja Gandhi: ಚುನಾವಣೆಯಲ್ಲಿ ಸೋತಾಗ ಪೂಜಾ ಗಾಂಧಿಗೆ ಈ ರೀತಿಯಾಗಿ ಹೇಳಿದ ರಮ್ಯಾ, ಕನ್ನಡದಲ್ಲಿ ಪತ್ರ ಬರೆದ ಪೂಜಾ ಗಾಂಧಿ.

ಚುನಾವಣೆಯಲ್ಲಿ ಸೋತಾಗ ರಮ್ಯಾ ಹೇಳಿದ ಮಾತುಗಳನ್ನ ಹೇಳಿಕೊಂಡ ಪೂಜಾ ಗಾಂಧಿ

Pooja Gandhi About Ramya: ಮುಂಗಾರು ಮಳೆ ನಟಿ ಪೂಜಾ ಗಾಂಧಿ (Pooja Gandhi) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟಿವ್ ಆಗಿದ್ದಾರೆ. ನಟಿ ಪೂಜಾಗಾಂಧಿ ಇದೀಗ ತಮ್ಮ ಕನ್ನಡ ಪ್ರೇಮದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

ಈ ನಡುವೆ ನಟಿ ಪೂಜಾ ಗಾಂಧಿ ಸೋಶಿಯಲ್ ಮೀಡಿಯಾದಲ್ಲಿ ಕನ್ನಡದಲ್ಲಿ ಪದ್ಯಗಳನ್ನು ಬರೆದು ಹಂಚಿಕೊಳ್ಳುತ್ತಿದ್ದರು. ನಟಿಯ ಕನ್ನಡ ಪ್ರೇಮವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು. ಇದೀಗ ಪೂಜಾ ಗಾಂಧಿ ಅವರು ರಮೇಶ್ ಅರವಿಂದ್ (Ramesh Aravind)  ಹಾಗೂ ನಟಿ ರಮ್ಯಾ (Ramya) ಅವರಿಗೆ ಕನ್ನಡದಲ್ಲಿ ಪತ್ರ ಬರೆದಿದ್ದಾರೆ.

Actress Pooja Gandhi wrote down the words of actress Ramya when she lost the election and shared it on Instagram.
Image Credit: dailythanthi

ವೀಕೆಂಡ್ ವಿಥ್ ರಮೇಶ್
ಇನ್ನು ಜೀ ವಾಹಿನಿಯಲ್ಲಿ ವೀಕೆಂಡ್ ವಿಥ್ ರಮೇಶ್ ಶೂ (Weekend With Ramesh) ಪ್ರಸಾರವಾಗಲಿದೆ. ಇನ್ನು ಮೊದಲ ಸಾಧಕಿಯಾಗಿ ಕನ್ನಡದ ಮೋಹಕತಾರೆ ರಮ್ಯಾ ಬರಲಿದ್ದಾರೆ. ಈಗಾಗಲೇ ಈ ಶೋ ನ ಶೂಟಿಂಗ್ ಮುಗಿದಿದ್ದು, ವೀಕೆಂಡ್ ವಿಥ್ ರಮೇಶ್ ಪ್ರೋಮೋವನ್ನು ಜೀ ವಾಹಿನಿ ರಿಲೀಸ್ ಮಾಡಿದೆ.

ಈಗಾಗಲೇ ರಮ್ಯಾ ಅವರ ಎಪಿಸೋಡ್ ನ ಸಣ್ಣ ಝಲಕ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ನಟಿ ಪೂಜಾ ಗಾಂಧಿ ಅವರು ರಮ್ಯಾ ಹಾಗೂ ರಮೇಶ್ ಅವರಿಗಾಗಿ ಕನ್ನಡದಲ್ಲಿ ಪತ್ರ ಬರೆದಿದ್ದಾರೆ. ಇದೀಗ ಜಾಲತಾಣದಲ್ಲಿ ಪೂಜಾ ಗಾಂಧಿ ಅವರ ಪತ್ರ ವೈರಲ್ ಆಗುತ್ತಿದೆ.

Actress Pooja Gandhi explained through a letter what Ramya had told me after losing the election
Image Credit: timesofindia.indiatimes

ಕನ್ನಡದಲ್ಲಿ ಪತ್ರ ಬರೆದ ಪೂಜಾ ಗಾಂಧಿ
“ರಮೇಶ್ ಸರ್, ನಿಮ್ಮ ಮತ್ತು ರಮ್ಯಾ ನಡುವೆ ನಡೆಯುವ ಮಾತಿನ ಜುಗಲ್ ಬಂದಿ ನೋಡಲಿಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನು ಕೂಡ ಕಾತುರದಿಂದ ಕಾಯುತ್ತಿದ್ದೇನೆ. ರಮ್ಯಾ ಅದ್ಭುತ ವ್ಯಕ್ತಿ. ಆಕೆ ಸಕತ್ ಬೋಲ್ಡ್. ಮನಸ್ಸಿಗೆ ಅನಿಸ್ಸಿದ್ದನ್ನು ನೇರವಾಗಿ ಹೇಳುತ್ತಾರೆ. ನುಣುಚಿಕೊಳ್ಳುವ ಸ್ವಭಾವ ಅವರದಲ್ಲ.

Join Nadunudi News WhatsApp Group

ನನಗೆ ವೈಯಕ್ತಿಕವಾಗಿ ಆಕೆ ಯಾಕೆ ಇಷ್ಟ ಆಗ್ತಾರೆ, ಚಿತ್ರರಂಗದ ಇತರ ನಟಿಯರ ಬಗ್ಗೆಯೂ ಅವರು ನಿಲುವು ತೆಗೆದುಕೊಳ್ಳುವ ಗುಣ ಅವರಲ್ಲಿದೆ. ಆಕೆಯಲ್ಲಿನ ಆ ಗುಣ ನನಗೆ ತುಂಬಾ ಇಷ್ಟ ಆಗುತ್ತದೆ.

ನನಗೆ ಈಗಲೂ ತುಂಬಾ ಚೆನ್ನಾಗಿ ನೆನಪಿದೆ. ನಾನು ರಾಯಚೂರಿನ ಚುನಾವಣೆಯಲ್ಲಿ ಕೆಟ್ಟದಾಗಿ ಸೋತಾಗ, ರಮ್ಯಾ ಪೂಜಾ ಗಾಂಧಿ ಒಳ್ಳೆ ಪ್ರಯತ್ನ ಎಂದು ಹೇಳಿದ್ದರು. ರಮ್ಯಾ ನಿಮ್ಮ ಪ್ರೊಡಕ್ಷನ್ ಕಂಪನಿಗೆ ಶುಭವಾಗಲಿ, ನಿಮ್ಮ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕನ್ನಡ ಸಿನಿಮಾಗಳು ಮೂಡಿಬರಲಿ” ಎಂದು ನಟಿ ಪೂಜಾ ಗಾಂಧಿ ಕನ್ನಡದಲ್ಲಿ ಪತ್ರ ಬರೆದಿದ್ದಾರೆ.

Join Nadunudi News WhatsApp Group