Kisan Vikas Patra: 50 ಸಾವಿರ ರೂ. ಹೂಡಿಕೆ ಮಾಡಿದ್ರೆ ಸಿಗಲಿದೆ 1 ಲಕ್ಷ ರೂ, ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಸ್ಕೀಮ್

50 ಸಾವಿರ ರೂ. ಹೂಡಿಕೆ ಮಾಡಿದ್ರೆ ಸಿಗಲಿದೆ 1 ಲಕ್ಷ ರೂ

Post Office Kisan Vikas Patra Scheme: ಭಾರತೀಯ ಅಂಚೆ ಇಲಾಖೆಯು ಜನಸಾಮಾನ್ಯರಿಗೆ ಅನೇಕ ಯೋಜನೆಗಳನ್ನು ನೀಡುತ್ತಿದೆ. ಜನಸಾಮಾನ್ಯರು ಅಂಚೆ ಇಲಾಖೆಯ ವಿವಿಧ ಯೋಜನೆಯಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಬ್ಯಾಂಕ್ ನಲ್ಲಿನ ಹೂಡಿಕೆಗಿಂತ ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು.

ನೀವು ಈ ವಿಶೇಷ ಯೋಜನೆಯಲ್ಲಿ ಹೂಡಿಕೆಯನ್ನು ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಈ ಲೇಖನದಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಯೋಜನೆಯಲ್ಲಿ ಹೂಡಿಕೆಯ ಮೇಲೆ ಗ್ಯಾರಂಟಿ ರಿಟರ್ನ್ಸ್ ಲಭ್ಯವಿದೆ. ನಾವೀಗ ಈ ಲೇಖನದಲ್ಲಿ ಅಂಚೆ ಇಲಾಖೆಯ ವಿಶೇಷ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

Post Office Kisan Vikas Patra Scheme
Image Credit: Papertyari

ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಸ್ಕೀಮ್
ನಾವೀಗ ಈ ಲೇಖನದಲ್ಲಿ Kisan Vikas Patra ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಯಾವುದೇ ವಯಸ್ಕರು ಏಕ ಅಥವಾ ಜಂಟಿ ಖಾತೆಯನ್ನು ತೆರೆಯಬಹುದು. ಇದಲ್ಲದೆ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಖಾತೆಗಳನ್ನು ಅವರ ಪೋಷಕರು ತೆರೆಯಬಹುದು.

ಖಾತೆಯನ್ನು ತೆರೆಯುವಾಗ, ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ಪಾಸ್‌ ಪೋರ್ಟ್ ಗಾತ್ರದ ಫೋಟೋ, ಕೆವಿಪಿ ಅರ್ಜಿ ನಮೂನೆ ಮುಂತಾದ ದಾಖಲೆಗಳು ಅಗತ್ಯವಿದೆ. ಅನಿವಾಸಿ ಭಾರತೀಯರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಇನ್ನು KVP ಖಾತೆಯಲ್ಲಿ ಠೇವಣಿ ಮಾಡಿದ ದಿನಾಂಕದಿಂದ 2 ವರ್ಷ 6 ತಿಂಗಳ ನಂತರ ಅವಧಿಪೂರ್ವ ಹಿಂಪಡೆಯುವಿಕೆಯನ್ನು ಮಾಡಬಹುದು. ಅದೇ ಸಮಯದಲ್ಲಿ, ಕೆಲವು ವಿಶೇಷ ಸಂದರ್ಭಗಳಲ್ಲಿ, ಯಾವುದೇ ಸಮಯದಲ್ಲಿ ಪ್ರೀ-ಮೆಚ್ಯೂರ್ ಠೇವಣಿಗಳನ್ನು ಮಾಡಬಹುದು.

Post Office Kisan Vikas Patra
Image Credit: PM Modi Yojana

50 ಸಾವಿರ ರೂ. ಹೂಡಿಕೆ ಮಾಡಿದ್ರೆ ಸಿಗಲಿದೆ 1 ಲಕ್ಷ ರೂ
ಕಿಸಾನ್ ವಿಕಾಸ್ ಪತ್ರದಲ್ಲಿ ನಿಮ್ಮ ಹೂಡಿಕೆಯ ಮೊತ್ತವನ್ನು ದ್ವಿಗುಣಗೊಳಿಸಲು ನೀವು ಸರ್ಕಾರದಿಂದ ಗ್ಯಾರಂಟಿ ಪಡೆಯುತ್ತೀರಿ. ಅಂದರೆ, ಈ ಯೋಜನೆಯಲ್ಲಿ 50000 ರೂಪಾಯಿ ಹೂಡಿಕೆ ಮಾಡಿದರೆ, ನಿಮಗೆ 1 ಲಕ್ಷ ರೂಪಾಯಿ ಮತ್ತು 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 20 ಲಕ್ಷ ರೂಪಾಯಿ ಸಿಗುತ್ತದೆ.

Join Nadunudi News WhatsApp Group

ಹೂಡಿಕೆಯ ಮೊತ್ತದ ಮೇಲೆ ನಿಮಗೆ ಲಾಭ ಸಿಗುತ್ತದೆ. ನೀವು ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಆ ಮೊತ್ತವು 115 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಪ್ರಸ್ತುತ, ಈ ಯೋಜನೆಯಲ್ಲಿ ಶೇಕಡಾ 7.5 ರ ದರದಲ್ಲಿ ಬಡ್ಡಿಯನ್ನು ಪಡೆಯಲಾಗುತ್ತಿದೆ. ಬಡ್ಡಿಯನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

Post Office Kisan Vikas Patra Scheme 2024
Image Credit: Trishulnews

Join Nadunudi News WhatsApp Group