POMIS: ಪೋಸ್ಟ್ ಆಫೀಸ್ ನ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸಿಗಲಿದೆ 9000 ರೂ, ಬೇಗನೇ ಅರ್ಜಿ ಸಲ್ಲಿಸಿ.

ಪತಿ ಪತ್ನಿಯರಿಗಾಗಿಯೇ ಇರುವ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ತಿಂಗಳಿಗೆ 9 ಸಾವಿರ ಪಿಂಚಣಿ ಪಡೆಯಬಹುದಾಗಿದೆ.

Post Office Monthly Income Scheme Latest Update: ಮಧ್ಯಮ ವರ್ಗದ ಜನರಿಗೆ ಅಂಚೆ ಕಚೇರಿಯಲ್ಲಿನ ಮಾಸಿಕ ಹೂಡಿಕೆಯು ಬಹು ಮೊತ್ತದ ಲಾಭವನ್ನು ನೀಡುವ ಮಾರ್ಗವಾಗಿದೆ. ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ ಲಾಭ ಪಡೆಯುವ ಅವಕಾಶ ಇರುತ್ತದೆ. ಅದರಲ್ಲಿ Post Office Monthly Income Scheme (POMIS ) ಕೂಡ ಒಂದಾಗಿದೆ.

POMIS ನಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಪೋಸ್ಟ್ ಆಫೀಸ್ ನ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸಿಗಲಿದೆ 9,000 ರೂ. ಪಿಂಚಣಿಯನ್ನು ಪಡೆಯಬಹುದು. ಮಾಸಿಕ ಆದಾಯ ನೀಡುವ ಯೋಜನೆಯ ಹೂಡಿಕೆಯ ವಿಧಾನದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Post Office Monthly Income Scheme
Image Credit: Informalnewz

Post Office Monthly Income Scheme
ಇನ್ನು Post Office Monthly Income Scheme ಹೂಡಿಕೆದಾರರಿಗೆ ಭದ್ರತೆಯನ್ನು ನೀಡುತ್ತದೆ ಎನ್ನಬಹುದು. ಕಡಿಮೆ ಅಪಾಯದ ಹೂಡಿಕೆಯಲ್ಲಿ ಈ ಯೋಜನೆಯು ಒಂದಾಗಿದೆ. ಪ್ರತಿ ತಿಂಗಳ ಹೂಡಿಕೆಯಲ್ಲಿ ಮೆಚ್ಯುರಿಟಿ ಅವಧಿಯ ನಂತರ ನಿಗದಿತ ಮೊತ್ತವನ್ನು ಪಡೆಯಬಹುದು. ಸ್ಥಿರ ಆದಾಯದ ಯೋಜನೆಗೆ Post Office Monthly Income Scheme ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಇದು ಅಲ್ಪಾವಧಿ ಹಾಗೂ ದೀರ್ಘಾವಧಿಯ ಹೂಡಿಕೆಯಾಗಿದ್ದು ಯೋಜನೆಯ ಅವಧಿಯು 5 ವರ್ಷದ್ದಾಗಿದೆ.

ಪತಿ -ಪತ್ನಿಗಾಗಿ ಅಂಚೆ ಇಲಾಖೆಯ ಯೋಜನೆ
Post Office ಮಾಸಿಕ ಯೋಜನೆಯಡಿ ಗಂಡ ಹಾಗು ಹೆಂಡತಿ ಅಂಚೆ ಕಚೇರಿಯಲ್ಲಿ ಜಂಟಿ ಖಾತೆಯನ್ನು ತೆರೆಯಬೇಕಾಗುತ್ತದೆ (Post Office Joint Account). ಖಾತೆಯನ್ನು ತೆರೆದ ನಂತರ, ನೀವು ಬಡ್ಡಿಯಿಂದ ಮಾತ್ರ ಪ್ರತಿ ತಿಂಗಳು ಉತ್ತಮ ಆದಾಯವನ್ನು ಪಡೆಯುತ್ತೀರಿ. ಪೋಸ್ಟ್ ಆಫೀಸ್ ಈ ಯೋಜನೆಯು ಪತಿ ಪತ್ನಿಯರಿಗೆ ಮಾಸಿಕ ಹಣವನ್ನ ಪಿಂಚಣಿ ರೂಪದಲ್ಲಿ ನೀಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

Post Office Monthly Income Scheme Latest Update
Image Credit: Valueresearchonline

ಪೋಸ್ಟ್ ಆಫೀಸ್ ನ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸಿಗಲಿದೆ 9000 ರೂ.
ಈ ಯೋಜನೆಯಡಿ ಗಂಡ ಹಾಗು ಹೆಂಡತಿ ಇಬ್ಬರೂ  ಜಂಟಿ ಖಾತೆಯನ್ನು ತೆರೆದು ಅದರಲ್ಲಿ ರೂ 15 ಲಕ್ಷವನ್ನು ಠೇವಣಿ ಮಾಡಿದರೆ ನೀವು ಮಾಡಿದ ಈ ಹೂಡಿಕೆಯ ಮೇಲೆ 7.4 ಪ್ರತಿಶತದ ದರದಲ್ಲಿ ರೂ 1,11,000 ವಾರ್ಷಿಕ ಬಡ್ಡಿಯನ್ನು ಪಡೆಯಬಹುದು. ಇನ್ನು ಬಡ್ಡಿಯ ಹಣ ನೀವು ಹೂಡಿಕೆ ಮಾಡಿದ ಹಣದ ಮೇಲೆ ನಿರ್ಧಾರ ಆಗಿರುತ್ತದೆ.

Join Nadunudi News WhatsApp Group

ಈಗ ನೀವು ಅದನ್ನು 12 ತಿಂಗಳುಗಳಲ್ಲಿ ವಿತರಿಸಿದರೆ, ನೀವು ಪ್ರತಿ ತಿಂಗಳು 9,250 ರೂ ಬಡ್ಡಿಯನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ ಮೂರು ಜನರೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಖಾತೆಯಲ್ಲಿ ಪಡೆದ ಬಡ್ಡಿಯನ್ನು ಪ್ರತಿಯೊಬ್ಬ ಸದಸ್ಯರಿಗೂ ಸಮಾನವಾಗಿ ನೀಡಲಾಗುತ್ತದೆ. ನೀವು 3 ವರ್ಷಗಳ ನಂತರ ಹಣವನ್ನು ಹಿಂಪಡೆದರೆ, 1 ಪ್ರತಿಶತವನ್ನು ಕಡಿತಗೊಳಿಸಿದ ನಂತರ ನೀವು ಹಣವನ್ನು ಪಡೆಯುತ್ತೀರಿ ಎನ್ನುವುದು ನೆನಪಿರಲಿ.

Join Nadunudi News WhatsApp Group