Radhika Pandit Birthday Celebration: ಬರ್ತ್ಡೇ ಸೆಲೆಬ್ರೇಶನ್ ಫೋಟೋಗಳನ್ನು ಹಂಚಿಕೊಂಡ ನಟಿ ರಾಧಿಕಾ ಪಂಡಿತ್.

Actress Radhika Pandit Birthday Celebration In Instagram: ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ರಾಧಿಕಾ ಪಂಡಿತ್ (Radhika Pandit) ತಮ್ಮ ಸಾಂಸಾರಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ನಟಿ ತಮ್ಮ ಮದುವೆಯ ಬಳಿಕ ಚಿತ್ರರಂಗದಿಂದ ದೂರ ಇದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಲೇ ಇರುತ್ತಾರೆ.

Actress Radhika Pandit shared photos of her birthday celebrations on Instagram
Image Credit: instagram

ಇನ್ನು ಮಾರ್ಚ್ 7 ರಂದು ರಾಧಿಕಾ ಪಂಡಿತ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ಈ ಬಾರಿ ನಟಿ ಬರ್ತ್ ಡೇ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಇರುವುದಿಲ್ಲ ಎಂದು ಸ್ವತಃ ರಾಧಿಕಾ ಪಂಡಿತ್ ತಿಳಿಸಿದ್ದರು. ತಮ್ಮ ಕುಟುಂಬದ ಜೊತೆಗೆ ನಟಿ ತಮ್ಮ 38 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Actress Radhika Pandit celebrated her birthday with her family
Image Credit: instagram

ಇದೀಗ ನಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬರ್ತ್ಡೇ ಸೆಲೆಬ್ರೆಷನ್ ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ. ಅಭಿಮಾನಿಗಳಿಂದ ಇವರ ಫೋಟೋಗಳಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬರ್ತ್ಡೇ ಸೆಲೆಬ್ರೇಶನ್ ಫೋಟೋಗಳನ್ನು ಹಂಚಿಕೊಂಡ ನಟಿ ರಾಧಿಕಾ ಪಂಡಿತ್

ನಟಿ ರಾಧಿಕಾ ಪಂಡಿತ್ ಅವರು ಈ ಬಾರಿಯ ಹುಟ್ಟುಹಬ್ಬವನ್ನು ಯಶ್ ಹಾಗೂ ತಮ್ಮ ಮಕ್ಕಳಾದ ಐರಾ ಮತ್ತು ಯಥರ್ವ್ ಜೊತೆ ಕೇಕ್ ಕಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಮನೆಯಿಂದ ದೂರ ಇದ್ದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Join Nadunudi News WhatsApp Group

Actress Radhika Pandit cut the birthday cake with her husband and children
Image Credit: instagram

ಯಶ್ ಹಾಗೂ ಕುಟುಂಬದ ಜೊತೆಗಿನ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಧಿಕಾ ಅವರ ತಂದೆ ಮತ್ತು ತಾಯಿ ಕೂಡ ಭಾಗಿಯಾಗಿದ್ದರು. ಎಲ್ಲರ ಜೊತೆಗಿನ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ಚಳಿ, ಕೇಕ್ ಮತ್ತು ಮುದ್ದಾಟ ಎಂದು ಕ್ಯಾಪ್ಷನ್ ಕೊಡುವ ಮೂಲಕ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇವರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group