Rajasthan Govt: ರದ್ದಾಗಲಿದೆ ಈ ಎರಡು ಯೋಜನೆಗಳು, ಜನರಿಗೆ ಆಘಾತ ನೀಡಲು ಮುಂದಾದ ಸರ್ಕಾರ

ಜನರಿಗೆ ಆಘಾತ ನೀಡಲು ಮುಂದಾದ ರಾಜಸ್ತಾನ್ ಸರ್ಕಾರ

Rajasthan Govt Free Mobile Scheme And Free Electricity Scheme: ಸದ್ಯ ರಾಜ್ಯದಲ್ಲಿ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದೆ. ರಾಜ್ಯ ಸರ್ಕಾರ ಜನರಿಗಾಗಿ ಸಾಕಷ್ಟು ಯೋಜನೆಯನ್ನು ಪರಿಚಯಿಸುತ್ತಿದೆ.

ಉಚಿತ ಗ್ಯಾರಂಟಿ ಯೋಜನೆಯ ಅನುಷ್ಠಾನದಿಂದ ಜನರು ಉಚಿತ ಯೋಜನೆಗಳ ಲಾಭ ಪಡೆಯಲು ಸಹಾಯವಾಗುತ್ತಿದೆ. ಆದರೆ ಈಗ ಉಚಿತ ಗ್ಯಾರಂಟಿ ಯೋಜನೆಯನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ನಾವೀಗ ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳೋಣ.

Rajasthan Govt Free Mobile Scheme
Image Credit: 91mobiles

ಜನರಿಗೆ ಆಘಾತ ನೀಡಲು ಮುಂದಾದ ರಾಜಸ್ತಾನ್ ಸರ್ಕಾರ
ಸರ್ಕಾರ ಬದಲಾದಾಗ ಯೋಜನೆಗಳು ಹಾಗೆ ಯೋಜನೆಗಳ ಹೆಸರು ಬದಲಾಗುತ್ತದೆ. ಇದೀಗ ರಾಜಸ್ತಾನದಲ್ಲಿ ಯೋಜನೆಗಳ ಹೆಸರು ಹಾಗೂ ಹಳೆಯ ಯೋಜನೆಯನ್ನು ಮುಚ್ಚುವ ಪ್ರಕ್ರಿಯೆ ನೆಡೆಯುತ್ತಿದೆ. ಹೌದು ಈ ಹಿಂದೆ ರಾಜಸ್ತಾನದಲ್ಲಿ Ashok Gehlot ಸರ್ಕಾರ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ ಫೋನ್ ಯೋಜನೆ ಹಾಗೂ ಉಚಿತ ವಿದ್ಯುತ್ ಅನ್ನು ಜಾರಿಗೊಳಿಸಿತ್ತು. ಈಗ ಈ ಯೋಜನೆಯನ್ನು BJP ಸರ್ಕಾರ ಸಂಪೂರ್ಣವಾಗಿ ಮುಚ್ಚುವುದಾಗಿ ಘೋಷಣೆ ಹೊರಡಿಸಿ ಜನರಿಗೆ ಶಾಕ್ ನೀಡಿದೆ.

ರದ್ದಾಗಲಿದೆ ಈ ಎರಡು ಯೋಜನೆಗಳು
ಜನ್ ಆಧಾರ್ ಕುಟುಂಬಗಳ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸ್ಮಾರ್ಟ್‌ ಫೋನ್ ಯೋಜನೆ ಮತ್ತು ಒಂದು ಜನ್ ಆಧಾರ್‌ ನಿಂದ ಒಂದು ಮನೆಯ ಸಂಪರ್ಕದೊಂದಿಗೆ ವಿದ್ಯುತ್ ಯೋಜನೆಯನ್ನು ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಹೌದು ಜುಲೈ 22 ರಂದು ಭಜನ್ ಲಾಲ್ ಶರ್ಮಾ ನೇತೃತ್ವದ ರಾಜಸ್ಥಾನ ಸರ್ಕಾರವು ಉಚಿತ ಸ್ಮಾರ್ಟ್‌ ಫೋನ್ ಯೋಜನೆಯನ್ನು ಸ್ಥಗಿತಗೊಳಿಸಿದೆ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರವು ಆಗಿನ ಕಾಲಕ್ಕೆ ಪ್ರಾರಂಭಿಸಿದ 100 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಮತ್ತೊಂದು ಕಲ್ಯಾಣ ಯೋಜನೆಯಡಿ ಜನರ ನೋಂದಣಿಯನ್ನು ನಿಲ್ಲಿಸಿದೆ ಎಂದು ಬಿಜೆಪಿ ಸರ್ಕಾರ ಹೇಳಿದೆ. ಹಾಗೆ ಈ ಯೋಜನೆಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದೆ.

Rajasthan Govt Free Mobile Scheme And Free Electricity Scheme
Image Credit: Bhaskar

Join Nadunudi News WhatsApp Group

Join Nadunudi News WhatsApp Group