Actor Rajinikanth: ವ್ಯವಹಾರ ಮಾಡುವವರಿಗೆ ನೋಟಿಸ್ ನೀಡಿದ ರಜಿನಿಕಾಂತ್, ಕಾನೂನು ಕ್ರಮ ಜಾರಿ.

Actor Rajinikanth: ಖ್ಯಾತ ನಟ ರಜನಿಕಾಂತ್ (Rajinikanth) ತಮ್ಮ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ಇದೀಗ ಭಾರತೀಯ ಸಿನಿಮಾ ರಂಗದ ಪ್ರಮುಖ ನಟ ರಜನಿಕಾಂತ್ ಎಚ್ಚರಿಕೆಯ ನೋಟಿಸ್ ಒಂದನ್ನು ನೀಡಿದ್ದಾರೆ.

ಸಾರ್ವಜನಿಕವಾಗಿ ನೋಟಿಸ್ ಜಾರಿ ಮಾಡಿದ ರಜನಿಕಾಂತ್
ಭಾರತೀಯ ಸಿನಿಮಾ ರಂಗದ ಖ್ಯಾತ ನಟ ರಜನಿಕಾಂತ್ ತಮ್ಮ ಹೆಸರನ್ನು ವಾಣಿಜ್ಯ ಬಳಕೆಗೆ ಬಳಸದಂತೆ ಸಾರ್ವಜನಿಕವಾಗಿ ಎಚ್ಚರಿಕೆಯ ನೋಟಿಸ್ ನೀಡಿದ್ದಾರೆ.

Rajinikanth issued a warning notice not to use his name and voice for personal use
Image Credit: instagram

ಕೇವಲ ತಮ್ಮ ಹೆಸರು ಮಾತ್ರವಲ್ಲ, ತಮ್ಮ ಸ್ಟೈಲ್, ಸಿನಿಮಾದ ತುಣುಕು ಧ್ವನಿ ಹಾಗು ಮ್ಯಾನರಿಸಂ ಅನ್ನು ಬಳಸದಂತೆ ಅವರು ಸಾರ್ವಜನಿಕವಾಗಿ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವೇಳೆ ಉಲ್ಲಂಘನೆ ಮಾಡಿದರೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.

Actor Rajnikanth issued a warning notice to businessmen
Image Credit: instagram

ಅಸಮಾಧಾನ ಹೊರ ಹಾಕಿರುವ ರಜನಿಕಾಂತ್
ನಟ ರಜನಿಕಾಂತ್ ಅವರ ಅರಿವಿಗೆ ಬಾರದಂತೆ ಅವರು ಫೋಟೋ, ವಿಡಿಯೋ, ತುಣುಕು, ಧ್ವನಿ ಮತ್ತು ವಿವಿಧ ಸ್ಟೈಲ್ ನ ಚಿತ್ರಗಳನ್ನು ವಾಣಿಜ್ಯ ಬಳಕೆಗಾಗಿ ಬಳಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನಲೆಯಲ್ಲಿ ಇಂಥದೊಂದು ನೋಟಿಸ್ ಅನ್ನು ಅವರು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದಾರೆ.

ರಜನಿಕಾಂತ್ ಅವರ ಪರವಾಗಿ ತೆಗೆದುಕೊಂಡು ಬಳಸುವಂತೆಯೂ ಅವರು ಮನವಿ ಮಾಡಿದ್ದಾರೆ. ಅಲ್ಲದೆ ತಮ್ಮ ಗೌರವಕ್ಕೆ ಧಕ್ಕೆ ತರುವಂತೆ ಕೆಲವು ಕಡೆ ಬಳಕೆ ಆಗಿರುವ ಕುರಿತು ಅವರು ಅಸಮಾಧಾನ ಹೊಸ ಹಾಕಿದ್ದಾರೆ.

Join Nadunudi News WhatsApp Group

He has released such a notice publicly in the background that it has been noticed that he is using photos, videos, clips, sound and images of various styles for commercial use without the knowledge of actor Rajinikanth.
Image Credit: instagram

ಅಮಿತಾಭ್ ಬಚ್ಚನ್ ಹಾದಿ ಹಿಡಿದ ರಜನಿಕಾಂತ್
ಈ ಹಿಂದೆ ಕೂಡ ಇಂತಹದೊಂದು ಸಾರ್ವಜನಿಕ ನೋಟಿಸ್ ಅನ್ನು ಬಾಲಿವುಡ್ (Bollywood) ನಟ ಅಮಿತಾಭ್ ಬಚ್ಚನ್ (Amitabh Bachchan) ಕೂಡ ನೀಡಿದ್ದರು.

ನಾನಾ ಜಾಹೀರಾತುಗಳಲ್ಲಿ ಅಮಿತಾಭ್ ಬಚ್ಚನ್ ಅವರ ಹೆಸರನ್ನು ಬಳಕೆ ಮಾಡಿದ್ದರ ವಿರುದ್ಧ ಕಿಡಿಕಾರಿದ್ದರು. ವಾಣಿಜ್ಯ ಉದ್ದೇಶ ಇಟ್ಟುಕೊಂಡು ಅಮಿತಾಭ್ ಫೋಟೋ, ಧ್ವನಿ ಮತ್ತು ಸಿನಿಮಾದ ತುಣುಕುಗಳನ್ನು ಬಳಸಿದವರು ವಿರುದ್ಧ ಚಾಟಿ ಬೀಸಿದ್ದರು. ಕಾನೂನು ಕ್ರಮಕ್ಕೂ ಅವರು ಮುಂದಾಗಿದ್ದರು. ಇದೀಗ ರಜನಿಕಾಂತ್ ಅದೇ ಹಾದಿಯನ್ನು ಹಿಡಿದಿದ್ದಾರೆ.

Join Nadunudi News WhatsApp Group