ಸಿನಿ ಇಂಡಸ್ಟ್ರಿಯಲ್ಲಿ ಆ ಒಬ್ಬನಿಂದ ನನಗೆ ತೊಂದರೆಯಾಗಿದೆ ಎಂದ ರಕ್ಷಿತ್ ಶೆಟ್ಟಿ, ನೋಡಿ ಸತ್ಯ

ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ ಮತ್ತು ಯುವ ನಿರ್ದೇಶಕ. ಇವರು 6 ಜೂನ್ 1983 ರಂದು ಉಡುಪಿಯಲ್ಲಿ ಜನಿಸಿದರು. ಇವರು ಎನ್.ಎಮ್.ಎ.ಎಮ್.ತಾಂತ್ರಿಕ ಮಹಾವಿದ್ಯಾಲಯದಿಂದ ಇಂಜಿನೀಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ.ಚಿತ್ರರಂಗಕ್ಕೂ ಬರುವ ಮುನ್ನ ಎರಡು ವರ್ಷ ಸಾಫ್ಟವೇರ್ ಉದ್ಯೋಗಿಯಾಗಿ ಕೆಲಸ ಮಾಡಿದ್ದರು.

2010 ರಲ್ಲಿ ತೆರೆಕಂಡ `ನಮ್ ಏರಿಯಾದಲ್ಲೊಂದು ದಿನ’ ಚಿತ್ರದ ಮೂಲಕ ಸಿನಿಪ್ರವೇಶ ಮಾಡಿದರು. ಆದರೆ ರಕ್ಷಿತ್ ಗೆ ಬ್ರೇಕ್ ನೀಡಿದ ಚಿತ್ರ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಕಡಿಮೆ ಬಜೆಟ್ಟಿನಿಲ್ಲಿ ಉತ್ತಮ ಕತೆಯೊಂದಿಗೆ ತಯಾರಾದ ಈ ಚಿತ್ರ ರಕ್ಷಿತ್ ಸಿನಿಜೀವನಕ್ಕೆ ಉತ್ತಮ ಅಡಿಪಾಯ ಹಾಕಿತು.ನಂತರ `ಉಳಿದವರು ಕಂಡಂತೆ ಚಿತ್ರದ ಮೂಲಕ ನಿರ್ದೇಶಕರಾದರು. ಇದುವರೆಗೆ ಕೇವಲ ಎಂಡು ಚಿತ್ರಗಳಲ್ಲಿ ನಟಿಸಿದ್ದರೂ ತಮ್ಮ ವಿಶಿಷ್ಟ ಚಿತ್ರಗಳ ಮೂಲಕ ರಕ್ಷಿತ್ ಕನ್ನಡದ ಬರವಸೆಯ ನಟ ಮತ್ತು ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.Rashmika's Former Boyfriend Replied To Her Tweet !! - Chennai Memes

ನಿರ್ಮಾಪಕನಾಗಿಯೂ ಸಕ್ರಿಯವಾಗಿರುವ ಇವರು `ಕಿರಿಕ್ ಪಾರ್ಟಿ’, `ಹಂಬಲ್ ಪೊಲಿಟಿಶನ್ ನೊಗರಾಜ್’,`777 ಚಾರ್ಲಿ’ ಚಿತ್ರಗಳನ್ನು ನಿರ್ಮಿಸಿದ್ದಾರೆ.ತಮ್ಮ ಕಿರಿಕ್ ಪಾರ್ಟಿ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಜೊತೆ 2017 ಜುಲೈ 3 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಈ ಜೋಡಿ ಬೇರ್ಪಟ್ಟಿತು.

ಸದ್ಯ ಚಾರ್ಲಿ ಎಲ್ಲಾ ಭಾಷೆಗಳಲ್ಲೂ ಕೂಡ ಸಕತ್ ಆಗಿ ರನ್ ಆಗುತ್ತಿದೆ. ಇದರ ನಡುವೆಯೇ ಚಾರ್ಲಿ ಸಿನೆಮಾ 100 ಕೋಟಿ ಗಡಿಯತ್ತ ಸಮೀಪಿಸುತ್ತಿದೆ. ಹೀಗಿರುವಾಗಲೇ ಮಾಧ್ಯಮದ ಜೊತೆ ಸಿನೆಮಾದ ಪ್ರಮೋಷನ್ ಮಾಡುತ್ತಿರುವ ನಟ ರಕ್ಷಿತ್ ಶೆಟ್ಟಿ ಹಲವಾರು ಸಂದರ್ಶನಗಳಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಇದರ ಮಧ್ಯದಲ್ಲೇ ಸಿನಿ ಇಂಡಸ್ಟ್ರಿಯಲ್ಲಿ ತನಗಾಗಿರುವ ನೋವೊಂದನ್ನು ಹಂಚಿಕೊಂಡಿದ್ದಾರೆ.Never Blamed Audience For Ulidavaru And ASN - Netizens In Praise For 'Film  Maker' Rakshith Shetty - MetroSaga

ಅದೇ ಸಮಯದಲ್ಲಿ ಮಾಧ್ಯಮದ ಸಿಬ್ಬಂದಿಯೊಬ್ಬರು, ರಕ್ಷಿತ್ ಹೆಚ್ಚಾಗಿ ತಮ್ಮ ಪ್ರೊಡಕ್ಷನ್ ಸಿನಿಮಾಗಳನ್ನೇ ಮಾಡುತ್ತಿದ್ದಾರೆ, ಬೇರೆ ನಿರ್ಮಾಪಕರ ಯಾವ ಸಿನಿಮಾ ಒಪ್ಪಿಕೊಂಡಿದ್ದೀರಾ ಎಂದು ಕೇಳಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ರಕ್ಷಿತ್ ಶೆಟ್ಟಿ ಅವರು, ಬೇರೆಯವರಿಂದ ನನಗೆ ಅವಕಾಶ ಬರಲ್ಲ. ಬೇರೆ ನಿರ್ಮಾಪಕರು ನನಗೆ ಸಿನಿಮಾ ಮಾಡಲ್ಲ ಎನ್ನುವ ನೋವನ್ನು ಹಂಚಿಕೊಂಡರು .

Join Nadunudi News WhatsApp Group

ಹೌದು ಆ ವ್ಯಕ್ತಿ ಎಂದರೆ ಬೇರಾರು ಅಲ್ಲ ಅದು ನಿರ್ಮಾಪಕ ಮಹಾಶಯ. ಹೌದು ಇದುವರೆಗೂ ರಕ್ಷಿತ್ ಶೆಟ್ಟಿಗೆ ಯಾವ ನಿರ್ಮಾಪಕನು ತಮ್ಮ ಸಿನೆಮಾವನ್ನು ಮಾಡಲು ಮುಂದೆ ಬಂದಿಲ್ಲ. ರಕ್ಷಿತ್ ಶೆಟ್ಟಿ ಸ್ವತಃ ತಮ್ಮ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೌದು ಇಂತಹ ಪ್ರತಿಭಾವಂತ ನಟನಿಗೆ ಯಾವ ನಿರ್ಮಾಪಕನು ತನ್ನ ಸಿನೆಮಾಗೆ ಹಾಕಿಕೊಳ್ಳದಿರುವುದು ಬೇಸರದ ಸಂಗತಿ.

Join Nadunudi News WhatsApp Group