Rishab And Rakshit Shetty: ಜೊತೆಯಾಗಿ ಕಾಣಿಸಿಕೊಂಡ ರಿಷಬ್ ಮತ್ತು ರಕ್ಷಿತ್, ಅಮೂಲ್ಯ ಕ್ಷಣಗಳ ಫೋಟೋಗಳು ವೈರಲ್.

Rakshit Shetty seen with Rishabh Shetty: ಕನ್ನಡದ ಹೆಸರಾಂತ ಸಿನಿಮಾ ಕಿರಿಕ್ ಪಾರ್ಟಿ (Kirik Party) ಯನ್ನು ನಟ ರಿಷಬ್ ಶೆಟ್ಟಿ (Rishab Shetty) ನಿರ್ಮಾಣ ಮಾಡಿದ್ದೂ ರಕ್ಷಿತ್ ಶೆಟ್ಟಿ (Rakshit Shetty) ಈ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಈ ಸಿನಿಮಾ ಅದ್ಬುತ ಯಶಸ್ಸನ್ನು ಕಂಡಿದೆ.

Rakshit Shetty seen with Rishabh Shetty
Image Credit: instagram

ಈ ಸಿನಿಮಾ ಸೆಟ್ ನಲ್ಲಿ ಸ್ನೇಹಿತರಾಗಿದ್ದ ರಿಷಬ್ ಮತ್ತು ರಕ್ಷಿತ್ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾ ಸಕ್ಸಸ್ ಕಂಡ ನಂತರ ರಿಷಬ್ ಶೆಟ್ಟಿ ಸಾಕಷ್ಟು ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ನಟ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾ ಯಶಸ್ಸನ್ನು ಸಂಭ್ರಮಿಸುತ್ತಾ ಇದ್ದಾರೆ.

ರಿಷಬ್ ಶೆಟ್ಟಿ ತನ್ನ ಆಪ್ತ ಸ್ನೇಹಿತ ರಕ್ಷಿತ್ ಜೊತೆ ಸಮಯ ಕಳೆದಿದ್ದಾರೆ. ಇದೀಗ ಈ ಜೋಡಿ ಹೊಸ ಫೋಟೋಗಳು ಸಾಮಾಜಿಕ ಜಾಲತಾಣ (Social Media)ದಲ್ಲಿ ವೈರಲ್ ಆಗಿದೆ.

Rakshit Shetty toured with Rishabh Shetty
Image Credit: instagram

ಮತ್ತೆ ಜೊತೆಯಾದ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ
ಬಹಳ ದಿನಗಳ ನಂತರ ಒಟ್ಟಿಗೆ ಭೇಟಿಯಾಗಿರುವ ರಿಷಬ್ ಶೆಟ್ಟಿ, ರಕ್ಷಿತ್ ಸುಂದರವಾದ ಪೃಕ್ರತಿಯ ನಡುವೆ ಕಾಲ ಕಳೆದಿದ್ದಾರೆ.

ಈ ಫೋಟೋಗಳನ್ನು ರಿಷಬ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅರಣ್ಯದಲ್ಲಿನ ನಿಗೂಢತೆ, ಹರಿಯುವ ನೀರಿನ ಪ್ರಶಾಂತತೆ, ಮಗು ನಗುವ ಧ್ವನಿ, ಜೊತೆಗೆ ನನ್ನ ವಿಶೇಷ ಸ್ನೇಹಿತರು. ಜೀವನದ ಅನೇಕ ಸಣ್ಣ ಸಂತೋಷಗಳು ಎಂದು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

Join Nadunudi News WhatsApp Group

Pramod Shetty and Rakshit Shetty appeared with Rishabh Shetty
Image Credit: instagram

ರಿಷಬ್ ಶೆಟ್ಟಿ ಮುದ್ದು ಮಗು ರಾಧ್ಯ ಜೊತೆ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಮಿಸ್ ಆಗಿದ್ದಾರೆ. ಅವರು ಇದ್ದಿದ್ದರೆ ಚೆನ್ನಾಗಿ ಇರುತಿತ್ತು ಏನು ಕೆಲವರು ಕಮೆಂಟ್ ಮಾಡಿದ್ದಾರೆ.

ರಿಷಬ್ ಶೆಟ್ಟಿ ಮುದ್ದು ಮಗು ರಾಧ್ಯ ಜೊತೆ ರಕ್ಷಿತ್ ಶೆಟ್ಟಿ ಸಮಯ ಕಳೆದಿದ್ದಾರೆ. ಒಂದೇ ಫ್ರೆಮ್ ನಲ್ಲಿ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಶೀತಲ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ.

ಕಳೆದ ತಿಂಗಳು ರಕ್ಷಿತ್ ಶೆಟ್ಟಿ (Rakshith Shetty) ಉಳಿದವರು ಕಂಡಂತೆ ಶೂಟಿಂಗ್ ಮೇಕಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದರು. ರಕ್ಷಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಶೀತಲ್ ಶೆಟ್ಟಿ ಕೂಡ ನಟಿಸಿದರು.

Join Nadunudi News WhatsApp Group