Ration Card Apply: ಒಂದೇ ಮನೆಯಲ್ಲಿದ್ದು ಬೇರೆಬೇರೆ ರೇಷನ್ ಕಾರ್ಡ್ ಇರುವ ಅತ್ತೆ ಸೊಸೆಗೆ ಹೊಸ ನಿಯಮ, ಸರ್ಕಾರದ ಘೋಷಣೆ.

ಒಂದೇ ಮನೆಯಲ್ಲಿದ್ದು ಬೇರೆಬೇರೆ ರೇಷನ್ ಕಾರ್ಡ್ ಮಾಡುವವರಿಗೆ ಹೊಸ ನಿಯಮ.

Ration Card Latest Update: ಸದ್ಯ ರಾಜ್ಯದಲ್ಲಿ Gruha Lakshmi ಹಾಗೂ Anna Bhagya ಯೋಜನೆಗಳಿಗೆ Ration Card ಮುಖ್ಯ ಪುರಾವೆಯಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಪಡಿತರ ಚೀಟಿಯಲ್ಲಿ ಯಾರು ಮುಖ್ಯಸ್ಥೆ ಆಗಿರುತ್ತಾರೋ ಅವರಿಗೆ ಮಾತ್ರ Gruha Lakshmi ಯೋಜನೆಯ ಲಾಭ ದೊರೆಯುತ್ತದೆ. ಈ ವಿಚಾರವಾಗಿ ಅತ್ತೆ ಸೊಸೆ ಬೇರೆ ಬೇರೆ Ration Card ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅಂತವರಿಗೆ ಇದೀಗ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ.

Ration Card Latest Update
Image Credit: Original Source

ಮನೆ ಯಜಮಾನಿಗೆ ಪ್ರತಿ ತಿಂಗಳು 2000
ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದಾಗಿದೆ. ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ 1.26 ಕೋಟಿ ಜನ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 1.10 ಕೋಟಿ ಯಜಮಾನಿಯರ ಖಾತೆಗೆ 2000 ರೂ ಹಣವನ್ನು ಜಮಾ ಮಾಡಲಾಗಿದೆ.

ರಾಜ್ಯದ ಕುಟುಂಬದ ಯಜಮಾನಿಯರಿಗೆ ನೆರವಾಗಿ ಸರ್ಕಾರದಿಂದ ಪ್ರತಿ ತಿಂಗಳು 2,000 ಹಣ ನೀಡಲಾಗುತ್ತಿದೆ. ತಾಂತ್ರಿಕ ಸಮಸ್ಯೆಯ ಕಾರಣ ಅರ್ಹರು ಯೋಜನೆಯಿಂದ ವಂಚಿರಾಗುತ್ತಿದ್ದಾರೆ. ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸೋ ಮೂಲಕ 2000 ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ” ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.

Gruha Lakshmi Latest News
Image Credit: Kannadanews

ಅತ್ತೆ ಸೊಸೆಯರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ
ಇನ್ನು ಪಡಿತರ ಚೀಟಿಯಲ್ಲಿ ಯಾರು ಮುಖ್ಯಸ್ಥೆ ಆಗಿರುತ್ತಾರೋ ಅವರಿಗೆ ಮಾತ್ರ Gruha Lakshmi ಯೋಜನೆಯ ಲಾಭ ದೊರೆಯುತ್ತದೆ. Ration Card ಮುಖ್ಯಸ್ಥೆ ಅತ್ತೆ ಆಗಿರಬೇಕೋ ಅಥವಾ ಸೊಸೆ ಆಗಿರಬೇಕೋ ಎನ್ನುವುದನ್ನು ಮನೆಯವರೇ ನಿರ್ಧರಿಸಬೇಕಾಗುತ್ತದೆ. ಒಂದು ಪಡಿತರ ಚೀಟಿಯ ಆಧಾರ ಮೇರೆಗೆ ಕೇವಲ ಒಬ್ಬರಿಗೆ ಮಾತ್ರ ಈ Gruha Lakshmi ಯೋಜನೆಯ ಲಾಭ ದೊರೆಯುತ್ತದೆ.

Join Nadunudi News WhatsApp Group

ಇದಕ್ಕೆ ಪರ್ಯಾಯ ಮಾರ್ಗವೆಂಬಂತೆ ಅತ್ತೆ ಸೊಸೆ ಇಬ್ಬರು ಪ್ರತ್ಯೇಕವಾಗಿದ್ದೇವೆ ಎಂದು ಹೊಸ Ration Card ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅಂತವರಿಗೆ ಪ್ರತ್ಯೇಕ Ration Card ನೀಡದಂತೆ ಆದೇಶ ಹೊರಡಿಸಲು ಆಹಾರ ಇಲಾಖೆ ಮುಂದಾಗಿದೆ. ಈ ಮೂಲಕ ಪ್ರತ್ಯೇಕ Ration Card ನಿರೀಕ್ಷೆಯಲ್ಲಿದ್ದು 2000 ಹಣ ಪಡೆಯುವ ಖುಷಿಯಲ್ಲಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.

Join Nadunudi News WhatsApp Group