Ration Card Renewal: ಮೊಬೈಲ್ ಮೂಲಕ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ…? ಇಲ್ಲಿದೆ ಡೀಟೇಲ್ಸ್

ಮೊಬೈಲ್ ಮೂಲಕ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾನ.

Ration Card Renewal Online: ದೇಶದಲ್ಲಿನ ಜನರಿಗೆ ಪಾನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಮತ್ತು ಪಡಿತರ ಚೀಟಿ ಮುಖ್ಯ ದಾಖಲೆಯಾಗಿದೆ. ಪಡಿತರ ಚೀಟಿ ಬಡ ಜನರಿಗೆ ತುಂಬ ಪ್ರಯೋಜನಕಾರಿಯಾಗಿದೆ. ಪಡಿತರ ಚೀಟಿಗೆ ಸರ್ಕಾರ ಉಚಿತ ಪಡಿತರನ್ನು ನೀಡಲು ಶ್ರಮಿಸುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಗೊಳಿಸಿದ ಉಚಿತ ಯೋಜನೆಗಳ ಲಾಭ ಪಡೆಯಲು ಸಹ ರೇಷನ್ ಕಾರ್ಡ್ ಅತಿ ಮುಖ್ಯವಾಗಿದೆ. ಕಾಲಕಾಲಕ್ಕೆ ಆಗುವ ರೇಷನ್ ಕಾರ್ಡ್ ನ ತಿದ್ದುಪಡಿಯ ಬಗ್ಗೆ ನೀವು ತಿಳಿದಿರಬೇಕಾಗುತ್ತದೆ. ಇಲ್ಲವಾದರೆ ಸರ್ಕಾರದಿಂದ ಸಿಗುವ ಪ್ರಯೋಜನಗಳನ್ನು ಪಡೆಯಲು ಸಾದ್ಯವಾಗುದಿಲ್ಲ.

Ration Card Renewal Online
Image Credit: Original Source

ಪಡಿತರ ಚೀಟಿ ತಿದ್ದುಪಡಿ ಆರಂಭ
ರೇಷನ್ ಕಾರ್ಡ್ ಹೊಂದಿರುವ ಎಲ್ಲ ಜನರು ಪಡಿತರ ಚೀಟಿ e-kyc ಮಾಡುದು ಕಡ್ಡಾಯವಾಗಿದೆ. e-kyc ಮಾಡದ ಪಡಿತರ ಚೀಟಿಯನ್ನು ರದ್ದು ಮಾಡುದಾಗಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದೀಗ ಛತ್ತೀಸ್ ಗಢ ರಾಜ್ಯದಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಅನುಮತಿ ನೀಡಿದೆ. ಹೌದು ಛತ್ತೀಸ್ ಗಢ ರಾಜ್ಯದ ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ 76.94 ಲಕ್ಷ ಪಡಿತರ ಚೀಟಿಗಳ ನವೀಕರಣ ಅಭಿಯಾನವು ಜನವರಿ 25 ರಿಂದ ಪ್ರಾರಂಭವಾಗಲಿದೆ.

ಮತ್ತು ಫೆಬ್ರವರಿ 29 ರೊಳಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಮಾರ್ಗಸೂಚಿಯನ್ನು ಹೊರಡಿಸಿದೆ. ಅಂದರೆ ಈ ಕೆಲಸ ಒಂದು ತಿಂಗಳ ಕಾಲ ನಡೆಯಲಿದೆ. ಪಡಿತರ ಚೀಟಿ ನವೀಕರಣಕ್ಕಾಗಿ APL ಕಾರ್ಡ್ ಹೊಂದಿರುವವರು 10 ರೂಪಾಯಿ ಪಾವತಿಸಬೇಕಾಗುತ್ತದೆ. ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪಡಿತರ ಚೀಟಿ ನವೀಕರಣ ಉಚಿತವಾಗಿರುತ್ತದೆ.

Ration Card Amendment
Image Credit: Krishijagran

ಮೊಬೈಲ್ ಮೂಲಕ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ…?
ರಾಜ್ಯದಲ್ಲಿ ಆಹಾರ ಅಂಚೆಚೀಟಿಗಳನ್ನು ನವೀಕರಿಸಲು ಆಹಾರ ಇಲಾಖೆಯು ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಪಡಿತರ ಚೀಟಿದಾರರು ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಪಡಿತರ ಚೀಟಿ ನವೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುವುದು. ಈ ಆಪ್ ಅನ್ನು ಡೌನ್ಲೋಡ್ ಮಾಡಲು http://khadya.cg.nic.in/ ಗೆ ಭೇಟಿನೀಡಬೇಕು.

Join Nadunudi News WhatsApp Group

Join Nadunudi News WhatsApp Group