Co-operative Banks Licence: ಈ ಬ್ಯಾಂಕಿನ ಲೈಸನ್ಸ್ ರದ್ದು ಮಾಡಿದ RBI, ಹಣ ಇಟ್ಟವರು ಸಂಕಷ್ಟದಲ್ಲಿ

ಈ ಬ್ಯಾಂಕ್ ಗಳ ಲೈಸನ್ಸ್ ರದ್ದು ಮಾಡಿದ RBI

RBI Cancelled Licence Of  Two Co-operative Banks: ಪ್ರಸ್ತುತ ದೇಶದಲ್ಲಿ Reserve Bank of India 2023 ರಿಂದ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. RBI 2023 ರಲ್ಲಿ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಲೈಸನ್ಸ್ ಅನ್ನು ರದ್ದುಗೊಳಿಸಿರುವ ಬಗ್ಗೆ ಮಾಹಿತಿ ತಿಳಿದೇ ಇದೆ. ಸದ್ಯ RBI 2024 ರಲ್ಲಿಯೂ ಕೂಡ ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಪಡಿಸುತ್ತಲೇ ಇದೆ.

ಬಂಡವಾಳ ಮತ್ತು ಗಳಿಕೆಯ ಕೊರತೆಯ ಕಾರಣ RBI ಈಗಾಗಲೇ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ. ನಿಯಮ ಉಲ್ಲಂಘನೆ ಮಾಡುತ್ತಿರುವ ಬ್ಯಾಂಕ್ ಗಳ ವಿರುದ್ಧ RBI ಕಠಿಣ ಕ್ರಮ ಕೈಗೊಳ್ಳುತ್ತಿದೆ. ಸದ್ಯ ದೇಶದ ಈ ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು RBI ರದ್ದು ಮಾಡಿದೆ.

RBI Cancelled Licence Of  Two Co-operative Banks
Image Credit: Currentaffairs.adda247

ಈ ಬ್ಯಾಂಕ್ ಗಳ ಲೈಸನ್ಸ್ ರದ್ದು ಮಾಡಿದ RBI
ಸದ್ಯ RBI ಆಂಧ್ರಪ್ರದೇಶದ ಉರವಕೊಂಡದಲ್ಲಿರುವ ಉರವಕೊಂಡ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್‌ನ ಪರವಾನಗಿ ಹಾಗೂ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಯಶವಂತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಪರವಾನಗಿಯನ್ನು RBI ರದ್ದುಗೊಳಿಸಿದೆ. ಕಠಿಣ ಕ್ರಮ ಕೈಗೊಂಡಿರುವ RBI ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ಗೆ 5 ಲಕ್ಷ ರೂ.ವರೆಗೆ ದಂಡ ವಿಧಿಸಿದೆ.

ಕಾರಣ…?
ಮೇ 31 ರಂದು ತನಿಖೆ ನಡೆಸಿದಾಗ ಈ ಬ್ಯಾಂಕ್ ಗಳು ಹಲವು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಆದಾಯ, ಆಸ್ತಿ ವಿವರಗಳನ್ನು ನಿರ್ವಹಿಸಲು ಮತ್ತು ಪ್ರಾವಿಷನ್ ಬೋರ್ಡ್‌ಗೆ ಲಿಂಕ್ ಮಾಡಲಾದ ಕೆಲವು ಖಾತೆಗಳನ್ನು ಕಾರ್ಯಗತಗೊಳಿಸಲು ಬ್ಯಾಂಕ್ ವಿಫಲವಾಗಿದೆ. ನಿಗದಿತ ಅವಧಿಗೆ ಅನುಗುಣವಾಗಿ ಗ್ರಾಹಕರ ಭೇಟಿಗಳ ವಿವರಗಳನ್ನು ಒದಗಿಸಲು ವಿಫಲವಾಗಿದೆ. ಹಾಗೆ ಬ್ಯಾಂಕ್ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ಸಾಮರ್ಥ್ಯವನ್ನು ಹೊಂದಿಲ್ಲದ ಕಾರಣ RBI ಈ ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಗೊಳಿಸಿದೆ.

RBI Latest News Update
Image Credit: Hindustantimes

Join Nadunudi News WhatsApp Group

Join Nadunudi News WhatsApp Group