RBI: ಮುಂದಿನ ಆದೇಶದವರೆಗೂ ಈ ಬ್ಯಾಂಕಿನಿಂದ 50 ಸಾವಿರಕ್ಕಿಂತ ಹೆಚ್ಚಿನ ಹಣ ತಗೆಯುವಂತಿಲ್ಲ, RBI ಆದೇಶ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕಿನ ಗ್ರಾಹಕರಿಗೆ ಹಣ ಪಡೆದುಕೊಳ್ಳುವಂತಹ ಲಿಮಿಟ್ ಅನ್ನು ಫಿಕ್ಸ್ ಮಾಡಿದೆ.

RBI Guidelines: ನಮ್ಮ ಹಣವನ್ನು ಸುರಕ್ಷಿತವಾಗಿಡಲು ಹಾಗೂ ಅದಕ್ಕೆ ಬಡ್ಡಿಯನ್ನು ಒದಗಿಸಲು ಬ್ಯಾಂಕ್ ಇದೆ. ಹಾಗೆಂದ ಮಾತ್ರಕ್ಕೆ ಯಾವಾಗ ಬೇಕಾದರೂ ಎಷ್ಟು ಬೇಕಾದರೂ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಡಲು ಸಾಧ್ಯವಿಲ್ಲ. ಯಾವ ಖಾತೆಯಲ್ಲಿ ಎಷ್ಟು ಹಣ ಇಡಬಹುದು ಮತ್ತು ಒಂದು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಹಣವನ್ನು ವಾಪಸ್ ತೆಗೆಯಬಹುದು ಎಂಬುದಕ್ಕೆ ಬ್ಯಾಂಕ್ ಹಾಗೂ ಆರ್ ಬಿಐ ಮಾಡಿದ ನಿಯಮಗಳಿವೆ.

ಇತ್ತೀಚಿನ ಜೀವನದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನುವುದು ಎಲ್ಲರ ಜೀವನದಲ್ಲಿಯೂ ಸಾಕಷ್ಟು ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ವಿಶೇಷವಾಗಿ ಇದೊಂದು ಬ್ಯಾಂಕಿನ ಆರ್ಥಿಕ ಸಮಸ್ಯೆಗಳ ಕಾರಣದಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India)ಈ ಬ್ಯಾಂಕಿನ ಗ್ರಾಹಕರಿಗೆ ಹಣ ಪಡೆದುಕೊಳ್ಳುವಂತಹ ಲಿಮಿಟ್ ಅನ್ನು ಫಿಕ್ಸ್ ಮಾಡಿದೆ. 

RBI Guidelines
Image Credit: Economictimes

ಈ ಬ್ಯಾಂಕ್ ನಿಂದ 50000 ಕ್ಕಿಂತ ಹೆಚ್ಚಿನ ಹಣ ತೆಗೆಯುವಂತಿಲ್ಲ
ಒಂದು ವೇಳೆ ನಿಮ್ಮ ಖಾತೆ ಕೂಡ ಈ ಬ್ಯಾಂಕ್ ನಲ್ಲಿದ್ದರೆ ತಪ್ಪದೆ ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಿ. ಬೆಂಗಳೂರು ಸ್ಟೇಟ್ ನ ಮುಖ್ಯ ಶಾಖೆಯಾಗಿರುವಂತಹ ನ್ಯಾಷನಲ್ ಕಾರ್ಪೊರೇಟಿವ್ ಬ್ಯಾಂಕ್ ಕುರಿತಂತೆ ವಿಶೇಷವಾದ ಆದೇಶವನ್ನು ನೀಡಿರುವಂತಹ RBI ಮುಂದಿನ ಆದೇಶದವರಿಗೂ ಕೂಡ 50,000ಗಳಿಗಿಂತ ಹೆಚ್ಚಿನ ಹಣವನ್ನು ಬ್ಯಾಂಕಿನಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ನಿಯಮವನ್ನು ಹೇರಿದೆ.

ಈ ಬ್ಯಾಂಕಿನ ಯಾವುದೇ ಬ್ರಾಂಚಿನಲ್ಲಿ ಕೂಡ ಇದೇ ನಿಯಮವನ್ನು ಪಾಲಿಸಬೇಕು ಎನ್ನುವುದಾಗಿ ಕಟ್ಟುನಿಟ್ಟಿನ ಆದೇಶವನ್ನು ನೀಡಿದ್ದು ಮುಂದಿನ ಆದೇಶದವರಿಗೂ ಕೂಡ ಇದೇ ನಿಯಮ ಮುಂದುವರೆಯಲಿದ್ದು ನಿಮ್ಮ ಬ್ಯಾಂಕಿನ ಖಾತೆಯಲ್ಲಿ ಎಷ್ಟೇ ಹಣ ಇದ್ದರೂ ಕೂಡ ಇದೇ ನಿಯಮ ಪ್ರತಿಯೊಬ್ಬರಿಗೂ ಕೂಡ ಅನ್ವಯಿಸುತ್ತದೆ ಎಂಬುದಾಗಿ ಹೇಳಿದೆ.

ಆರು ತಿಂಗಳುಗಳ ಕಾಲ ಈ ನಿಯಮ ಜಾರಿಗೆ ಇರಲಿದ್ದು ಯಾವುದೇ ಹೊಸ ಲೋನ್ ಗಳನ್ನು ಕೂಡ ನೀವು ಪಡೆದುಕೊಳ್ಳಲು ಸಾಧ್ಯವಿಲ್ಲ ಹಾಗೂ ಇರುವಂತಹ ಲೋನ್ ಗಳನ್ನು ಕೂಡ ನವೀಕರಣ ಮಾಡಲು ಕೂಡ ಸಾಧ್ಯವಿಲ್ಲ ಎಂಬುದಾಗಿ ಹೇಳಿದೆ.

Join Nadunudi News WhatsApp Group

RBI new rule for national co-operative bank
Image Credit: Currentaffairs

ಈ ಮೂಲಕ ಕೇವಲ ಹಣ ಪಡೆಯುವವರು ಮಾತ್ರವಲ್ಲ ಲೋನ್ ಪಡೆದುಕೊಂಡವರು ಹಾಗೂ ಪಡೆದುಕೊಳ್ಳುವವರೆಗೂ ಕೂಡ ಈ ಬ್ಯಾಂಕಿನಲ್ಲಿ ಆಪತ್ತು ಹೆಚ್ಚಾಗಿದೆ. ಯಾವುದೇ ರೀತಿಯ ಹೊಸ ಹೂಡಿಕೆಗಳನ್ನು ಕೂಡ ಈ ಬ್ಯಾಂಕಿನಲ್ಲಿ ಮಾಡಲು ಸಾಧ್ಯವಿಲ್ಲ. ಇಟ್ಟಿರುವಂತಹ ಹಣದಲ್ಲಿ ಯಾವುದಾದರೂ ಆಸ್ತಿ ಅಥವಾ ಯಾವುದೇ ವಸ್ತುಗಳನ್ನು ಖರೀದಿಸಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ಈ ಬ್ಯಾಂಕಿನ ಗ್ರಾಹಕರಲ್ಲಿ ನಿರ್ಮಾಣವಾಗಿದೆ.

RBI ಕಠಿಣ ನಿಯಮಗಳನ್ನು ಈ ಬ್ಯಾಂಕಿನ ಮೇಲೆ ಹೇಳಿರುವ ನೋಟವನ್ನು ನೋಡಿರುವಂತಹ ಗ್ರಾಹಕರು ಬಹುಶಃ ಈ ಬ್ಯಾಂಕಿನ ಲೈಸೆನ್ಸ್ ಅನ್ನು ರದ್ದು ಮಾಡುತ್ತಿರಬಹುದು ಎಂಬುದಾಗಿ ಭಾವಿಸಿದ್ದಾರೆ ಆದರೆ ಈ ಬ್ಯಾಂಕಿನ ಲೈಸೆನ್ಸ್ ಅನ್ನು ರದ್ದು ಮಾಡಿಲ್ಲ, ಬದಲಾಗಿ ಕೆಲವು ನಿಯಮಗಳನ್ನು ವಿಧಿಸಿದೆ ಅಷ್ಟೇ.

ಕೇವಲ ಅದರ ಹಾಳಾಗಿರುವಂತಹ ಆರ್ಥಿಕ ವ್ಯವಸ್ಥೆಯನ್ನು ಸರಿ ಮಾಡುವ ನಿಟ್ಟಿನಲ್ಲಿ ಈ ನಿಯಮವನ್ನು ಜಾರಿಗೆ ತಂದಿದ್ದು ಒಮ್ಮೆ ಸರಿಯಾದ ನಂತರ ಮತ್ತೆ ಪುನಃ ಉತ್ತಮ ಸ್ಥಿತಿಗೆ ಇದು ಬರಲಿದೆ. ಯಾವುದಾದರೂ ಬ್ಯಾಂಕ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದಾಗ ಆರ್ ಬಿ ಐ ಜನರನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತದೆ.

Join Nadunudi News WhatsApp Group