Bank Account Rules: ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದವರಿಗೆ ಹೊಸ ನಿಯಮಗಳನ್ನು ಹೊರಡಿಸಿದ RBI.
Bank Account Rules From RBI: ಹೊಸ ವರ್ಷದಂದು ಅನೇಕ ನಿಯಮಗಳು ಬದಲಾಗುತ್ತಲೇ ಇದೆ. ಅದರಲ್ಲೂ ಅನೇಕ ಬ್ಯಾಂಕ್ ಗಳಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತಿವೆ. ಇದೀಗ ಆರ್ ಬಿಐ (Reserve Bank Of India) ಗ್ರಾಹಕರಿಗೆ ಹೊಸ ಸುದ್ದಿ ನೀಡಿದೆ. ಯಾರಾದರೂ ಒಂದಕ್ಕಿಂದ ಹೆಚ್ಚು ಖಾತೆಗಳನ್ನು ಹೊಂದಿದವರಿಗೆ ಹೊಸ ಮಾರ್ಗ ಸೂಚಿಯನ್ನು ಆರ್ ಬಿಐ ಹೊರಡಿಸಿದೆ.
![RBI has implemented new rules for those who have more than one bank account](https://nadunudi.in/wp-content/uploads/2023/01/RBI-new-rules-update.jpg)
ಹೊಸ ನಿಯಮ ಜಾರಿಗೆ ತಂದ ಆರ್ ಬಿಐ
ಸಾಮಾನ್ಯವಾಗಿ ಎಲ್ಲರು ಬ್ಯಾಂಕ್ ಖಾತೆಯನ್ನು (Bank Account) ಹೊಂದಿರುತ್ತಾರೆ. ಆದರೆ ಕೆಲವರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುತ್ತಾರೆ. ಇದೀಗ ಆರ್ ಬಿಐ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದವರಿಗೆ ಹೊಸ ನಿಯಮವನ್ನು ಜಾರಿಗೆ ತರಲು ಯೋಜಿಸುತ್ತಿದೆ.
ಖಾತೆ ತೆರೆಯಲು ಇಲ್ಲ ಯಾವುದೇ ಮಿತಿ
ಗ್ರಾಹಕರಿಗೆ ಬ್ಯಾಂಕ್ ಗಳು ಖಾತೆಯನ್ನು ತೆರೆಯಲು ಯಾವುದೇ ಮಿತಿಯನ್ನು ನಿಗದಿ ಪಡಿಸಿಲ್ಲ. ಒಂದು ಖಾತೆಯನ್ನು ತೆಗೆದ ನಂತರ ಮತ್ತೊಂದು ಖಾತೆಯನ್ನು ಸುಲಭವಾಗಿ ತೆರೆಯುತ್ತಿದ್ದರೆ. ಆದರೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಖಾತೆಗಳನ್ನು ಇಟ್ಟುಕೊಳ್ಳುದರಿಂದ ಗ್ರಾಹಕರು ಹಲವಾರು ಸಾಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
![RBI has mentioned some rules for those who have more than one bank account](https://nadunudi.in/wp-content/uploads/2023/01/bank-account-info.jpg)
ಗ್ರಾಹಕರು ಎಷ್ಟೇ ಬ್ಯಾಂಕ್ ಖಾತೆಯನ್ನು ಹೊಂದಿದ್ದರು ಕೂಡ ಮಿನಿಮಂ ಬ್ಯಾಲೆನ್ಸ್ ಅನ್ನು ಹೊಂದಿರಲೇಬೇಕು. ಅದರ ಜೊತೆಗೆ ನಿಮ್ಮಲ್ಲಿ ಯಾವುದೇ ರೀತಿಯ ಕ್ರೆಡಿಟ್ ಕಾರ್ಡ್ (Credit Card) ಅಥವಾ ಡೆಬಿಟ್ ಕಾರ್ಡ್ (Debit Card) ಇದ್ದಲ್ಲಿ ಅದಕ್ಕೂ ಪ್ರತ್ಯೇಕವಾಗಿ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಹೀಗಾಗಿ ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಖಾತೆ ತೆರೆದಿದ್ದರೆ ನಿಮಗೆ ಇದರಿಂದಾಗಿ ಸಾಕಷ್ಟು ನಷ್ಟವಾಗುತ್ತದೆ.
ಬ್ಯಾಂಕ್ ಗೆ ಪಾವತಿಸಬೇಕು ದಂಡ
ಹೌದು ಗ್ರಾಹಕರು ಒಂದು ವೇಳೆ ಖಾತೆ ತೆರೆಯುವ ಮುನ್ನ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಇಲ್ಲದಿದ್ದರೆ ನೀವು ದಂಡ ಪಾವತಿಸಬೇಕಾಗುತ್ತದೆ.
![RBI said that opening more bank accounts will lead to problems](https://nadunudi.in/wp-content/uploads/2023/01/bank-account-rules.jpg)
ಕೆಲವು ಬ್ಯಾಂಕ್ ಗಳಲ್ಲಿ 5,000 ರೂ. ಇನ್ನು ಕೆಲವು ಬ್ಯಾಂಕ್ ಗಳಲ್ಲಿ 10,000 ರೂವರೆಗೆ ನೀವು ದಂಡವನ್ನು ಪಾವತಿಸಬೇಕಾಗುತ್ತದೆ. ಇದು ನಿಮ್ಮ CIBIL ಸ್ಕೋರ್ ಮೇಲು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ಇದಕ್ಕಾಗಿ ನೀವು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದರೆ ಹೆಚ್ಚಿನ ಖಾತೆಯನ್ನು ಮುಚ್ಚಿ ಎಂದು ಆರ್ ಬಿಐ ಮಾರ್ಗ ಸೂಚಿಯನ್ನು ಹೊರಡಿಸಿದೆ. ಹೆಚ್ಚುವರಿ ಖಾತೆಯನ್ನು ಮುಚ್ಚಲು ನೀವು ನಿಮ್ಮ ಬ್ಯಾಂಕ್ ಗೆ ಹೋಗಿ ಖಾತೆ ಕ್ಲೋಸ್ ಮಾಡುವ ಫಾರಂ ಅನ್ನು ಭರ್ತಿ ಮಾಡಿದರೆ ನಿಮ್ಮ ಹೆಚ್ಚುವರಿ ಖಾತೆಗಳು ಮುಚ್ಚುತ್ತವೆ.