RBI Regulation On Coins: ನಾಣ್ಯಗಳ ಕುರಿತಂತೆ ಹೊಸ ನಿಯಮ ಜಾರಿಗೆ ತಂದ RBI, ನಕಲಿ ನಾಣ್ಯಗಳ ಚಲಾವಣೆ ಇಲ್ಲ.

RBI New Rule on Counterfeit Coins: ಇದೀಗ ದೇಶದೆಲ್ಲೆಡೆ ನಕಲಿ ನೋಟು ಹಾಗು ನಾಣ್ಯಗಳ ಚಲಾವಣೆ ಕಂಡು ಬರುತ್ತಿದೆ. ನೋಟ್ ಬ್ಯಾನ್ ಆದಾಗಿನಿಂದ ನೋಟಿಗೆ ಸಂಬಂಧಪಟ್ಟಂತಹ ಅದೆಷ್ಟೋ ನಕಲಿ ಸುದ್ದಿಗಳು ಹರಡಿದ್ದವು.

ಇದೀಗ ನಕಲಿ ನಾಣ್ಯಗಳ ಚಲಾವಣೆ ಆರಂಭಗೊಂಡಿದೆ. ಹಾಗಾಗಿ ಆರ್ ಬಿಐ ನಕಲಿ ನಾಣ್ಯಗಳ ಚಲಾವಣೆಯ ಕುರಿತು ಮಹತ್ವವಾದ ನಿರ್ಧಾರ ಕೈಗೊಂಡಿದೆ.

RBI New Rule on Counterfeit Coins
Image Credit: economictimes.indiatimes

ಆರ್ ಬಿಐ ನ್ಯೂ ರೂಲ್
ನಕಲಿ ನೋಟು ಹಾಗೂ ನಾಣ್ಯಗಳ ಚಲಾವಣೆಯನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಹೊಸ ನಿಯಮವನ್ನು ಜಾರಿಗೊಳಿಸಿದೆ.

ನಾಣ್ಯ ವಿತರಕಗಳಲ್ಲಿ ನಕಲಿ ನೋಟುಗಳನ್ನು ಸೇರಿಸುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಯುಪಿಐ ಆಧಾರಿತ ಆಯ್ಕೆಯನ್ನು ಅಳವಡಿಸಿಕೊಳ್ಳಲು ಆರ್ ಬಿಐ ನಿರ್ಧರಿಸಿದೆ ಎಂದು ಆರ್ ಬಿಐ ಡೆಪ್ಯುಟಿ ಗವರ್ನರ್ ಟಿ ರವಿಶಂಕರ್ ಹೇಳಿದ್ದಾರೆ.

RBI has ordered that fake coins cannot be circulated
Image Credit: 123rf

ಈ ಯಂಟರ್ಗಳಲ್ಲಿ ನಕಲಿ ಹಣವನ್ನು ಹಾಕುತ್ತಿರುವುದು ಅನೇಕ ಬಾರಿ ಬೆಳಕಿಗೆ ಬಂದಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಆರ್ ಬಿಐ ಮತ್ತೊಂದು ಆಯ್ಕೆಯನ್ನು ಪರಿಗಣಿಸಿದೆ.

Join Nadunudi News WhatsApp Group

ಅನೇಕರು ಮೊಬೈಲ್ ಗಳನ್ನೂ ಬಳಸುತ್ತಾರೆ ಅದರ ಮೂಲಕ ಕ್ಯೂಆರ್ ಕೋಡ್ ಅನ್ನು ಸ್ಕಾನ್ ಮಾಡಿ ಅದನ್ನು ಯುಪಿಐ ಲಿಂಕ್ ಮಾಡಬಹುದು. ಈ ಮೂಲಕ ಭೌತಿಕ ಹಣವನ್ನು ಬಳಸದೆಯೇ ವಿತರಣಾ ಯಂತ್ರದಿಂದ ನಾಣ್ಯಗಳನ್ನು ಹಿಂಪಡೆಯಬಹುದು.

RBI has introduced new regulations on coins
Image Credit: depositphotos

ದೇಶದಲ್ಲೇ ಈ ಯಂತ್ರಗಳನ್ನು ಅಭಿವೃದ್ದಿಪಡಿಸಲಾಗಿದೆ. ಈ ಹೊಸ ವ್ಯವಸ್ಥೆಯಲ್ಲಿ ನಾಣ್ಯಗಳ ವಿತರಣೆ ಸುಧಾರಿಸಲಿ. RBI ಖಾತೆಯಿಂದ ಹಣವನ್ನು ಕಡಿತಗೊಳಿಸುವ ಮೂಲಕ ನಾಣ್ಯಗಳನ್ನು ನೀಡುತ್ತದೆ.

ಇದಕ್ಕೂ ಮುನ್ನ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಕ್ಯೂಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮೆಷಿನ್ ಮೇಲೆ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದ್ದರು.

ಆರ್ ಬಿಐ 12 ನಗರಗಳಲ್ಲಿ QR ಕೋಡ್ ಆಧಾರಿತ ನಾಣ್ಯ ವಿತರಕಕ್ಕಾಗಿ ಪ್ಯಯೋಗಿಕ ಯೋಜನೆಯನ್ನು ಪ್ರಾರಂಭಿಸುತ್ತದೆ. ಈ ವಿತರಣಾ ಯಂತ್ರಗಳು UPI ಬಳಸಿಕೊಂಡು ಬ್ಯಾಂಕ್ ಗ್ರಹಕರ ಖಾತೆಯಿಂದ ಹಣವನ್ನು ಕಡಿತಗೊಳಿಸುವ ಮೂಲಕ ನಾಣ್ಯಗಳನ್ನು ಒದಗಿಸುತ್ತದೆ.

RBI has introduced a new mechanism to prevent counterfeit coins
Image Credit: istockphoto

ಪ್ರಸ್ತುತ ಲಭ್ಯವಿರುವ ಯಂತ್ರಗಳಲ್ಲಿ ಬ್ಯಾಂಕ್ ನೋಟುಗಳನ್ನು ಹಾಕುವ ಮೂಲಕ ನಾಣ್ಯಗಳನ್ನು ಹೊರತೆಗೆಯಲಾಗುತ್ತದೆ. ನಗದು ನಾಣ್ಯ ವಿತರಣಾ ಯಂತ್ರಕ್ಕೆ ಭೌತಿಕವಾಗಿ ಹಣವನ್ನು ಸೇರಿಸುವ ಮತ್ತು ಅದನ್ನು ಪರಿಶೀಲಿಸುವ ಅಗತ್ಯವಿಲ್ಲ.

ಆರಂಭದಲ್ಲಿ 12 ನಗರಗಳಲ್ಲಿ 19 ಸ್ಥಳಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಪ್ರಾರಂಭಿಸಲಾಗುತ್ತದೆ. ರೈಲು ನಿಲ್ದಾಣಗಳು ಶಾಪಿಂಗ್ ಮಾಲ್ ಗಳು, ಮಾರುಕಟ್ಟೆಗಳಲ್ಲಿ ಈ ಯಂತ್ರಗಳನ್ನು ಅಳವಡಿಸಲಾಗುವುದು.

Join Nadunudi News WhatsApp Group