RBI New Rule: 10 ರೂ ನಾಣ್ಯದ ವಿಷಯವಾಗಿ ಕೇಂದ್ರದ ಹೊಸ ನಿಯಮ, 3 ವರ್ಷ ಜೈಲು ಶಿಕ್ಷೆ.

10 ರೂ ನಾಣ್ಯದ ವಿಷಯವಾಗಿ ಕೇಂದ್ರದ ಹೊಸ ನಿಯಮ

RBI New Rule For 10 Rs And 20 Rs Coin: ಈ ಹಿಂದೆ ಕೇಂದ್ರದ ಸರ್ಕಾರ (Central Government) 2016 ರಲ್ಲಿ 500 ಮತ್ತು 1000 ರೂ. ಮುಖಬೆಲೆಯ ನೋಟ್ ಗಳನ್ನೂ ಬ್ಯಾನ್ ಮಾಡಿತ್ತು. ನಂತರ ಹೊಸ 500 ಮತ್ತು 2000 ನೋಟುಗಳನ್ನು ಚಲಾವಣೆಗೆ ತಂದಿತ್ತು. ತದ ನಂತರ 2000 ರೂ ನೋಟು ಚಲಾವಣೆಗೆ ಬಂದ ಬಳಿಕ ಮತ್ತಷ್ಟು ಕಪ್ಪು ಹಣದ ಸಂಗ್ರಹಣೆ ಹೆಚ್ಚಾಯಿತು. ಹಾಗಾಗಿ ಮತ್ತೆ ಮೋದಿ ಸರಕಾರ 2023 ರಲ್ಲಿ 2000 ಮುಖಬೆಲೆಯ ನೋಟ್ ಗಳನ್ನೂ ಬ್ಯಾನ್ ಮಾಡಿತು. ಸದ್ಯ 2000 ರೂ. ಭಾರತೀಯ ಕರೆನ್ಸಿಯ ಮೌಲ್ಯ ಹೊಂದಿಲ್ಲ.

ಇನ್ನು ಭಾರತೀಯ ಕರೆನ್ಸಿಗಳಲ್ಲಿ ವಿವಿಧ ಬೆಲೆಯ ನಾಣ್ಯಗಳು ಚಲಾವಣೆಯಲಿವೆ. 1 ರೂ., 2 ರೂ., 5 ರೂ., 10 ರೂ., ಹಾಗೆಯೆ 20 ರೂ. ನಾಣ್ಯಗಳ ಸದ್ಯ ಚಲಾವಣೆಯಲ್ಲಿವೆ. ಆದರೆ ಮಾರುಕಟ್ಟೆಯಲ್ಲಿ 10 ರೂ. ಹಾಗೂ 20 ರೂ. ನಾಣ್ಯಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾಗಿವೆ. ಸದ್ಯ 10 ರೂ. ಹಾಗೂ 20 ರೂ. ನಾಣ್ಯದ ಚಲಾವಣೆಯ ಬಗ್ಗೆ RBI ಏನು ಹೇಳುತ್ತದೆ ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

RBI New Rule For 10 Rs And 20 Rs Coin
Image Credit: Rightsofemployees

10 ರೂ ನಾಣ್ಯದ ವಿಷಯವಾಗಿ ಕೇಂದ್ರದ ಹೊಸ ನಿಯಮ
ಸದ್ಯ 10 ರೂ. ಹಾಗೂ 20 ರೂ. ನಾಣ್ಯದ ಕುರಿತು ಜನರಲ್ಲಿ ಗೊಂದಲ ಉಂಟಾಗಿದೆ. ಸದ್ಯ 10 ರೂ. ಹಾಗೂ 20 ರೂ. ನಾಣ್ಯಗಳ ಚಲಾವಣೆಯ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. 10 ರೂ. ಹಾಗೂ 20 ರೂ. ನಾಣ್ಯಗಳು ರದ್ದಾಗಿವೆ ಎನ್ನುವ ಬಗ್ಗೆ ಸುದ್ದಿ ಸಾಕಷ್ಟು ಹರಡಿದೆ. ಈ ಕಾರಣದಿಂದಾಗಿ ಅಂಗಡಿಯ ಮಾಲೀಕರು ನಾಣ್ಯಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಚಿಲ್ಲರೆ ಅಂಗಡಿಗಳಲ್ಲಿ ನಾಣ್ಯಗಳ ಸಂಗ್ರಹಣೆ ಹೆಚ್ಚಾಗಿರುತ್ತದೆ. ನಾಣ್ಯಗಳ ವಿನಿಮಯವನ್ನು ನಿರಾಕರಿಸಿರುವುದು ಜನರಿಗೆ ಕಷ್ಟವನ್ನು ತಂದಿದೆ. ಬ್ಯಾಂಕ್ ಗಳು ಕೂಡ ನಾಣ್ಯಗಳ ವಿನಿಮಯವನ್ನು ನಿರಾಕರಿಸುತ್ತಿರುವುದು ಕಂಡು ಬಂದಿದೆ. ಇಸದ್ಯ RBI 10 ರೂ. ಹಾಗೂ 20 ರೂ. ನಾಣ್ಯ ಚಲಾವಣೆ ಬಗ್ಗೆ ಸ್ಪಷ್ಟನೆ ನೀಡಿದೆ.

 20 Rs Coin
Image Credit: Original Source

ಈ ತಪ್ಪಾದರೆ 3 ವರ್ಷ ಜೈಲು ಶಿಕ್ಷೆ
ವಹಿವಾಟು ಮತ್ತು ಪಾವತಿಗಾಗಿ 10 ರೂ. ಹಾಗೂ 20 ರೂ.ನಾಣ್ಯವನ್ನು ಸ್ವೀಕರಿಸಲು ವ್ಯಾಪಾರಿಗಳು ಮತ್ತು ಜನಸಾಮಾನ್ಯರು ಹಿಂದೇಟು ಹಾಕುತ್ತಿರುವುದು ಈಗಾಗಲೇ ಕಂಡು ಬಂದಿದೆ. ಸರ್ಕಾರದಿಂದ ಮಾನ್ಯತೆ ಪಡೆದ ಕರೆನ್ಸಿಯನ್ನು ಖರೀದಿಸಲು ನಿರಾಕರಿಸುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ. ಭಾರತ ಸರ್ಕಾರವು ಅನುಮೋದಿಸಿದ ರೂ. 10 ಮತ್ತು ರೂ. 20 ನಾಣ್ಯಗಳನ್ನು ಅಮಾನ್ಯಗೊಳಿಸುವುದು ಅಥವಾ ಸ್ವೀಕರಿಸಲು ಅಥವಾ ನೀಡಲು ನಿರಾಕರಿಸುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಪ್ರಕಾರ, ಭಾರತ ಸರ್ಕಾರವು ಅನುಮೋದಿಸಿದ ನಾಣ್ಯಗಳನ್ನು ಖರೀದಿಸಲು ನಿರಾಕರಿಸುವುದು ಅಪರಾಧವಾಗಿದೆ. ಈ ಅಪರಾಧವು ದಂಡದ ಜೊತೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತದೆ. ಭಾರತ ಸರ್ಕಾರದ ಅನುಮೋದಿತ ಕರೆನ್ಸಿಯನ್ನು ಉಲ್ಲಂಘಿಸಿ ರೂ. 10 ಮತ್ತು ರೂ. 20 ನಾಣ್ಯಗಳನ್ನು ಸ್ವೀಕರಿಸದ ಯಾವುದೇ ವ್ಯಕ್ತಿ ಅಥವಾ ಅಂಗಡಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು RBI ಸೂಚನೆ ನೀಡಿದೆ.

Join Nadunudi News WhatsApp Group

10 Rs And 20 Rs Coin
Image Credit: Allaboutbelgaum

Join Nadunudi News WhatsApp Group