New Rule: ಚಿನ್ನದ ಮೇಲೆ ಸಾಲ ಪಡೆಯುವ ಎಲ್ಲರಿಗೂ ಹೊಸ ನಿಯಮ, RBI ಕಟ್ಟುನಿಟ್ಟಿನ ಆದೇಶ

ಚಿನ್ನದ ಮೇಲೆ ಸಾಲ ಪಡೆಯುವವರಿಗೆ RBI ನಿಂದ ಹೊಸ ನಿಯಮ

RBI New Rule For Bank Gold Loan: ಪ್ರಸ್ತುತ ದೇಶದಲ್ಲಿ Reserve Bank ನಿಯಮ ಉಲ್ಲಂಘನೆ ಮಾಡುವ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ RBI ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಪಡಿಸಿರುವ ಬಗ್ಗೆ ಎಲ್ಲರಿಗು ಮಾಹಿತಿ ತಿಳಿದೇ. ದೇಶದಲ್ಲಿ ಹಲವಾರು ಸಹಕಾರಿ ಬ್ಯಾಂಕ್ ಗಳು ನಿಯಮ ಉಲ್ಲಂಘನೆಯ ಕಾರಣ ಪರವಾನಗಿಯನ್ನು ಕಳೆದುಕೊಂಡಿದ್ದು, ವಹಿವಾಟನ್ನು ನಡೆಸದಂತಾಗಿದೆ. ಸದ್ಯ RBI ಚಿನ್ನದ ಸಾಲವನ್ನು ನೀಡುವ ಫೈನಾನ್ಸ್ ಕಂಪನಿಯ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಂಡಿದೆ.

IIFL ಫೈನಾನ್ಸ್ ಕಂಪನಿಯು ತಮ್ಮ ಸಾಲವನ್ನು ಸಮಯಕ್ಕೆ ಮರುಪಾವತಿಸಲು ವಿಫಲವಾದ ಗ್ರಾಹಕರ ಚಿನ್ನವನ್ನು ಹರಾಜು ಹಾಕಿದಾಗ, RBI ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ವ್ಯವಹಾರದಲ್ಲಿ ಹಲವಾರು ಅಕ್ರಮಗಳನ್ನು ಕಂಡುಹಿಡಿದಿದೆ. ಇದಾದ ಒಂದು ವಾರದ ನಂತರ ನಗದು ಪಾವತಿ ಸಾಲಕ್ಕೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದೆ.

RBI New Rule For Bank Loan
Image Credit: currentaffairs.adda247

ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಬಿಗ್ ಅಪ್ಡೇಟ್
ಬ್ಯಾಂಕೇತರ ಹಣಕಾಸು ಕಂಪನಿಗಳಿಂದ ಚಿನ್ನದ ಸಾಲ ಪಡೆದವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಹೌದು, ನಗದು ಪಾವತಿ ಮೊತ್ತವು 20,000 ಕ್ಕೆ ಸೀಮಿತವಾಗಿದೆ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲಾಗುವುದಿಲ್ಲ ಎಂದು RBI ಸೂಚನೆ ನೀಡಿದೆ.

ಇದೀಗ 20,000 ರೂಪಾಯಿಗಳ ($240) ಅನುಮತಿಸುವ ಮಿತಿಗಿಂತ ಹೆಚ್ಚಿನ ನಗದು ಸಾಲಗಳನ್ನು ವಿತರಿಸುವುದರ ವಿರುದ್ಧ RBI ಕೆಲವು ಬ್ಯಾಂಕೇತರ ಸಾಲದಾತರಿಗೆ ಎಚ್ಚರಿಕೆ ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ನಗದು ವಿತರಣೆಯಲ್ಲಿ ಐಟಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.

RBI New Rule
Image Credit: Informalnewz

ಇನ್ನುಮುಂದೆ ನಗದು ಪಾವತಿ 20 ಸಾವಿರಕ್ಕೆ ಸೀಮಿತ
ಭಾರತದ ಎರಡನೇ ಅತಿದೊಡ್ಡ ಚಿನ್ನದ ಸಾಲ ಒದಗಿಸುವ ಐಐಎಫ್‌ಎಲ್ ಫೈನಾನ್ಸ್ ವಿರುದ್ಧ ಆರ್‌ಬಿಐ ಶಿಸ್ತು ಕ್ರಮ ಕೈಗೊಂಡ ನಂತರ ನಗದು ವಿತರಣೆ ಮತ್ತು ಇತರ ನಿಯಮಗಳ ಉಲ್ಲಂಘನೆಗಾಗಿ ಎನ್‌ಬಿಎಫ್‌ಸಿ ಗಳಿಗೆ ಎಚ್ಚರಿಕೆ ನೀಡಿದೆ. ಚಿನ್ನದ ಮೇಲೆ, ಸಾಲಗಾರನು ಕೇವಲ 20 ಸಾವಿರ ನಗದು ಪಡೆಯಬಹುದು ಮತ್ತು ಉಳಿದ ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು. ತುರ್ತು ಸಂದರ್ಭದಲ್ಲಿ ಚಿನ್ನದ ಸಾಲ ಪಡೆಯುವವರಿಗೆ ಇದು ಅನಾನುಕೂಲವೆಂದು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.

Join Nadunudi News WhatsApp Group

ಭಾರತದಲ್ಲಿನ ಆದಾಯ ತೆರಿಗೆ ನಿಯಮಗಳ ಪ್ರಕಾರ, ಸಾಲದಾತರು ಗ್ರಾಹಕರಿಗೆ 20,000 ರೂ.ಗಿಂತ ಹೆಚ್ಚಿನ ನಗದು ಸಾಲವನ್ನು ನೀಡುವುದನ್ನು ನಿಷೇಧಿಸುತ್ತವೆ. ಆದ್ದರಿಂದ, ನಿಯಮಗಳನ್ನು ಉಲ್ಲಂಘಿಸದಂತೆ ಸೆಂಟ್ರಲ್ ಬ್ಯಾಂಕ್ ಕೇಳಿಕೊಂಡಿದೆ. ಆರ್‌ಬಿಐ ಎನ್‌ಬಿಎಫ್‌ಸಿ ಗಳಿಗೆ ರೂ. 20,000 ನಗದು ಸಾಲದ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಳಿಕೊಂಡಿದೆ.

RBI New Loan Rules
Image Credit: Seepositive

Join Nadunudi News WhatsApp Group