Cheque Update: ಚೆಕ್ ವ್ಯವಹಾರ ಮಾಡುವವರಿಗೆ ಜಾರಿಗೆ ಬಂತು ಹೊಸ ನಿಯಮ, RBI ನಿಂದ ಹೊಸ ರೂಲ್ಸ್ ಜಾರಿಗೆ.

ಚೆಕ್ ಬೌನ್ಸ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತಂದ RBI.

RBI New Rule For Cheque Bounce: ದೇಶದಲ್ಲಿ Online Payment ಪ್ರಾರಂಭವಾದ ದಿನದಿಂದ ಬ್ಯಾಂಕ್ ಗಳಿಗೆ ಭೇಟಿ ನೀಡುವ ಕೆಲಸದಿಂದ ಜನರು ನಿರಾಳರಾಗಿದ್ದಾರೆ ಎನ್ನಬಹುದು. ಯಾರೊಬ್ಬರಿಗೆ ಹಣವನ್ನು ಕಳಿಹಿಸಬೇಕಾದರು ಕೂಡ ಆನ್ಲೈನ್ ಮೂಲಕವೇ ಪಾವತಿಮಾಡುತ್ತಾರೆ. ಇನ್ನು ಯುಪಿಐ ಅಪ್ಲಿಕೇಶನ್ ಗಳು ತನ್ನ ಸೇವೆಯನ್ನು ವಿಸ್ತರಿಸುತ್ತ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ.

ಆನ್ಲೈನ್ ವಹಿವಾಟುಗಳು ಬಂದ ಮೇಲೆ ಚೆಕ್ ನಲ್ಲಿ ಹಣ ಪಡೆಯುವ ಮತ್ತು ನೀಡುವುದು ಕಡಿಮೆಯಾಗಿದೆ. ಹೆಚ್ಚಾಗಿ ಜನರು ಯುಪಿಐ ಪಾವತಿಯನ್ನೇ ಆರಿಸುತ್ತಾರೆ. ಇನ್ನು ಯುಪಿಐ ನ ಮೂಲಕ ದೊಡ್ಡ ಮೊತ್ತದ ವಹಿವಾಟು ನಡೆಸಲು ಕಷ್ಟವಾಗುತ್ತದೆ. ಹೀಗಾಗಿ ಕೆಲವೊಂದು ದೊಡ್ಡ ಮೊತ್ತದ ಹಣಕಾಸಿನ ವಹಿವಾಟುಗಳನ್ನು ಈಗಲೂ ಕೂಡ ಚೆಕ್ (Cheque) ನೀಡುವ ಮೂಲಕ ಮಾಡಲಾಗುತ್ತದೆ.

New Rule For Cheque Bounce
Image Credit: India Times

ಚೆಕ್ ಬೌನ್ಸ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತಂದ RBI
ಇನ್ನು ಈ ಚೆಕ್ ನೀಡುವ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಚೆಕ್ ನೀಡುವ ಸಮಯದಲ್ಲಿ ಈ ತಪ್ಪುಗಳನ್ನು ಮಾಡಿದರೆ ನೀವು ದಂಡ ಕಟ್ಟಬೇಕಾಗುತ್ತದೆ ಅಥವಾ ಜೈಲು ಪಾಲಾಗುವ ಸಂದರ್ಭ ಕೂಡ ಬರಬಹುದು. Checque ವ್ಯವಹಾರ ಮಾಡುವ ಸಮಯದಲ್ಲಿ Cheque Bounce ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಸದ್ಯ ಕೇಂದ್ರ ಸರ್ಕಾರ Cheque Bounce ಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ತರಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಚೆಕ್ ವ್ಯವಹಾರ ಮಾಡುವವರಿಗೆ RBI ಆದೇಶ ಹೊರಡಿಸಿದೆ.

ಚೆಕ್ ವ್ಯವಹಾರ ಮಾಡುವವರಿಗೆ ಜಾರಿಗೆ ಬಂತು ಹೊಸ ನಿಯಮ
Reserve Bank Of India ಚೆಕ್ ಬೌನ್ಸ್ ಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಖಾತೆಯಿಂದ ಹಣವನ್ನು ಮರುಪಡೆಯುವುದು ಎಂದರೆ ಚೆಕ್ ಹೊಂದಿರುವವರು ಯಾವುದೇ ಸಂದರ್ಭಗಳಲ್ಲಿ ಹಣವನ್ನು ಮರುಪಾವತಿಸಬೇಕಾಗುತ್ತದೆ. ಇಲ್ಲವಾದರೆ ಶಿಕ್ಷೆಯೂ ಆಗುವ ಸಾಧ್ಯತೆ ಇದೆ.

RBI New Rule For Cheque Bounce
Image Credit: Informalnewz

CNBC ವರದಿಯು ಈ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದ ನಂತರ, ಚೆಕ್ ಬೌನ್ಸ್‌ ಗಳ ಕಂಪನಿ ಅಥವಾ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಸಹ ಕ್ಷೀಣಿಸುತ್ತದೆ ಎಂದು ಹೇಳುತ್ತದೆ. ಈ ಪ್ರಕರಣಗಳಿಗೆ ಸಾಲದ ಡೀಫಾಲ್ಟ್ ನಿಯಮಗಳು ಸಹ ಅನ್ವಯಿಸುತ್ತವೆ. ಇದು ಚೆಕ್ ಬೌನ್ಸ್ ಪ್ರಕರಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಜನರು ತಮ್ಮ ಸ್ವಂತ ಚೆಕ್‌ ಗಳನ್ನು ಬೌನ್ಸ್ ಮಾಡುವುದನ್ನು ತಡೆಯುತ್ತದೆ.

Join Nadunudi News WhatsApp Group

ಚೆಕ್ ಬೌನ್ಸ್ ಆದರೆ ಯಾವುದೇ ಹೊಸ ಖಾತೆಯನ್ನು ತೆರೆಯಲಾಗುವುದಿಲ್ಲ ಮತ್ತು ಇತರ ಖಾತೆಗಳಿಂದಲೂ ಹಣವನ್ನು ಮರುಪಡೆಯಲಾಗುವುದಿಲ್ಲ ಎಂದು RBI ಹೇಳಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವರ್ಷದ ಶಿಕ್ಷೆಯನ್ನು RBI ವಿಧಿಸಿದೆ. ಇನ್ನು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 (NI Act) ಅಡಿಯಲ್ಲಿ ಚೆಕ್ ಬೌನ್ಸ್‌ ಗೆ ಶಿಕ್ಷೆಗೆ ಅವಕಾಶವಿದೆ.

Join Nadunudi News WhatsApp Group