Coins Rule: 5 ಮತ್ತು 10 ರೂಪಾಯಿ ನಾಣ್ಯಗಳ ಮೇಲೆ ಹೊಸ ಮಾರ್ಗಸೂಚಿ ಬಿಡುಗಡೆ, RBI ಘೋಷಣೆ.

5 ಮತ್ತು 10 ರೂಪಾಯಿ ನಾಣ್ಯಗಳ ಮೇಲೆ ಹೊಸ ಮಾರ್ಗಸೂಚಿಯನ್ನ RBI ಪ್ರಕಟ ಮಾಡಿದೆ.

Reserve Bank Of India Rules On Coins: ದೇಶಿಯ ಮಾರುಕಟ್ಟೆಯಲ್ಲಿ ಇದೀಗ 2000 ರೂ. ನೋಟು ಅಮಾನ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಇನ್ನು ಇತ್ತೀಚೆಗಂತೂ ನೋಟು ಹಾಗೂ ನಾಣ್ಯಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳುವಿರಾಲ್ ಆಗುತ್ತಿವೆ.

ಇದೀಗ ಮತ್ತೆ ನಾಣ್ಯಗಳ ವಿಷಯವಾಗಿ ಮಾರುಕಟ್ಟೆಯಲ್ಲಿ ಗೊಂದಲ ಸ್ರಷ್ಟಿಯಾಗಿದೆ. ಕೆಲವು ನಾಣ್ಯಗಳು ಚಲಾವಣೆಯಲ್ಲಿ ಇಲ್ಲ ಎನ್ನುವ ಕಾರಣ ನಾಣ್ಯಗಳ ವಿನಿಮಯ ಪ್ರಕ್ರಿಯೆ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಆರ್ ಬಿಐ (RBI) ಇದೀಗ ನಾಣ್ಯಗಳ ವಿಚಾರವಾಗಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

RBI has announced new guidelines on Rs 5 and Rs 10 coins.
Image Credit: newsnationtv

5 ಮತ್ತು 10 ರೂಪಾಯಿ ನಾಣ್ಯಗಳ ಮೇಲೆ ಹೊಸ ಮಾರ್ಗಸೂಚಿ ಬಿಡುಗಡೆ
ಇದೀಗ 1, 2, 5, ಹಾಗೂ 10 ರೂ. ನಾಣ್ಯಗಳ ಚಲಾವಣೆಯ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಈ ಕಾರಣದಿಂದಾಗಿ ಅಂಗಡಿಯ ಮಾಲೀಕರು ನಾಣ್ಯಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಕಡೆ ನಾಣ್ಯಗಳ ಸಂಗ್ರಹಣೆ ಹೆಚ್ಚಾಗಿರುತ್ತದೆ.

ನಾಣ್ಯಗಳ ವಿನಿಮಯವನ್ನು ನಿರಾಕರಿಸಿರುವುದು ಜನರಿಗೆ ಕಷ್ಟವನ್ನು ತಂದಿದೆ. ಬ್ಯಾಂಕ್ ಗಳು ಕೂಡ ನಾಣ್ಯಗಳ ವಿನಿಮಯವನ್ನು ನಿರಾಕರಿಸುತ್ತಿದೆ. ಈ ಕಾರಣದಿಂದಾಗಿ 5 ಮತ್ತು 10 ರೂಪಾಯಿ ನಾಣ್ಯಗಳ ಮೇಲೆ ಆರ್ ಬಿಐ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

RBI has not withdrawn any coin from circulation. It has been informed that if any shops or banks refuse to accept coins, the concerned may take action against them.
Image Credit: youtube

ನಿಯಮ ಉಲ್ಲಂಘಿಸಿದರೆ ದಂಡಾ ಜೊತೆಗೆ ಜೈಲು ಶಿಕ್ಷೆ
ಆರ್ ಬಿಐ ಯಾವುದೇ ನಾಣ್ಯವನ್ನು ಚಲಾವಣೆಯಿಂದ ತೆಗೆದುಹಾಕಿಲ್ಲ. ಇನ್ನು ಯಾವುದೇ ಅಂಗಡಿಯವರು ಅಥವಾ ಬ್ಯಾಂಕ್ ಗಳು ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದರೆ ಸಂಬಂಧಪಟ್ಟವರು ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ.

Join Nadunudi News WhatsApp Group

ಭಾರತೀಯ ದಂಡ ಸಂಹಿತೆಯ 489A ನಿಂದ 489E ಸೆಕ್ಷನ್ ಅಡಿಯಲ್ಲಿ ನೋಟು ಹಾಗು ನಾಣ್ಯಗಳ ಕುರಿತು ಯಾವುದೇ ಕಾನೂನುಬಾಹಿರ ಘಟನೆ ನಡೆದರೆ ಅಥವಾ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಿದರೆ ಕಾನೂನು ನ್ಯಾಯಾಲಯದಿಂದ ದಂಡ, ಜೈಲು ಶಿಕ್ಷೆ ಅಥವಾ ಎರಡನ್ನು ವಿಧಿಸುವ ಅವಕಾಶವಿದೆ.

Join Nadunudi News WhatsApp Group