Price Hike: ರಾಜ್ಯದಲ್ಲಿ ಮತ್ತೆ ಏರಿಕೆಯಾದ ದಿನಸಿ ವಸ್ತುಗಳ ಬೆಲೆ, ಅಕ್ಕಿ ಸೇರಿದಂತೆ ಹಲವು ಪದಾರ್ಥಗಳ ಬೆಲೆಯಲ್ಲಿ ಇಷ್ಟು ಏರಿಕೆ

ರಾಜ್ಯದಲ್ಲಿ ಮತ್ತೆ ಏರಿಕೆಯಾದ ಅಕ್ಕಿ ಬೆಲೆ, ಬೇಸರದ ಹೊರಹಾಕಿದ ಜನರು

Rice- Grocery Prices Hike: ಸದ್ಯ ದೇಶದಲ್ಲಿ ಈಗಾಗಲೇ ಜನರು ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಸದ್ಯ ಗಗನಕ್ಕೇರುತ್ತಿದೆ. ಜನರು ಹೆಚ್ಚಿನ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದಾರೆ. ಒಂದಲ್ಲ ಒಂದೂ ವಸ್ತುವಿನ ಬೆಲೆ ಹೆಚ್ಚು ಏರಿಕೆಯಾಗುತ್ತಿದೆ.

ತರಕಾರಿ, ಹಾಲು, ಮೊಸರು, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್ ಬೆಲೆಗಳು ಹೆಚ್ಚು ಏರಿಕೆಯಾಗುತ್ತಿದೆ. ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ ಎನ್ನಬಹುದು. ರಾಜ್ಯದಲ್ಲಿ ಅಕ್ಕಿ, ದಿನಸಿ ದರ ವಿಪರೀತ ಏರಿಕೆ ಕಾಣುತ್ತಿದೆ. ಇದೀಗ ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ಕಿ, ದಿನಸಿ ದರದ ಏರಿಕೆಗೆ ಕಾರಣವೇನು..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Rice Price Hike Latest Update
Image Credit: The Economic Times

ರಾಜ್ಯದಲ್ಲಿ ಹೆಚ್ಚುತ್ತಿದೆ ಅಕ್ಕಿ, ದಿನಸಿ ದರ
ಸದ್ಯ ರಾಜ್ಯದಲ್ಲಿ ಉಂಟಾದಂತಹ ಬರ ಪರಿಸ್ಥಿತಿ ಜನರಿಗೆ ಹೆಚ್ಚಿನ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಮಳೆಯ ಕೊರತೆಯಿಂದಾಗಿ ಜನರು ತಮ್ಮ ಬೆಳೆಯಲ್ಲಿ ನಷ್ಟವನ್ನು ಅನುಭವಿಸಬೇಕಾಗಿದೆ. ಬೆಳೆ ಕೈಸೇರದೆ ರೈತರು ಬಾರಿ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ. ಮಳೆಯ ಕಾರಣದಿಂದಾಗಿ ಎಲ್ಲ ಅಗತ್ಯ ವಸ್ತುಗಳ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ. ಬೇಡಿಕೆ ಹೆಚ್ಚಿದ್ದು, ಉತ್ಪಾದನೆಯ ಪ್ರಮಾಣ ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದೆ.

ಅಕ್ಕಿ, ದಿನಸಿ ದರ ಹೆಚ್ಚಾಗಲು ಕಾರಣವೇನು..?
ಹೊಸ ಸ್ಟಾಕ್ ಬರಲು ತಿಂಗಳು ವಿಳಂಬವಾಗುತ್ತದೆ. ಸದ್ಯ ಹಳೆ ದಾಸ್ತಾನು ಕಡಿಮೆ ಆಗಿರುವುದರಿಂದ ವರ್ತಕರು ಹಳೆ ದಾಸ್ತಾನಿಗೆ ಹೆಚ್ಚಿನ ಬೆಲೆ ನಿಗದಿಪಡಿಸಿ ವ್ಯಾಪಾರ ಆರಂಭಿಸಿದ್ದಾರೆ. ದುಬಾರಿ ಬೆಲೆಯಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಕಳೆದ ತಿಂಗಳು ಒಂದು ಕೆಜಿ ಅಕ್ಕಿ ಬೆಲೆ 50 ರೂ. ಆಗಿತ್ತು. ಈ ತಿಂಗಳು ಅಕ್ಕಿಯನ್ನು 65 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಕ್ಕಿಯ ಬೆಲೆಯಲ್ಲಿ 15 ರೂ. ಏರಿಕೆ ಕಂಡು ಬಂದಿದೆ.

Grocery Prices Hike Update
Image Credit: Business Today

ದಿನಸಿ ದರದ ಏರಿಕೆಯ ವಿವರ ಇಲ್ಲಿದೆ
*ಬೇಳೆಕಾಳುಗಳು 185. ರೂ. ಆಗಿತ್ತು. ಈ ತಿಂಗಳು 170 ರಿಂದ 180 ರೂ. ಆಗಿದೆ.

Join Nadunudi News WhatsApp Group

*ಕಳೆದ ತಿಂಗಳು ತೊಗರಿ 160 ರೂ. ಆಗಿತ್ತು. ಈ ತಿಂಗಳು ಇದು ಸರಿಸುಮಾರು 170 ರಿಂದ 180 ರೂ. ಆಗಿದೆ.

*ಕಳೆದ ತಿಂಗಳು, ಬೇಳೆಕಾಳುಗಳು 120 ರೂ. ಆಗಿತ್ತು, ಈ ತಿಂಗಳು 150 ರಿಂದ 160 ಹೆಚ್ಚಾಗಿದೆ.

*ಹೆಸರು ಬೇಳೆ ಕಳೆದ ತಿಂಗಳು 120 ರೂ ಇತ್ತು. ಈ ತಿಂಗಳು 150 ರಿಂದ 160 ರೂ ಜಾಸ್ತಿಯಾಗಿದೆ.

*ಜೀರಿಗೆ ಕೆಜಿಗೆ 500 ರೂ. ತಲುಪಿದೆ.

*ಕಡ್ಲೆಬೇಳೆ ಕಳೆದ ತಿಂಗಳು 85 ರೂ ಇತ್ತು. ಈ ತಿಂಗಳು 95 ರೂ ಜಾಸ್ತಿಯಾಗಿದೆ.

*ಬಟಾಣಿ ಕಳೆದ ತಿಂಗಳು 90 ರೂ ಇತ್ತು. ಈ ತಿಂಗಳು120 ರೂ ಜಾಸ್ತಿಯಾಗಿದೆ.

*ಗೋದಿ 35 ರೂ. ನಿಂದ 45 ರೂ. ಆಗಿದೆ.

Join Nadunudi News WhatsApp Group