Rohith Sharma Emotion: ವಿರಾಟ್ ಕೊಹ್ಲಿ ಕಂಡು ಕಣ್ಣೀರು ಹಾಕಿದ ಶರ್ಮ, ಸಿಕ್ಕಾಪಟ್ಟೆ ವೈರಲ್ ಆಗಿದೆ ವಿಡಿಯೋ.

ವಿರಾಟ್ ಕೊಹ್ಲಿ ಕಂಡು ಕಣ್ಣೀರು ಹಾಕಿದ ಶರ್ಮ

Rohith Sharma And Virat Kohli Emotion: ನಿಮಗೆ ತಿಳಿದಿರುವ ಹಾಗೆ 2022ರ ಟಿ20 ವಿಶ್ವಕಪ್‌ ನ ಸೆಮಿಫೈನಲ್‌ ನಲ್ಲಿ ಟೀಂ ಇಂಡಿಯಾವನ್ನು ಇಂಗ್ಲೆಂಡ್‌ ಸೋಲಿಸಿತ್ತು. ಇದೀಗ ಟೀಂ ಇಂಡಿಯಾ ಸೇಡು ತೀರಿಸಿಕೊಂಡಿದೆ. ನಿನ್ನೆ (ಜೂನ್ 27) ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ತಂಡ 67 ರನ್ ಗಳ ಜಯ ಸಾಧಿಸಿದೆ.

ಈ ಮೂಲಕ ಕೋಟ್ಯಾಂತರ ಅಭಿಮಾನಿಗಳ ಕನಸು ನನಸು ಆಗಿದೆ. ಈ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಹತ್ತಿರ ಬರುತ್ತಿದಂತೆ ರೋಹಿತ್ ಶರ್ಮ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಸದ್ಯ ಸೊಚಿಲ್ ಮೀಡಿಯಾದಲ್ಲಿ ಈ ವಿಡಿಯೋ ಬಾರಿ ವೈರಲ್ ಆಗುತ್ತಿದೆ.

Rohit Sharma And Virat Kohli Emotional
Image Credit: Cricxtasy

ಸಿಕ್ಕಾಪಟ್ಟೆ ವೈರಲ್ ಆಗಿದೆ ವಿಡಿಯೋ
ನಾಯಕರಾಗಿ ರೋಹಿತ್ ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ಟೀಂ ಇಂಡಿಯಾವನ್ನು ಮುನ್ನಡೆಸಿದರು. ಸೂರ್ಯಕುಮಾರ್ ಯಾದವ್ ರೋಹಿತ್‌ ಗೆ ಬೆಂಬಲ ನೀಡಿದರು. ಬಳಿಕ ಸ್ಪಿನ್ನರ್ ಗಳ ಜಾದೂ (ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ತಲಾ 3 ವಿಕೆಟ್)ಗೆ ಆಂಗ್ಲರ ದಂಡು ಸೊರಗಿತು. ಅಂತಿಮವಾಗಿ ಭಾರತ ತಂಡ ಫೈನಲ್‌ ಗೆ ಬಲವಾಗಿ ಎಂಟ್ರಿ ಕೊಟ್ಟಿತು. ಸೆಮಿಫೈನಲ್‌ ಗೆ ಮಳೆ ಅಡ್ಡಿಪಡಿಸಿತು ಆದರೆ ಪೂರ್ಣ ಪಂದ್ಯವನ್ನು ಆಡಲಾಯಿತು. ಟೀಂ ಇಂಡಿಯಾ ವಿಜೇತರಾಗಿ ಹೊರಹೊಮ್ಮಿತು. ಶನಿವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಶಸ್ತಿ ಹೋರಾಟಕ್ಕೆ ಭಾರತ ತಂಡ ಸಜ್ಜಾಗಿದೆ.

ವಿರಾಟ್ ಕೊಹ್ಲಿ ಕಂಡು ಕಣ್ಣೀರು ಹಾಕಿದ ಶರ್ಮ
ಸೆಮಿಫೈನಲ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದ ನಂತರ ನಾಯಕ ರೋಹಿತ್ ಶರ್ಮಾ ಸ್ವಲ್ಪ ಭಾವುಕರಾದರು. ಅಲ್ಲದೆ, ಕಣ್ಣೀರು ಹಾಕಿದರು. ಈ ಘಟನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನೂ ಭಾವುಕರನ್ನಾಗಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ 2022ರಲ್ಲಿ ಟಿ20 ವಿಶ್ವಕಪ್ ಆಡಿತ್ತು.ಈ ಟೂರ್ನಿಯಲ್ಲಿ ಸೆಮಿಸ್ ಗೆ ತೆರಳಿದ್ದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. 2023 ರ ಏಕದಿನ ವಿಶ್ವಕಪ್‌ ನಲ್ಲಿ ಫೈನಲ್ ತಲುಪಿದ್ದ ಟೀಂ ಇಂಡಿಯಾ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.

Join Nadunudi News WhatsApp Group

ಎರಡು ದೊಡ್ಡ ಸೋಲುಗಳ ನಂತರ, ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ಪ್ರಸಕ್ತ ಟಿ20 ವಿಶ್ವಕಪ್‌ ನಲ್ಲಿ ಫೈನಲ್ ಪ್ರವೇಶಿಸಿದೆ. ಈ ಸಂತಸದ ಕ್ಷಣದಲ್ಲಿ ನಾಯಕ ರೋಹಿತ್ ಶರ್ಮಾ ಭಾವುಕರಾದರು. ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ ಗೆ ತೆರಳುತ್ತಿದ್ದ ಕೊಹ್ಲಿಯನ್ನು ರೋಹಿತ್ ಭಾವುಕರಾಗಿ ಹುರಿದುಂಬಿಸಿದರು. ಈ ವೇಳೆ ಕೊಹ್ಲಿ ರೋಹಿತ್‌ ಗೆ ಸಾಂತ್ವನ ಹೇಳಲು ಯತ್ನಿಸಿದರು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Rohit Sharma And Virat Kohli
Image Credit: Thecricketlounge

Join Nadunudi News WhatsApp Group