Rohith Sharma: ಟ್ರೋಫಿ ಪಡೆಯುವಾಗ ಶರ್ಮ ಆ ರೀತಿ ನಡೆದುಬಂದಿದ್ದು ಯಾಕೆ…? ಇಲ್ಲಿದೆ ಅಸಲಿ ಕಾರಣ

ಶರ್ಮ ವಿಭಿನ್ನ ಸಂಭ್ರಮಾಚರಣೆಯ ಹಿಂದಿನ ಕಾರಣವೇನು...?

Rohith Sharma Latest Update: ಸದ್ಯ T20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಗೆದ್ದಿರುವ ಕಾರಣ ಭಾರತೀಯರು ಸಂತಸದಲ್ಲಿದ್ದರೆ. ದಕ್ಷಿಣ ಆಫ್ರಿಕಾದ ವಿರುದ್ಧ ಟೀಮ್ ಇಂಡಿಯಾ 7 ರನ್ ಗಳಲ್ಲಿ ಜಯ ಸಾಧಿಸಿದೆ. ಇಂಡಿಯಾಗೆ ಗೆಲುವು ಅಸಾಧ್ಯ ಎನ್ನುವಷ್ಟರಲ್ಲಿ ಇಂಡಿಯಾದ ಸೂಪರ್ ಬೌಲರ್ಸ್ ತಮ್ಮ ಬೌಲಿಂಗ್ ನಲ್ಲಿ ಎದುರಾಳಿ ತಂಡಕ್ಕೆ ದೊಡ್ಡ ಹೊಡೆತವನ್ನು ನೀಡಿದರು.

ಕ್ರೀಸ್‌ ನಲ್ಲಿ ಕ್ಲೌಸೆನ್-ಮಿಲ್ಲರ್‌ ರಂತಹ ಅಗ್ರ ಬ್ಯಾಟ್ಸ್‌ ಮನ್‌ ಗಳ ಹೊರತಾಗಿಯೂ, ದಕ್ಷಿಣ ಆಫ್ರಿಕಾವು 30 ಎಸೆತಗಳಲ್ಲಿ 30 ರನ್‌ ಗಳ ಅಗತ್ಯವಿದ್ದಲ್ಲಿ ಪಂದ್ಯವನ್ನು ಸುಲಭದ ಹಂತದಲ್ಲಿ ಕೈಬಿಟ್ಟಿತು. ಈ ಸೋಲಿನೊಂದಿಗೆ ಆಫ್ರಿಕಾ ಮತ್ತೊಮ್ಮೆ ಚೋಕರ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ತಂಡದ ಗೆಲುವಿನ ಖುಷಿಯಲ್ಲಿ ರೋಹಿತ್ ಶರ್ಮ ತೇಲುತ್ತಿದ್ದರೆ ಎನ್ನಬಹುದು. ಆದರೆ ಈ ವೇಳೆ ರೋಹಿತ್ ಅವರ ಗೆಲುವಿನ ಈ ಸಂಭ್ರಮಾಚರಣೆ ವೈರಲ್ ಆಗುತ್ತಿದೆ.

T20 World Cup trophy celebration
Image Credit: Hindustantimes

ಕಪ್ ಗೆದ್ದ ಖುಷಿಯಲ್ಲಿ ವಿಭಿನ್ನವಾಗಿ ಸಂಭ್ರಮಾಚರಣೆ ಮಾಡಿದ್ರು ರೋಹಿತ್ ಶರ್ಮ
ವಿಶ್ವಕಪ್ ಕನಸು ನನಸಾಗುತ್ತಿದ್ದಂತೆ ಭಾರತದ ಆಟಗಾರರು ಭರ್ಜರಿಯಾಗಿ ಸಂಭ್ರಮಿಸಿದರು. ಜೊತೆಗೆ ಭಾವುಕರಾದರು. ಚಾಂಪಿಯನ್ ಆಗುತ್ತಿದ್ದಂತೆ ಟೀಂ ಇಂಡಿಯಾ ಆಟಗಾರರ ಸಂತಸಕ್ಕೆ ಮಿತಿಯೇ ಇರಲಿಲ್ಲ. ಪರಸ್ಪರ ಅಪ್ಪಿಕೊಂಡು ಕಣ್ಣೀರು ಸುರಿಸುವುದರ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಆದರೆ, ವಿಶ್ವಕಪ್ ಕನಸು ನನಸಾಗುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ ಮಗುವಿನಂತೆ ಅಳುತ್ತಿದ್ದರು. ಅವರು ಮಿಶ್ರ ಭಾವನೆಗಳನ್ನು ತೋರಿಸಿದರು, ಒಂದು ಕಡೆ ಅಳುವುದು ಮತ್ತು ಇನ್ನೊಂದು ಕಡೆ ನಗುವುದು. ರಾಷ್ಟ್ರಧ್ವಜ ತಂದು ನೆಲದಲ್ಲಿ ನೆಟ್ಟರು. ಆದರೆ ರೋಹಿತ್ ಮಾಡಿದ ಒಂದು ಕೆಲಸ ಇದೀಗ ವೈರಲ್ ಆಗುತ್ತಿದೆ.

ಶರ್ಮ ವಿಭಿನ್ನ ಸಂಭ್ರಮಾಚರಣೆಯ ಹಿಂದಿನ ಕಾರಣವೇನು…?
ವಿಶ್ವಕಪ್ ವೇಳೆ ರೋಹಿತ್ ವಿಚಿತ್ರವಾಗಿ ವರ್ತಿಸಿದ್ದರು. ಹಿಟ್‌ ಮ್ಯಾನ್ ಸ್ವಲ್ಪ ಬಗ್ಗಿ ವಿಭಿನ್ನ ಶೈಲಿಯಲ್ಲಿ ನಡೆಯುತ್ತಾ ವೇದಿಕೆಯನ್ನು ತಲುಪಿದರು. ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಕೈಯಿಂದ ಟ್ರೋಫಿ ಸ್ವೀಕರಿಸಿ ಸಂಭ್ರಮದಲ್ಲಿ ಮುಳುಗಿದರು. ರೋಹಿತ್ ನ ಈ ನಡೆ ಏನೆಂದು ತಿಳಿದು ಎಲ್ಲರಿಗೂ ಆಶ್ಚರ್ಯವಾಗಿದೆ.

Join Nadunudi News WhatsApp Group

ಆದರೆ, ಇದು ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಯ ಶೈಲಿ ಎಂಬುದು ಅನೇಕರಿಗೆ ತಿಳಿದಿಲ್ಲ. ಅರ್ಜೆಂಟೀನಾ ಫುಟ್ಬಾಲ್ ವಿಶ್ವಕಪ್ ಗೆದ್ದಾಗ ಮೆಸ್ಸಿ ಕೂಡ ಇದೇ ರೀತಿ ಸಂಭ್ರಮಿಸಿದರು. ಅಂದಿನಿಂದ ಈ ವಿಭಿನ್ನ ಆಚರಣೆ ಬಹುತೇಕ ಸಂಪ್ರದಾಯಕವಾಗಿದೆ. ಇತರ ಕ್ರೀಡೆಗಳಲ್ಲಿಯೂ ಕಪ್ ಗೆದ್ದಾಗ ಹೀಗೆ ಮಾಡುವುದು ಸಾಮಾನ್ಯ. ರೋಹಿತ್ ಕೂಡ ಮೆಸ್ಸಿಯ ಸಂಭ್ರಮಾಚರಣೆಯನ್ನು ಅನುಕರಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.

t20 world cup 2024 trophy
Image Credit: Lokmattimes

Join Nadunudi News WhatsApp Group