Roopesh Shetty And Rishabh Shetty: ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಬಗ್ಗೆ ಹೇಳಿಕೊಂಡ ರೂಪೇಶ್ ಶೆಟ್ಟಿ.

Roopesh Shetty And Rishabh Shetty: ಜನರ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 (Bigg Boss Season 9) ಮುಕ್ತಾಯವಾಗಿ ಸತತ ಒಂದು ವಾರ ಕಳೆದಿದೆ. ಬಿಗ್ ಬಾಸ್ ಮನೆಯಲ್ಲಿ ಆಕ್ಟಿವ್ ಆಗಿ ಎಲ್ಲರ ಮನ ಸೆಳೆದ ರೂಪೇಶ್ ಬಿಗ್ ಬಾಸ್ ವಿನ್ನರ್ ಆಗಿ ಹೊರ ಬಂದಿದ್ದಾರೆ.

ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ಮನೆಯಿಂದ ಹೊರ ಬಂದು ಕನ್ನಡ ಸಿನಿಮಾಗಳ ಆಫರ್ ಗಳಿಗಾಗಿ ಕಾಯುತ್ತಿದ್ದಾರೆ.

Rupesh Shetty said about doing a movie with Rishabh Shetty.
Image Source: India Today

ರಿಷಬ್ ಶೆಟ್ಟಿ ಜೊತೆಗಿನ ಸಿನಿಮಾ ಮಾಡುವ ಆಸೆಯನ್ನು ಹೇಳಿಕೊಂಡ ರೂಪೇಶ್
ಬಿಗ್ ಬಾಸ್ ವಿನ್ನರ್ ಆಗಿ ಬಹಳ ಜನಪ್ರಿಯತೆ ಪಡೆದ ರೂಪೇಶ್ ಈಗ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ರೂಪೇಶ್ ಶೆಟ್ಟಿ ಅವರಿಗೆ ರಿಷಬ್ ಶೆಟ್ಟಿ ಅಂದರೆ ಬಹಳ ಇಷ್ಟವಂತೆ.

ರಿಷಬ್ ಶೆಟ್ಟಿ (Rishab Shetty) ಜೊತೆಗೆ ರೂಪೇಶ್ ಶೆಟ್ಟಿ ಗೆ ಸಿನಿಮಾ ಮಾಡಲು ಆಸೆ ಇದೆಯಂತೆ. ಈ ವಿಚಾರವನ್ನು ಸ್ವತಃ ರೂಪೇಶ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ.

Rupesh Shetty said about doing a movie with Rishabh Shetty.
Image Source: Times Of India

ಸಿನಿಮಾದಲ್ಲಿ ಮಿಂಚಲು ರೆಡಿಯಾದ ರೂಪೇಶ್ ಶೆಟ್ಟಿ
ರೂಪೇಶ್ ಶೆಟ್ಟಿ ಸಿನಿಮಾ ಮಾಡುವುದರ ಬಗ್ಗೆ ಮಾತನಾಡಿದ್ದಾರೆ. ನನಗೆ ಜವಾಬ್ದಾರಿ ಇದೆ. ದುಡ್ಡು ಸಿಗುತ್ತದೆ ಅಂತ ಸಿನಿಮಾ ಮಾಡಲ್ಲ. ನನಗೆ ತುಂಬಾ ಕಡೆಯಿಂದ ಕಾಲ್ ಬಂದಿದೆ. ಅನುಭವ ಇರುವ ನಿರ್ದೇಶಕರೇ ಕರೆ ಮಾಡಿದ್ದಾರೆ. ಒಳ್ಳೆಯ ಸಿನಿಮಾ ಮಾಡುತ್ತೇನೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.

Join Nadunudi News WhatsApp Group

ನಾನು ವ್ಯಕ್ತಿತ್ವದಿಂದ ಪ್ರೀತಿ ಗಳಿಸಿದ್ದೇನೆ. ಒಳ್ಳೆಯ ಸಿನಿಮಾ ಮಾಡಿ ಆ ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ. ಜನರ ಪ್ರೀತಿ ಗಳಿಸುವುದು ತುಂಬಾ ಕಷ್ಟ. ಗಳಿಸಿದ ಮೇಲೆ ಅದನ್ನು ಉಳಿಸಿಕೊಂಡು ಹೋಗಬೇಕು. ಒಳ್ಳೆಯ ಸಿನಿಮಾವನ್ನು ಮಾಡಲು ನಾನು ರೆಡಿಯಾಗಿದ್ದೇನೆ ಎಂದು ರೂಪೇಶ್ ಹೇಳಿಕೊಂಡಿದ್ದಾರೆ.

Rupesh Shetty said about doing a movie with Rishabh Shetty.
Image Source: India Today

 

ರಕ್ಷಿತ್ ಸರ್ ಜೊತೆ ನಟಿಸಲು ಚಾನ್ಸ್ ಸಿಕ್ಕರೆ ಅದು ನನ್ನ ಭಾಗ್ಯ ಎಂದ ರೂಪೇಶ್
ರೂಪೇಶ್ ಶೆಟ್ಟಿ ಅವರಿಗೆ ರಿಷಬ್ ಶೆಟ್ಟಿ ಅಂದರೆ ತುಂಬಾ ಇಷ್ಟ ಅಂತೆ. ಈಗ ಅಲ್ಲ ಮೊದಲಿನಿಂದ ಅಂದಿದ್ದಾರೆ. ನನ್ನ ತುಳು ಸಿನಿಮಾ ಗಿರ್ ಗಿಟ್ ಗೆ ರಿಷಬ್ ಶೆಟ್ಟಿ ತನೆಂಬ ಸಹಾಯ ಮಾಡಿದ್ದಾರೆ. ನನಗೆ ಅವರ ಜೊತೆ ಸಿನಿಮಾ ಮಾಡಲು ಇಷ್ಟ ಎಂದು ರೂಪೇಶ್ ಹೇಳಿದ್ದಾರೆ.

ರಿಷಬ್ ಶೆಟ್ಟಿ ಅವರು ನಟ ಅನ್ನುವುದಕ್ಕಿಂತ ಹೆಚ್ಚು ನನಗೆ ನಿರ್ದೇಶಕನಾಗಿ ಇಷ್ಟ. ರಕ್ಷಿತ್ ಶೆಟ್ಟಿ (Rakshith Shetty) ಸರ್ ಜೊತೆ ಚಾನ್ಸ್ ಸಿಕ್ಕರೂ ಅದು ನನ್ನ ಭಾಗ್ಯ ಎಂದಿದ್ದಾರೆ ರೂಪೇಶ್. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ (Raj B Shetty)ಮೂವರಲ್ಲಿ ಯಾರ ಜೊತೆ ಸಿನಿಮಾ ಮಾಡಲು ಅವಕಾಶ ಸಿಕ್ಕರ್ ತುಂಬಾ ಖುಷಿ ಎಂದು ರೂಪೇಶ್ ಅವರು ಹೇಳಿದ್ದಾರೆ.

Join Nadunudi News WhatsApp Group