ಇದೀಗ ನೀವು ಡಿಪ್ಲೊಮೊ ಅಥವಾ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿ ರೈಲ್ವೆ ಅಲ್ಲಿ ಉದ್ಯೋಗಕ್ಕಾಗಿ ಹುಡುಕುತಿದ್ದರೆ, ಈ ಮಾಹಿತಿ ನಿಮಗೆ ಬಹಳ ಉಪಯುಕ್ತವಾಗುತ್ತದೆ. ಇದೀಗ Railway Recruitment Board 2025 ರ CEN 05 ಅಡಿಯಲ್ಲಿ ಜೂನಿಯರ್ ಇಂಜಿನಿಯರ್ (JE), ಡಿಪೋ ಮೆಟಿರಿಯಲ್ ಸೂಪರಿಂಟೆಂಡೆಂಟ್ (DMS) ಮತ್ತು ಕೆಮಿಕಲ್ ಮೆಟಲರ್ಜಿಕಲ್ ಅಸಿಸ್ಟೆಂಟ್ (CMA) ಹುದ್ದೆಗಳಿಗೆ ಅರ್ಜಿಯನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ನೀವೀಗ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.
ರೈಲ್ವೆ ನೇಮಕಾತಿ
ಈ ನೇಮಕಾತಿಯ ಮೊದಲು 2569 ಹುದ್ದೆಗಳು, ಈಗ RRB ಚನ್ನೈ ಮತ್ತು ಜಮ್ಮು – ಶ್ರೀ ನಗರ್ ವಲಯದಲ್ಲಿ ಸೇರಿ 2588 ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಲಾಗಿದೆ. ಇದು ಭಾರತದ 21 RRB ಗಳ ಮೂಲಕ ನೆಡೆಯುತ್ತದೆ. ಹುದ್ದೆಗಳು ಭಾರತದಾದ್ಯಂತ ಹಂಚಲ್ಪಟ್ಟಿವೆ, ನೀವು ನಿಮ್ಮ ಸ್ಥಳೀಯ RRB ಗೆ ಆಧ್ಯತೆ ನೀಡಿ ಅರ್ಜಿ ಸಲ್ಲಿಸಿ.
ಹುದ್ದೆಗಳ ಹಂಚಿಕೆ
ಈ ಹುದ್ದೆಗಳನ್ನ ಮುಖ್ಯವಾಗಿ ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್, ಸಿಗ್ನಲ್ & ಟೆಲಿಕಾಂ ಮತ್ತು ಸ್ಟೋರ್ಸ್ ಡಿಪಾರ್ಟ್ಮೆಂಟ್ ಗಳಲ್ಲಿ ಹಂಚಲಾಗುತ್ತದೆ. ಇದರಲ್ಲಿ RRB ಬೆಂಗಳೂರು ವಲಯದಲ್ಲಿ ಸಿವಿಲ್ ಇಂಜಿನಿಯರ್ ಗೆ 150 ಹುದ್ದೆಗಳು, ಇದು ಕರ್ನಾಟಕದ ಸ್ಥಳೀಯ ಯುವಕರಿಗೆ ಅವಕಾಶ ನೀಡುತ್ತದೆ. 7 ನೇ ವೇತನ ಆಯೋಗದ ಪ್ರಕಾರ 35,400 ರಿಂದ ವೇತನ ಆರಂಭವಾಗುತ್ತದೆ. ಇದರ ಜೊತೆಗೆ DA, HRA, ಮೆಡಿಕಲ್ ಇನ್ಸೂರೆನ್ಸ್ ಹಾಗೆ ಪೆನ್ಷನ್ ಲಭ್ಯವಿರುತ್ತದೆ.
ಅರ್ಹತೆ
* JE – ಸಂಬಂದಿತ ಶಾಖೆಯಲ್ಲಿ (ಸಿವಿಲ್, ಮೆಕ್ಯಾನಿಕಲ್) 3 ವರ್ಷಗಳ ಡಿಪ್ಲೋಮಾ ಅಥವಾ B.Tech/B.E ಪದವಿ ಅಗತ್ಯ
* DMS – ಯಾವುದೇ ಇಂಜಿನಿಯರಿಂಗ್ ಡಿಪ್ಲೋಮಾ
*CMA – ಕೆಮಿಸ್ಟ್ರಿ ಅಥವಾ ಮೆಟಲರ್ಜಿ ಸಂಬಂಧಿತ ವಿದ್ಯಾರ್ಹತೆ
* ಎಲ್ಲಾ ಡಿಗ್ರಿಗಳು AICTE ಅಥವಾ UGC ಅನುಮೋದಿತ ಸಂಸ್ಥೆಗಳಿಂದ ಇರಬೇಕು.
ವಯೋಮಿತಿ
ಜನವರಿ 1 2026 ರಂತೆ 18 ರಿಂದ 33 ವರ್ಷದೊಳಗಿನವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. SC / ST ಗೆ 5 ವರ್ಷ, OBC ಗೆ 3 ವರ್ಷ ಹಾಗೆ PwBD ಗೆ 10 ವರ್ಷ ಸಡಿಲಿಕೆ ಇದೆ. ರೆಸೆರ್ವಶನ್ ಸರ್ಕಾರೀ ನೀತಿಯಂತೆ, SC – 15%, ST – 7.5%, OBC – 27%, EWS – 10%, PwBD – 4%. ಮಹಿಳೆಯರಿಗೆ ಹಾರಿಜಾಂಟಲ್ ರೆಸೆರ್ವಶನ್ ಇದ್ದು, ಎಲ್ಲಾ ವರ್ಗಗಳಲ್ಲಿ ಅವಕಾಶ ಸಮಾನವಾಗಿ ಹಂಚಲಾಗುತ್ತದೆ.
ಅರ್ಜಿ ಸಲ್ಲಿಕೆ
ಅರ್ಜಿಯನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕ ಮಾಡಲಾಗುತ್ತದೆ. https://www.rrbapply.gov.in/#/auth/landing ವೆಬ್ ಸೈಟ್ ಗೆ ಭೇಟಿನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
* ನೋಂದಣಿ ಮಾಡಿಕೊಳ್ಳಿ
* ವಯಕ್ತಿಕ ಮಾಹಿತಿ ಭರ್ತಿ ಮಾಡಿ
* ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ
* ಶುಲ್ಕ ಪಾವತಿ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಡಿಸೆಂಬರ್ 10, 2025 ಆಗಿದೆ, ಶುಲ್ಕ ಪಾವತಿಗೆ ಕೊನೆಯ ದಿನಾಂಕ ಡಿಸೆಂಬರ್ 12, 2025 ಆಗಿದೆ.
ಶುಲ್ಕದ ವಿವರ
* General / OBC / EWS – 500 ರೂ. (CBT – 1 ಉತ್ತೀರ್ಣರಾದವರಿಗೆ 400 ಮರುಪಾವತಿಮಾಡಲಾಗುತ್ತದೆ)
* SC/ST / PwBD / ಮಹಿಳೆ / ದೇಶಸೇವಕರಿಗೆ – 250
* ಟ್ರ್ಯಾನ್ಸ್ಜೆಂಡರ್ – ಉಚಿತ
* ಪಾವತಿ – ಆನ್ಲೈನ್ (ನೆಟ್ ಬ್ಯಾಂಕಿಂಗ್, ಕಾರ್ಡ್, UPI) ಅಥವಾ SBI ಬ್ರಾಂಚ್ ನಲ್ಲಿ ಪಾವತಿ ಮಾಡಬಹುದಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

