Salman Khan: ಐಶ್ವರ್ಯ ರೈ ಮೇಲೆ ಹಲ್ಲೆ ಮಾಡಿದ ಸಲ್ಮಾನ್ ಖಾನ್, ಸುದ್ದಿಗೆ ಸ್ಪಷ್ಟನೆ ಕೊಟ್ಟ ಸಲ್ಲು.

ಐಶ್ವರ್ಯ ರೈ ಮಾಡಿದ ಹಳೆಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಲ್ಮಾನಖಾನ್.

Aishwarya Rai And Salman Khan: ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಇದೀಗ ಸುದ್ದಿಯಲ್ಲಿದ್ದಾರೆ. ನಟ ಸಲ್ಮಾನ್ ಖಾನ್ ಅವರು ತಮ್ಮ ಹೊಸ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ಸಲ್ಮಾನ್ ಖಾನ್ ಅವರು ಹೆಣ್ಣು ಮಕ್ಕಳು ಧರಿಸುವ ಬಟ್ಟೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸಲ್ಮಾನ್ ಖಾನ್ ಹೇಳಿಕೆಯಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಸಲ್ಲು ಮತ್ತೆ ತಮ್ಮ ಹಳೆಯ ಪ್ರೀತಿಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಐಶ್ವರ್ಯ ರೈ (Aishwarya Rai) ಮಾಡಿದ ಆರೋಪದ ಬಗ್ಗೆ ಸಲ್ಮಾನ್ ಖಾನ್ ಇದೀಗ ಉತ್ತರ ನೀಡಿದ್ದಾರೆ.

Salman Khan reacts to Aishwarya Rai's assault allegation.
Image Credit: bollywoodmdb

ಸಲ್ಮಾನ್ ಖಾನ್ ಕುರಿತು ಆರೋಪ ಮಾಡಿದ ಐಶ್ವರ್ಯ ರೈ
ಬಾಲಿವುಡ್ ನಲ್ಲಿ ಸಾಕಷ್ಟು ಲವ್ ಸ್ಟೋರಿ ಗಳು ಬ್ರೇಕ್ ಆಗಿವೆ. ಅದರಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಕೂಡ ಒಬ್ಬರು. ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ವೇಳೆ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ ಈ ಪ್ರೀತಿ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಸಲ್ಮಾನ್ ಖಾನ್ ವಿರುದ್ಧ ಆಶ್ವರ್ಯ ರೈ ಆರೋಪ ಮಾಡಿದ್ದರು.

2002 ರ ಸಂದರ್ಶನದಲ್ಲಿ ನಟಿ ಐಶ್ವರ್ಯ ರೈ ಸಲ್ಮಾನ್ ಖಾನ್ ಕುರಿತು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ನಾನು ಅವನ ಕುಡಿತದ ಚಟದಿಂದ ಬೇಸತ್ತಿದ್ದೆ. ನಿಂದನೆಯನ್ನು ಸಹಿಸಿಕೊಳ್ಳುತ್ತಿದ್ದೆ. ಆದರೆ ಪ್ರತಿಯಾಗಿ ನಾನು ದೈಹಿಕ, ಮೌಖಿಕ ಮತ್ತು ಭಾವನಾತ್ಮಕ ಹಿಂಸೆಯನ್ನು ಎದುರಿಸಬೇಕಾಗಿತ್ತು. ದ್ರೋಹ ಮತ್ತು ಅವಮಾನಕ್ಕೆ ಬಲಿಯಾಗಬೇಕಾಗಿದೆ ‘ ಎಂದು ಸಲ್ಮಾನ್ ಖಾನ್ ವಿರುದ್ಧ ಐಶ್ವರ್ಯ ರೈ ಆರೋಪ ಮಾಡಿದ್ದಾರೆ.

Salman Khan's reply to Aishwarya Rai's allegations.
Image Credit: indiatvnews

ಐಶ್ವರ್ಯ ರೈ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಲ್ಮಾನ್ ಖಾನ್
ಐಶ್ವರ್ಯ ರೈ ಅವರು ಸಲ್ಮಾನ್ ಖಾನ್ ವಿರುದ್ಧ ಮಾಡಿದ ಆರೋಪಗಳಿವೆ ಇದೀಗ ಉತ್ತರ ನೀಡಿದ್ದಾರೆ. “ಈಗ ನಾನೇನು ಹೇಳಬೇಕು. ಮಹಿಳೆ ಹೇಳಿದ್ದಾರೆ. ನನಗೆ ಕೋಪ ಬಂದು ನಾನು ಅವಳನ್ನು ಹೊಡೆದಿದ್ದರೆ, ಅವಳು ಅದರಿಂದ ತಪ್ಪಿಸಿಕೊಳ್ಳುತ್ತಿದ್ದಳು ಎಂದು ಭಾವಿಸುವುದಿಲ್ಲ” ಎಂದಿದ್ದಾರೆ.

Join Nadunudi News WhatsApp Group

Join Nadunudi News WhatsApp Group