Salman Khan: ಅಂಬಾನಿ ಮನಗ ನಿಶ್ಚಿತಾರ್ಥಕ್ಕೆ ಸುಂದರ ನಟಿಯ ಜೊತೆ ಬಂದ ಸಲ್ಮಾನ್ ಖಾನ್, ಪ್ರಶ್ನೆಗಳ ಸುರಿಮಳೆ.

Salman Khan With Alizeh Agnihotri:  ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika merchant) ಅವರ ನಿಶ್ಚಿತಾರ್ಥ ಮೊನ್ನೆಯಷ್ಟೇ ಅದ್ದೂರಿಯಾಗಿ ನೆರವೇರಿದ್ದು ಈ ಶುಭ ಸಮಾರಂಭಕ್ಕೆ ಹಲವಾರು ಕಲಾವಿದರು ಗಣ್ಯರು ಆಗಮಿಸಿದ್ದರು.

ಅದೇ ರೀತಿ ನಟ ಸಲ್ಮಾನ್ ಖಾನ್ (Salman Khan) ಸಹ ತನ್ನ ಸೊಸೆಯೊಂದಿಗೆ ಆಗಮಿಸಿದ್ದರು. ಇದೀಗ ಈ ಫೋಟೋ ವೈರಲ್ ಆಗಿದೆ.

ಅಂಬಾನಿ ಮನೆಯ ನಿಶ್ಚಿತಾರ್ಥದಲ್ಲಿ ಸಲ್ಮಾನ್ ಖಾನ್
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಸಲ್ಮಾನ್ ಖಾನ್ ತಮ್ಮ ಸೊಸೆ ಅಲಿಜಿ ಅಗ್ನಿ ಹೋತ್ರಿಯೊಂದಿಗೆ (Alizeh Agnihotri) ಆಗಮಿಸಿದರು ಸಲ್ಮಾನ್ ಖಾನ್ ಪಾರ್ಟಿಗೆ ಪ್ರವೇಶಿಸಿದ ತಕ್ಷಣ ಅಲ್ಲಿದ್ದ ಎಲ್ಲ ಕ್ಯಾಮೆರಾಗಳು ಭಾಯಿಜಾನ್ ಕಡೆಗೆ ತಿರುಗಿದವು.

Anant Ambani Engagement
Image Source: India Today

ಸಲ್ಮಾನ್ ಖಾನ್ ಜೊತೆ ಅವರ ಸೋದರ ಸೊಸೆ ಅಲಿಜಿ
ಸಲ್ಮಾನ್ ಖಾನ್ ಜೊತೆಗೆ ಅಂಬಾನಿ ಕುಟುಂಬದ ಸಮಾರಂಭಕ್ಕೆ ಅವರ ಸೋದರ ಸೊಸೆ ಅಲಿಜಿ ಅಗ್ನಿಹೋತ್ರಿ ಬಂದಿದ್ದರು. ಅಲಿಜಿ ಸಿಲ್ವರ್ ಮತ್ತು ಮ್ಯಾಚಿಂಗ್ ಹೀಲ್ಸ್ ಜೊತೆಗೆ ವೈಟ್ ಕಲರ್ ಡೀಪ್ ನೆಕ್ ಡ್ರೆಸ್ ಮತ್ತು ಮಿರರ್ ವರ್ಕ್ಸ್ ಲೆಹೆಂಗಾ ಧರಿಸಿದ್ದರು.

ಅಲಿಜಿ ಅವರ ಈ ಲುಕ್ ಅನನ್ಯ ಪಾಂಡೆ ಮತ್ತು ಜಾಹ್ನವಿ ಕಪೂರ್ ಅವರ ನೋಟಕ್ಕೆ ಕಠಿಣ ಸ್ಪರ್ಧೆಯನ್ನು ನೀಡುವಂತೆ ಇದಿತ್ತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥಕ್ಕೆ (Engegment) ಅನನ್ಯ ಪಾಂಡೆ ಬಿಳಿ ಬಟ್ಟೆಯನ್ನು ಧರಿಸಿ ಬಂದರು.

Join Nadunudi News WhatsApp Group

salman khan with alizah agnihotri
Image Source: India Today

ಸಲ್ಮಾನ್ ಖಾನ್ ಸೊಸೆಯ ಮೊದಲ ಸಿನಿಮಾ
ಅಲಿಜಿ ಖಾನ್ ಅಗ್ನಿಹೋತ್ರಿ ಅಲ್ವಿರಾ ಖಾನ್ ಮತ್ತು ಸಲ್ಮಾನ್ ಖಾನ್ ಅವರ ತಂಗಿ ಅತುಲ್ ಅಗ್ನಿಹೋತ್ರಿ ಅವರ ಪುತ್ರಿ, ಅಂದರೆ ಸಲ್ಮಾನ್ ಖಾನ್ ಸಹೋದರಿ ಶೀಘ್ರದಲ್ಲಿಯೇ ಬಾಲಿವುಡ್ (Bollywood) ಗೆ ಪಾದಾರ್ಪಣೆ ಮಾಡಲಿದ್ದಾರೆ.

ಅಲಿಜಿ ಈಗಾಗಲೇ ತನ್ನ ಮೊದಲ ಚಿತ್ರದ ಚಿತ್ರೀಕರವನ್ನು ಪ್ರಾರಂಭಿಸಿದ್ದಾರೆ. ಈ ಚಿತ್ರವು 2023 ರಲ್ಲಿ ದೊಡ್ಡ ತೆರೆಯ ಮೇಲೆ ಬಿಡುಗಡೆ ಆಗಲಿದೆ ಎಂದು ಹೇಳುತ್ತಿದ್ದಾರೆ.

Join Nadunudi News WhatsApp Group