Samantha Ruth Prabhu: ವಿಜಯ್ ದೇವರಕೊಂಡ ಭಾವಿ ಪತ್ನಿ ಯಾರೆಂದು ತಿಳಿಸಿದ ಸಮಂತಾ, ಪಾಪ ರಶ್ಮಿಕಾ ಕತೆ ಏನು ಅಂದ ಫ್ಯಾನ್ಸ್.

ಸಮಂತಾ ಅವರು ವಿಜಯ್ ದೇವರಕೊಂಡ ಭಾವಿ ಪತ್ನಿ ಹೇಗಿರಬೇನ್ನುವ ಬಗ್ಗೆ ಹೇಳಿದ್ದಾರೆ.

Samantha About Vijay Devarakonda Future Wife: ಸದ್ಯ ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ (Vijay Devarakonda) ಹಾಗೂ ಸಮಂತಾ (Samantha Ruth Prabhu) ನಟನೆಯ ಖುಷಿ ಮೂವಿ ಭರ್ಜರಿ ಸದ್ದು ಮಾಡುತ್ತಿದೆ. ಈ ಜೋಡಿ ಇದೀಗ ಬಾರಿ ಸುದ್ದಿಯಾಗಿದ್ದಾರೆ. ನಟ ವಿಜಯ್ ದೇವರಕೊಂಡ ಅವರು ಹೆಚ್ಚಾಗಿ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಅವರ ವಿಚಾರವಾಗಿ ಸದಾ ವೈರಲ್ ಆಗುತ್ತಾರೆ. ಆದರೆ ಇತ್ತೀಚಿಗೆ ನಟ ಸಮಂತಾ ಅವರ ವಿಚಾರವಾಗಿ ಹೈಲೈಟ್ ಆಗುತ್ತಿದ್ದಾರೆ.

Samanth About Vijay Devarakonda Wife
Image Credit: Jfwonline

ತೆರೆ ಮೇಲೆ ವಿಜಯ್ ದೇವರಕೊಂಡ ಹಾಗೂ ಸಮಂತಾ
ಇನ್ನು ನಟ ವಿಜಯ್ ದೇವರಕೊಂಡ ಅವರು ನಟಿ ಸಮಂತಾ ಅವರ ಜೊತೆ ಖುಷಿ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಬರುವ ಬಗ್ಗೆ ಎಲ್ಲರಿಗೂ ಮಾಹಿತಿ ತಿಳಿದಿದೆ. ಈಗಾಗಲೇ ಖುಷಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಇನ್ನು ಖುಷಿ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಹಾಗೂ ಸಮಂತಾ ಕೆಮಿಸ್ಟ್ರಿಯನ್ನು ಜನರು ಇಷ್ಟಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಖುಷಿ ಚಿತ್ರದ ಒಂದಿಷ್ಟು ಪೋಸ್ಟರ್ ಗಳು ವೈರಲ್ ಆಗುತ್ತಿದೆ. ಖುಷಿ ಟ್ರೈಲರ್ ಕೂಡ ರಿಲೀಸ್ ಆಗಿದ್ದು ವ್ಯಾಪಕ ಮೆಚ್ಚುಗೆ ಗಳಿಸಿದೆ.

ಸಮಂತಾ ನನ್ನ ಕ್ರಶ್ ಎಂದ ನಟ
ಇತ್ತೀಚಿಗೆ ನಟ ವಿಜಯ್ ದೇವರಕೊಂಡ ಅವರು ಸಮಂತಾ ನನ್ನ ಕ್ರಶ್ ಎಂದು ಹೇಳಿದ್ದರು. ಈ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಸದ್ಯ ವಿಜಯ್ ಕ್ರಶ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿದ್ದು ಸಮಂತಾ ನಿಮ್ಮ ಕ್ರಶ್ ಆದರೆ ರಶ್ಮಿಕಾ ಕತೆ ಏನು ಎಂದು ಕೆಲ ನೆಟ್ಟಿಗರು ಕಮೆಂಟ್ ಮಾಡಿದ್ದರು.

Vijay Devarakonda and Samantha on screen
Image Credit: Cinemaexpress

ಈ ಸುದ್ದಿ ವೈರಲ್ ಆಗಿದ್ದ ಬೆನ್ನಲ್ಲೇ ಇದೀಗ ನಟಿ ಸಮಂತಾ ವಿಜಯ್ ದೇವರಕೊಂಡ ಅವರ ಭಾವಿ ಪತ್ನಿ ಹೇಗಿರಬೇಕು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಸಮಂತಾ ಅವರ ಈ ಹೇಳಿಕೆಗೂ ಕೂಡ ರಶ್ಮಿಕಾ ಅವರನ್ನು ಎಳೆಯಲಾಗುತ್ತಿದೆ.

Join Nadunudi News WhatsApp Group

ವಿಜಯ್ ದೇವರಕೊಂಡ ಭಾವಿ ಪತ್ನಿ ಯಾರೆಂದು ತಿಳಿಸಿದ ಸಮಂತಾ
ಇನ್ನು ವಿಜಯ್ ದೇವರಕೊಂಡ ಹಾಗೂ ಸಮಂತಾ ಖುಷಿ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯ ವೇಳೆ ಸಮಂತಾ ಅವರು ವಿಜಯ್ ದೇವರಕೊಂಡ ಭಾವಿ ಪತ್ನಿ ಹೇಗಿರಬೇನ್ನುವ ಬಗ್ಗೆ ಹೇಳಿದ್ದಾರೆ.

“ವಿಜಯ್ ಅವರಿಗೆ ಪತ್ನಿಯಾಗಿ ಬರುವವರು ಸಾಮಾನ್ಯರಲ್ಲಿ ಸಾಮಾನ್ಯವಾಗಿರಬೇಕು, ಕುಟುಂಬದ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಅತಿ ಹೆಚ್ಚು ಪ್ರೀತಿಸಬೇಕು” ಎಂದಿದ್ದಾರೆ. ಸಮಂತಾ ಅವರ ಈ ಮಾತು ವೈರಲ್ ಆಗುತ್ತಿದಂತೆ ನೆಟ್ಟಿಗರು ರಶ್ಮಿಕಾ ಮಂದಣ್ಣ ಕಾಲೆಳೆಯಲು ಶುರು ಮಾಡಿದ್ದಾರೆ.

Join Nadunudi News WhatsApp Group