Samantha Dating: ಇನ್ನೊಬ್ಬ ನಟನ ಪ್ರೀತಿಯಲ್ಲಿ ಬಿದ್ದ ಸಮಂತಾ, ವೈರಲ್ ಆಗಿದೆ ಸಮಂತಾ ಪೋಸ್ಟ್

ಖ್ಯಾತ ನಟನ ಜೊತೆ ಸಮಂತಾ ಡೇಟಿಂಗ್

Samantha Dating Latest Update: ನಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದು ಮೂರು ವರ್ಷಗಳೇ ಕಳೆದಿದೆ. ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಹಾಗು ನಟ ನಾಗ ಚೈತನ್ಯ (Naga Chaitanya) ಪರಸ್ಪರ ಪ್ರೀತಿಸಿ ಮದುವೆಯಾದರು ಸಹ ಅವರ ದಾಂಪತ್ಯ ಜೀವನದಲ್ಲಿ ಬಿನ್ನಾಭಿಪ್ರಾಯ ಉಂಟಾಗಿ ಇಬ್ಬರು ಡಿವೋರ್ಸ್ ಪಡೆದಿದ್ದರು.

ಆದಾಗ್ಯೂ, ಈ ಜೋಡಿ ವಿಚ್ಛೇದನದ ಬಳಿಕವೂ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ಬಗ್ಗೆ ಆಗಾಗ ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸದ್ಯ ನಟಿ ಸಮಂತಾ ಇನ್ಸ್ಟಾಗ್ರಾಮ್ ಪೋಸ್ಟ್ ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ನಟಿ ಸಮಂತಾ ವಿಚ್ಛೇದನದ ಬಳಿಕ ಮತ್ತೆ ಪ್ರೀತಿಯಲ್ಲಿ ಬಿದ್ದರಾ…? ಎನ್ನುವುದನ್ನು ಸದ್ಯದ ಹಾಟ್ ಟಾಪಿಕ್ ಆಗಿದೆ. ಅಷ್ಟಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಮತ್ತೆ ಸುದ್ದಿಯಾಗಲು ಕಾರಣವೇನು…? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Samantha Dating Latest Update
Image Credit: Pinkvilla

ವಿಚ್ಛೇದನದ ಬಳಿಕ ಮತ್ತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ…!
ನಟಿ ಸಮಂತಾ Instagram ನಲ್ಲಿ ಸದ್ಯ ಸಕ್ರಿಯರಾಗಿದ್ದಾರೆ. ಆಗಾಗ್ಗೆ ತಮ್ಮ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಸಮಂತಾ ಅಭಿಮಾನಿಗಳಿಗೆ ಬಹುದೊಡ್ಡ ಸುಳಿವು ನೀಡಿದ್ದಾರೆ. ತಮ್ಮ ಪೋಸ್ಟ್ ಒಂದರ ಶೀರ್ಷಿಕೆಯಲ್ಲಿ ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ. ಇದನ್ನು ನೋಡಿದ ನೆಟಿಜನ್ ಗಳು ವಿಚ್ಛೇದನದ ನಂತರ ನಟಿ ಸಮಂತಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಸಮಂತಾ ಅವರ ಈ ಪೋಸ್ಟ್ ಬಾರಿ ಚರ್ಚೆಗೆ ಕಾರಣವಾಗಿದೆ ಎನ್ನಬಹುದು.

 

View this post on Instagram

 

A post shared by Samantha (@samantharuthprabhuoffl)

ಖ್ಯಾತ ನಟನ ಜೊತೆ ಸಮಂತಾ ಡೇಟಿಂಗ್
ಈ ಪೋಸ್ಟ್ ಬೆನ್ನಲ್ಲೇ ನಟಿ ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ಕೈಯಲ್ಲಿ Find honey on 01-08 ಎಂದು ಬರೆಯಲಾಗಿದೆ. ಇದನ್ನೂ ನೋಡಿದ ನೆಟ್ಟಿಗರು ಇದು ಸಿನಿಮಾಗೆ ಸಂಬಂಧಿಸಿದ ಪೋಸ್ಟ್ ಅಥವಾ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪೋಸ್ಟ್ ಇರಬಹುದಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ಕಾಮೆಂಟ್‌ ಗಳ ಬಗ್ಗೆ ಹೇಳುವುದಾದರೆ, ನಿಮ್ಮ ಜೀವನದಲ್ಲಿ ಆ ನಿಗೂಢ ವ್ಯಕ್ತಿ ಯಾರು..? ಎಂದು ಒಬ್ಬರು ಬರೆದಿದ್ದಾರೆ.. ನನಗೆ ನಂಬಲಾಗುತ್ತಿಲ್ಲ, ನಾನು 1 ನೇ ದಿನಾಂಕಕ್ಕಾಗಿ ಕಾಯುತ್ತಿದ್ದೇನೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಆದರೆ ಇದು ಯಾರ ಬಗ್ಗೆ ಎಂದು ಸಮಂತಾ ಈ ಪೋಸ್ಟ್‌ ನಲ್ಲಿ ಖಚಿತಪಡಿಸಿಲ್ಲ. ನಟಿ ಸಮಂತಾ ಈ ವೈರಲ್ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡುವವರೆಗೆ ಕಾಯಬೇಕಿದೆ.

Join Nadunudi News WhatsApp Group

Samantha Ruth Prabhu Latest
Image Credit: News 18

Join Nadunudi News WhatsApp Group