Sanya Iyer Graduated: ಗ್ರ್ಯಾಜುಯೆಟ್ ಆದ ಪುಟ್ಟಗೌರಿ, ಪದವಿ ಪಡೆದ ಖುಷಿಯಲ್ಲಿ ಸಾನ್ಯ ಅಯ್ಯರ್.

Sanya Iyer Graduatede: ಕಲರ್ಸ್ ಕನ್ನಡ ಚಾನಲ್ (Colors Kannada Channel) ನಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಸೀರಿಯಲ್ ಮೂಲಕ ಪರಿಚಿತರಾದ ನಟಿ ಸಾನ್ಯ ಅಯ್ಯರ್. ಸಾನ್ಯಾ ಅಯ್ಯರ್ ಬಿಗ್ ಬಾಸ್ ಸೀಸನ್ 9 (Bigg Boss Season 9) ರಲ್ಲಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದರು. ಇದೀಗ ಸಾನ್ಯ ಅಯ್ಯರ್ ತನ್ನ ಎಜುಕೇಶನ್ ಮುಗಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣ (Social Media)ದಲ್ಲಿ ವೈರಲ್ ಆಗಿದೆ.

Sanya Iyer in Puttagauri, a graduate, is happy to have graduated.
Image Source: Instagram

ಪದವಿ ಮುಗಿಸಿದ ಸಾನ್ಯ ಅಯ್ಯರ್
ಬಿಗ್ ಬಾಸ್ ಸೀಸನ್ 9 ರಲ್ಲಿ ಸಾನ್ಯಾ ಅಯ್ಯರ್ ತುಂಬಾ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಸಾನ್ಯ ರೂಪೇಶ್ ಶೆಟ್ಟಿ (Sanya And Roopesh Shetty) ಜೊತೆ ಹೆಚ್ಚು ಕ್ಲೋಸ್ ಆಗಿ ಇದ್ದಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲು ಸಹ ರೂಪೇಶ್ ಶೆಟ್ಟಿ ಜೊತೆ ಸಾನ್ಯ ಸ್ನೇಹವನ್ನು ಮುಂದುವರೆಸಿದ್ದಾರೆ.

ಒಟ್ಟಾರೆ ಸಾನ್ಯ ಈಗ ತಮ್ಮ ಎಜುಕೇಶನ್ ಕಂಪ್ಲೀಟ್ ಮಾಡಿ ಗ್ರ್ಯಾಜುಯೆಟ್ ಆಗಿದ್ದಾರೆ. ಪುಟ್ಟಗೌರಿ ಪಾತ್ರ ಮಾಡಿದ್ದ ನಟಿ ಸಾನ್ಯಾ ಐಯ್ಯರ್ ಪದವಿ ಪಡೆದ ಖುಷಿಯಲ್ಲಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Sanya Iyer in Puttagauri, a graduate, is happy to have graduated.
Image Source: Instagram

ಸಾನ್ಯ ಅಯ್ಯರ್ ಅವರಿಗೆ ವಿಶ್ ಮಾಡಿದ ಅಭಿಮಾನಿಗಳು
ಸಾನ್ಯ ಅಯ್ಯರ್ ಈಗ ಪದವಿ ಪಡೆದ ಖುಷಿಯಲ್ಲಿ ಇದ್ದಾರೆ. ಸಾನ್ಯ ಅಯ್ಯರ್ ಅವರು ಮಾಸ್ ಮೀಡಿಯಾ ಮತ್ತು ಮಾಸ್ ಕಮ್ಯುನಿಕೇಷನ್ ನಲ್ಲಿ ಫರ್ಸ್ಟ್ ಕ್ಲಾಸ್ ವಿಥ್ ಡಿಸ್ಟಿಂಕ್ಷನ್ ಪಾಸ್ ಆಗಿದ್ದಾಳೆ ಎಂದು ಅವರ ತಾಯಿ ದೀಪ ಅಯ್ಯರ್ ಹೇಳಿದ್ದಾರೆ. ಸಾನ್ಯ ಅಯ್ಯರ್ ಗ್ರಾಜುಯೇಟೆಡ್ ಗುರು ಎಂದು ತಮ್ಮ ಫೋಟೋಗಳಿಗೆ ಬರೆದುಕೊಂಡಿದ್ದಾರೆ. ಅಭಿಮಾನಿಗಳೆಲ್ಲ ನಿಮ್ಮ ಮುಂದಿನ ಜೀವನಕ್ಕೆ ಒಳ್ಳೆದಾಗಲಿ ಅಂತ ವಿಶ್ ಮಾಡಿದ್ದಾರೆ. ನಟಿ ಸಾನ್ಯ ಅಯ್ಯರ್ ಇದೀಗ ಸಾಧನೆ ಮಾಡುವ ಯೋಚನೆಯಲ್ಲಿ ತೊಡಗಿದ್ದಾರೆ. ಒಟ್ಟಾರೆ ಸಾನ್ಯ ಸಿನಿಮಾ ಆಫರ್ ಗಳಿಗಾಗಿ ಕಾಯುತ್ತಿದ್ದಾರೆ.

Sanya Iyer in Puttagauri, a graduate, is happy to have graduated.
Image Source: India Today

Join Nadunudi News WhatsApp Group

Join Nadunudi News WhatsApp Group