Price Hike: ಶಾಲೆ ಮತ್ತು ಕಾಲೇಜು ಆರಂಭಕ್ಕೂ ಮುನ್ನವೇ ಪೋಷಕರಿಗೆ ಬಿಗ್ ಶಾಕ್, ಬೆಲೆಯಲ್ಲಿ ಏರಿಕೆ.

ವಿದ್ಯಾರ್ಥಿಗಳು ಬಳಸುವ ಪುಸ್ತಕ ಮತ್ತು ಇತರೆ ವಸ್ತುಗಳ ಬೆಲೆ ಏರಿಕೆಯಾಗಿದೆ.

Increase In Price Of Note Books: 2023 -24 ನೇ ಸಾಲಿನ ಶಿಕ್ಷಣ ನೀತಿಯಲ್ಲಿ ಈ ಬಾರಿ ಸಾಕಷ್ಟು ಬದಲಾವಣೆ ಆಗಲಿದೆ. ಈಗಾಗಲೇ 5,8,10,12 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಹೊಸ ನಿಯಮಗಳು ಬಿಡುಗಡೆಗೊಂಡಿವೆ.

ಈಗಾಗಲೇ 2023 24 ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಸೇರುವ ವಿದ್ಯಾರ್ಥಿಗಳಿಗೆ ಹೊಸ ನಿಯಮವನ್ನು ಶಿಕ್ಷಣ ಇಲಾಖೆ (Education Department) ಸೂಚಿಸಿದೆ. ಇನ್ನು ಶಾಲೆಗೆ ಸಂಬಂಧಿಸಿದಂತೆ ಕೆಲವು ವಸ್ತುಗಳ ದರ ಕೂಡ ಏರಿಕೆಯಾಗುತ್ತಿದೆ.

Increase In Price Of Note Books
Image Source: Hindusthan Times

ಶಾಲೆ ಮತ್ತು ಕಾಲೇಜು ಆರಂಭಕ್ಕೂ ಮುನ್ನವೇ ಪೋಷಕರಿಗೆ ಬಿಗ್ ಶಾಕ್
ಪ್ರಸ್ತುತ ಶಾಲಾ ಕಾಲೇಜು ಮಕ್ಕಳಿಗೆ ಬೇಸಿಗೆ ರಜೆ ನಡೆಯುತ್ತಿದೆ. ಮಕ್ಕಳು ಶಾಲೆಯ ವಾತಾವರಣದಿಂದ ಮನೆಯ ವಾತಾವರಣದಲ್ಲಿದ್ದಾರೆ. ಇನ್ನೇನು ಸ್ವಲ್ಪ ಸಮಯದಲ್ಲಿ ಶಾಲೆಗಳು ಆರಂಭಗೊಳ್ಳಲಿದೆ.

ಈ ಬಾರಿಯ ಶೈಕ್ಷಣಿಕ ವರ್ಷ ಸಾಕಷ್ಟು ಬದಲಾವಣೆಯನ್ನು ತರಲಿದೆ. ಇದೀಗ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ (School Note Books) ಕೂಡ ಬದಲಾವಣೆ ಆಗಿದೆ. ಪಠ್ಯ ಪುಸ್ತಕಗಳ ಬೆಲೆಯಲ್ಲಿ ಬಾರಿ ಏರಿಕೆ ಕಂಡು ಬಂದಿದೆ.

Increase In Price Of Note Books
Image Source: Hindusthan Times

ಪಠ್ಯ ಪುಸ್ತಕಗಳ ಬೆಲೆಯಲ್ಲಿ ಏರಿಕೆ
ಶಾಲಾ ಮಕ್ಕಳ ಶುಕ್ಲ ಕೂಡ ಹೆಚ್ಚಿದೆ ಇದರ ಬೆನ್ನಲ್ಲೇ ಇದೀಗ ಶಾಲಾ ಮಕ್ಕಳ ಪಠ್ಯ ಪುಸ್ತಕದ ಬೆಲೆ ಕೂಡ ಏರಿಕೆಯಾಗಿದೆ. ಮಕ್ಕಳ ನೋಟ್ಸ್ ಬುಕ್, ವರ್ಕ್ ಬುಕ್ ಹಾಗೂ ಪೇಪರ್ ಬೆಲೆಯಲ್ಲಿ ಏರಿಕೆಯಾಗಿದೆ. ಅಧಿಕ ಶುಲ್ಕ ಪಾವತಿಸುವುದರ ಜೊತೆಗೆ ಇನ್ನುಮುಂದೆ ಪೋಷಕರು ಹೆಚ್ಚಿನ ಹಣ ನೀಡಿ ಪಠ್ಯ ಪುಸ್ತಕಗಳನ್ನು ಖರೀದಿಸಬೇಕಾಗುತ್ತದೆ. ಪಠ್ಯ ಪುಸ್ತಕಗಳ ಬೆಲೆಯಲ್ಲಿ ಈ ಬಾರಿ 30 ರಿಂದ 40 % ಏರಿಕೆಯಾಗಲಿದೆ.

Join Nadunudi News WhatsApp Group

ಪಠ್ಯ ಪುಸ್ತಕಗಳ ಬೆಲೆ ಏರಿಕೆಗೆ ಕಾರಣ
ದೇಶದಲ್ಲಿ ಪೇಪರ್ ಕೊರತೆಯಿಂದಾಗಿ ಶಿಕ್ಷಣ ಇಲಾಖೆ ಪಠ್ಯ ಪುಸ್ತಕಗಳ ದರದಲ್ಲಿ ಏರಿಕೆ ಮಾಡಿದೆ ಎನ್ನಲಾಗುತ್ತಿದೆ. ಉಕ್ರೇನ್ ಹಾಗೂ ರಷ್ಯಾ ಯುದ್ಧದ ಪರಿಣಾಮವಾಗಿ ಕಚ್ಚಾ ಪೇಪರ್ ದೇಶಕ್ಕೆ ರಫ್ತಾಗುತ್ತಿಲ್ಲ. ಕಚ್ಚಾ ಪೇಪರ್ ಗಳು ದೇಶಕಕೆ ಬರದೇ ಇರುವ ಕಾರಣ ಬೆಲೆ ಏರಿಕೆಯಾಗಿದೆ. ನೋಟ್ಸ್ ಬುಕ್, ವರ್ಕ್ ಬುಕ್ ಹಾಗೂ ಪೇಪರ್ ಗಳ ಬೆಲೆ 30-40 % ಏರಿಕೆಯಾಗಿದೆ. ಅಂದರೆ 28 ರೂ. ಇದ ಪಠ್ಯ ಪುಸ್ತಕಗಳ ಬೆಲೆ 30 ರಿಂದ 40 ರೂ. ಏರಿಕೆಯಾಗಿದೆ.

Increase In Price Of Note Books
Image Source: Tv9

Join Nadunudi News WhatsApp Group