SCSS: ಉಳಿತಾಯ ಖಾತೆ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೆ ಹೊಸ ನಿಯಮ, ಹಣ ತಗೆಯುವ ನಿಯಮ ಬದಲಾವಣೆ.

Senior Citizen Savings Scheme 2023: ಭಾರತೀಯ ಅಂಚೆ ಇಲಾಖೆಯು ಜನಸಾಮಾನ್ಯರಿಗಾಗಿ ವಿವಿಧ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಪೋಸ್ಟ್ಆಫೀಸ್ (Post Office) ನಲ್ಲಿ ಹಲವು ರೀತಿಯ ಯೋಜನೆಗಳಿದ್ದು, ಅದರಲ್ಲಿ ಹಿರಿಯ ನಾಗರಿಕರಿಗೆಂದೇ ಕೆಲವು ಯೋಜನೆಗಳಿವೆ.

SCSS ಯೋಜನೆಯು ಹಿರಿಯ ನಾಗರಿಕರಿಗಾಗಿ ನಡೆಸುವ ಉಳಿತಾಯ ಯೋಜನೆಯಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (SCSS) ಅಕಾಲಿಕ ಹಿಂಪಡೆಯುವ ನಿಯಮಗಳನ್ನು ಈ ಹೊಸ ಯೋಜನೆಯು ಖಾತೆದಾರರಿಗೆ ಹೆಚ್ಚಿನ ಪ್ರಯೋಜನ ಮಾಡಿಕೊಡಲಿದೆ.

SCSS Latest Update
Image Credit: Turtlemint

ಉಳಿತಾಯ ಖಾತೆ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೆ ಹೊಸ ನಿಯಮ
ಹಿರಿಯ ನಾಗರಿಕರ ಹೂಡಿಕೆಯ ಯೋಜನೆ (Senior Citizen Savings Scheme) ಅಕಾಲಿಕ ಹಿಂತೆಗೆದುಕೊಳ್ಳುವ ನಿಯಮಗಳನ್ನು ಅಂಚೆ ಕಚೇರಿಯು ಬದಲಾಯಿಸಿದೆ. ಅಂಚೆ ಇಲಾಖೆಯ ಹೊಸ ನಿಯಮದ ಪ್ರಕಾರ, ಯಾವುದೇ SCSS ಹೂಡಿಕೆದಾರರು ಖಾತೆ ತೆರೆಯುವ ಒಂದು ವರ್ಷದ ಅವಧಿ ಪೂರ್ಣಗೊಳ್ಳುವ ಮೊದಲು ಹಣವನ್ನು ಹಿಂಪಡೆದರೆ, ನಂತರ ಠೇವಣಿಯಿಂದ ಒಂದು ಶೇಕಡಾವನ್ನು ಕಡಿತಗೊಳಿಸಲಾಗುತ್ತದೆ.

SCSS ಹೂಡಿಕೆದಾರರು ಹೂಡಿಕೆಯ ಮೊದಲ ವರ್ಷದಲ್ಲಿ ಹಣವನ್ನು ಹಿಂತೆಗೆದುಕೊಂಡರೆ, ಠೇವಣಿಯ ಮೇಲೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ಅದರ ನಂತರ ಸಂಪೂರ್ಣ ಉಳಿದ ಮೊತ್ತವನ್ನು ಖಾತೆದಾರರಿಗೆ ನೀಡಲಾಗುತ್ತದೆ.

Senior Citizen Savings Scheme 2023
Image Credit: Wintwealth

SCSS ಯೋಜನೆಯಲ್ಲಿ ಉತ್ತಮ ಬಡ್ಡಿ ನೀಡಲಾಗುತ್ತದೆ
SCSS ಯೋಜನೆ ಇದು ಹಿರಿಯ ನಾಗರಿಕರ ಹೂಡಿಕೆಯ ಯೋಜನೆ ಆಗಿದೆ. ಈ ಯೋಜನೆಯ ಹೂಡಿಕೆಯಲ್ಲಿ 8.2 ರಷ್ಟು ಬಡ್ಡಿಯನ್ನು ಸರ್ಕಾರವು SCSS ಗೆ ನೀಡುತ್ತಿದೆ. ಇದು ಅಕ್ಟೋಬರ್ ಹಾಗು ಡಿಸೆಂಬರ್ ಅವಧಿಗೆ ಸಂಬಂಧಿಸಿದೆ. SCSS ನ ಹೊಸ ಬಡ್ಡಿ ದರವನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಘೋಷಣೆ ಮಾಡುತ್ತದೆ.

Join Nadunudi News WhatsApp Group

Join Nadunudi News WhatsApp Group