SCSS Pension: ಕೇಂದ್ರದ ಈ ಯೋಜನೆಯಲ್ಲಿ ಕೇವಲ 1000 ರು ಹೂಡಿಕೆ ಮಾಡಿದ್ರೆ ಸಿಗಲಿದೆ 20,000 ರೂ, ನಿಮ್ಮ ವೃದ್ಧಾಪ್ಯಕ್ಕೆ

ಕೇವಲ 1 ಸಾವಿರ ಹೂಡಿಕೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 20000 ಆದಾಯ.

Senior Citizen Savings Scheme Pension: ಅಂಚೆ ಇಲಾಖೆಯು ವಿಶೇಷವಾಗಿ ಹಿರಿಯ ನಾಗರೀಕರಿಗೆಂದು ವಿಶೇಷವಾದ ಯೋಜನೆಯನ್ನು ಪರಿಚಯಿಸಿದೆ. ಅಂಚೆ ಇಲಾಖೆಯ ಈ ವಿಶೇಷ ಯೋಜನೆಯಡಿಯಲ್ಲಿ ಜನರು ಹೂಡಿಕೆಯನ್ನು ಆರಂಭಿಸಿದರೆ ತಮ್ಮ ವೃದ್ದಾಪ್ಯದಲ್ಲಿ ಯಾವುದೇ ಚಿಂತೆಯಿಲ್ಲದ ಜೀವನವನ್ನು ನಡೆಸಬಹುದು.

ಸಣ್ಣ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಯು ನಿವೃತ್ತಿಯ ನಂತರದ ಜೀವನಕ್ಕೆ ಸಾಕಷ್ಟು ಸಹಕಾರಿಯಾಗುತ್ತದೆ. ಇದೀಗ ನಾವು ಅಂಚೆ ಇಲಾಖೆ ಹಿರಿಯ ನಾಗರೀಕರಿಗೆಂದು ಪಿರಿಚಯಿಸಿರುವ ವಿಶೇಷ ಪಿಂಚಣಿ ಯೋಜನೆಗಳ ಬಗ್ಗೆ ಮಾಹಿತಿ ಹೇಳಲಿದ್ದೇವೆ. ಹಿರಿಯ ನಾಗರಿಕರು ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಿವೃತ್ತಿಯ ಜೀವನ ನಿರ್ವಹಣೆಗೆ ಆದಾಯವನ್ನು ಗಳಿಸಬಹುದು.

Senior Citizen Savings Scheme
Image Credit: Outlookindia

Senior Citizen Savings Scheme
ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಯಡಿ Senior Citizen Savings Scheme ಬರಲಿದೆ. ಇನ್ನು 60 ವರ್ಷ ಪೂರೈಸಿದ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹಾಗೆಯೆ 55 ವರ್ಷ ಮತ್ತು 60 ವರ್ಷದೊಳಗಿನ VRS ಮತ್ತು ನಿವೃತ್ತಿಯನ್ನು ತೆಗೆದುಕೊಳ್ಳುವ ವ್ಯಕ್ತಿಯು SCSS ಖಾತೆಯನ್ನು ಸಹ ತೆರೆಯಬಹುದು. ರಕ್ಷಣಾ ಸೇವೆಗಳಿಂದ ನಿವೃತ್ತರಾದ 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯು SCSS ನಲ್ಲಿ ಖಾತೆಯನ್ನು ತೆರೆಯಬಹುದು.

ಕೇವಲ 1 ಸಾವಿರ ಹೂಡಿಕೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 20000 ಆದಾಯ
ಕನಿಷ್ಠ 1000 ರೂಪಾಯಿ ಹೂಡಿಕೆಯೊಂದಿಗೆ ಗರಿಷ್ಠ 30 ಲಕ್ಷ ಹೂಡಿಕೆ ಮಾಡಬಹುದು. ಇದರಲ್ಲಿ ಐದು ವರ್ಷಗಳವರೆಗೆ ಖಾತೆ ತೆರೆಯಬಹುದು. ಇದಾದ ನಂತರ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಈ ಯೋಜನೆಯ ಮೂಲಕ ಆದಾಯ ತೆರಿಗೆಯ ಸೆಕ್ಷನ್ 80C ಯ ಲಾಭವನ್ನು ಪಡೆಯುತ್ತಾರೆ. ಇದರ ಮೂಲಕ ನೀವು 1.5 ಲಕ್ಷದವರೆಗೆ ರಿಯಾಯಿತಿ ವಿನಾಯಿತಿಯನ್ನು ಪಡೆಯಬಹುದು.

Senior Citizen Savings Scheme Investment
Image Credit: Static.toiimg

ಈ ಯೋಜನೆಯಡಿಯಲ್ಲಿ ಹೂಡಿಕೆಯ ದಿನಾಂಕ ಅಥವಾ ಯೋಜನೆಯ ವಿಸ್ತರಣೆಯ ದಿನಾಂಕದ ಪ್ರಕಾರ ಮಾತ್ರ ನೀವು ಬಡ್ಡಿಯನ್ನು ಪಡೆಯುತ್ತೀರಿ. ಪ್ರಸ್ತುತ ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಶೇ. 8.2 ರ ಬಡ್ಡಿಯನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ ಹಿರಿಯ ನಾಗರಿಕರು ಒಂದೇ ಬಾರಿಗೆ 5 ಲಕ್ಷ ಹಣವನ್ನು ಡೆಪಾಸಿಟ್ ಮಾಡಬಹುದು. ಇನ್ನು SCSS ನಲ್ಲಿ ಹಿರಿಯ ನಾಗರಿಕರು 1000 ಹೂಡಿಕೆಯಲ್ಲಿ ಪ್ರತಿ ತಿಂಗಳು 20 ಸಾವಿರ ಆದಾಯವನ್ನು ಗಳಿಸುವ ಅವಕಾಶವಿದೆ. ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ SCSS ಖಾತೆಯ ಬಗ್ಗೆ ಸಂಪೂರ್ಣ ವಿವರನ್ನು ತಿಳಿದುಕೊಂಡು ಇಂದೇ ಹೂಡಿಕೆ ಆರಂಭಿಸುವುದು ಉತ್ತಮ.

Join Nadunudi News WhatsApp Group

Senior Citizen Savings Scheme Profit
Image Credit: News9live

Join Nadunudi News WhatsApp Group