ಶನಿವಾರದ ದಿನ ಯಾವುದೇ ಕಾರಣಕ್ಕೂ ಈ 7 ವಸ್ತುಗಳನ್ನ ಮನೆಗೆ ತರಬಾರದು, ಶನಿ ನಿಮ್ಮ ಮನೆ ಪ್ರವೇಶ ಮಾಡುತ್ತಾನೆ.

ಈ ಭೂಮಿಯ ಮೇಲೆ ಹುಟ್ಟಿದ ಜನರಲ್ಲಿ ಹೆಚ್ಚಿನ ಜನರು ಹೆದರಿಕೊಳ್ಳುವುದು ಅಂದರೆ ಅದೂ ಶನಿ ದೇವರಿಗೆ ಎಂದು ಹೇಳಬಹುದು. ಹೌದು ಶನಿ ದೇವರು ಮಾನವ ಮಾಡುವ ತಪ್ಪುಗಳಿಗೆ ಅನುಗುಣವಾಗಿ ಆತನಿಗೆ ಶಿಕ್ಷೆಯನ್ನ ಕೊಡುತ್ತಾನೆ ಮತ್ತು ಶನಿ ದೇವರ ಕೋಪಕ್ಕೆ ನಾವು ಒಮ್ಮೆ ಗುರಿಯಾದರೆ ಅದರಿಂದ ತಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಬಹುದು. ಜನರು ಶನಿ ದೇವರ ಕೋಪದಿಂದ ಮುಕ್ತಿಯನ್ನ ಪಡೆದುಕೊಳ್ಳಲು ಶನಿ ದೇವರ ಜಪ ಮತ್ತು ಶನಿ ದೇವರಿಗೆ ಎಳ್ಳೆಣ್ಣೆಯ ದೀಪವನ್ನ ಹಚ್ಚುತ್ತಾರೆ. ಇನ್ನು ನಾವು ಮಾಡುವ ಕೆಲವು ಪಾಪಗಳಿಗೆ ಮಾತ್ರವಲ್ಲದೆ ನಾವು ಶನಿವಾರದ ದಿನ ಮನೆಗೆ ತರುವ ಕೆಲವು ವಸ್ತುಗಳಿಂದ ಕೂಡ ನಾವು ಶನಿ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಅನ್ನುವ ವಿಷಯ ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಇನ್ನೂ ಕೂಡ ತಿಳಿದಿಲ್ಲ ಎಂದು ಹೇಳಬಹುದು.

ಹೌದು ಸ್ನೇಹಿತರೆ ನಾವು ಶನಿವಾರದ ದಿನ ಮನೆಗೆ ತರುವ ಕೆಲವು ವಸ್ತುಗಳಿಂದ ಕೂಡ ನಾವು ಶನಿ ದೇವರ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಎಂದು ಹೇಳುತ್ತಿದೆ ಜ್ಯೋತಿಷ್ಯ. ಹಾಗಾದರೆ ನಾವು ಶನಿವಾರದ ದಿನ ಯಾವ ಯಾವ ವಸ್ತುಗಳನ್ನ ಮನೆಗೆ ತರಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ವಸ್ತುಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ಶನಿವಾರ ಅನ್ನುವುದು ಶಿನಿದೇವರ ವಾರ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

shani thinks

ಸ್ನೇಹಿತರೆ ಶನಿಯ ಪ್ರಭಾವ ಕೇವಲ ನಮ್ಮ ರಾಶಿಯ ಮೇಲಿರದೆ ನಮ್ಮ ಮನೆಯ ಮೇಲೆ ಕೂಡ ಇರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಸ್ನೇಹಿತರೆ ಶಾಸ್ತ್ರ ಹೇಳುವ ಪ್ರಕಾರ ಶನಿವಾರಾದ ಯಾವುದೇ ಕಾರಣಕ್ಕೂ ಲೋಹ ಅಥವಾ ಲೋಹದಿಂದ ಮಾಡಿದ ಯಾವುದೇ ವಸ್ತುಗಳನ್ನ ಮನೆಗೆ ತರಬಾರದು ಎಂದು ಪುರಾಣದಲ್ಲಿ ಹೇಳಲಾಗಿದೆ ಮತ್ತು ಇದರ ಹೊರತಾಗಿ ನೀವು ಶನಿವಾರ ದಿನ ಲೋಹದ ವಸ್ತುವನ್ನ ದಾನ ಮಾಡಿದರೆ ಶನಿ ದೇವರು ಪ್ರಸನ್ನನಾಗುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇನ್ನು ಶನಿವಾರ ದಿನ ಚರಂಡಿಯಿಂದ ತಯಾರಾದ ಯಾವುದೇ ವಸ್ತುಗಳನ್ನ ಮನೆಗೆ ತರಬಾರದು ಎಂದು ಪುರಾಣಗಳಲ್ಲಿ ಹೇಳಲಾಗಿದೆ ಮತ್ತು ತಂದರೆ ನೀವು ಶನಿ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಶನಿವಾರ ನೀವು ಚರ್ಮದ ವಸ್ತುಗಳನ್ನ ಖರೀದಿ ಮಾಡಿದರೆ ನಿಮಗೆ ಮಾಡುವ ವೃತ್ತಿಯಲ್ಲಿ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಶನಿವಾರದ ದಿನ ಯಾವುದೇ ರೀತಿಯ ಎಣ್ಣೆಯನ್ನ ಮನೆಗೆ ತರಬಾರದು ಮತ್ತು ತಂದರೆ ನೀವು ಶನಿವಾರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇನ್ನು ಶನಿವಾರದ ದಿನ ಮನೆಗೆ ಯಾವುದೇ ಕಾರಣಕ್ಕೂ ಇದ್ದಿಲನ್ನ ತರಬಾರದು, ಈ ವಸ್ತುವಿನ ಶನಿದೇವರ ವಕ್ರ ದೃಷ್ಟಿ ಇರುವ ಕಾರಣ ಯಾವುದೇ ಕಾರಣಕ್ಕೂ ಈ ದಿನ ಈ ವಸ್ತುವನ್ನ ಮನೆಗೆ ತರಬಾರದು.

Join Nadunudi News WhatsApp Group

shani thinks

ಇನ್ನು ಶನಿವಾರದ ದಿನ ಅಪ್ಪಿತಪ್ಪಿ ಕೂಡ ಪೊರಕೆಯನ್ನ ಖರೀದಿ ಮಾಡಿ ಮನೆಗೆ ತರಬಾರದು ಮತ್ತು ಅದೂ ಶುಭವಲ್ಲ.ಇನ್ನು ಶನಿವಾರದ ದಿನ ನೀವು ಕಪ್ಪು ಎಳ್ಳನ್ನ ಖರೀದಿ ಮಾಡಿ ಮನೆಗೆ ತರುವುದು ಕೂಡ ಅಶುಭ ಎಂದು ಹೇಳಲಾಗಿದೆ. ಇನ್ನು ಅದೇ ರೀತಿಯಾಗಿ ಶನಿವಾರದ ದಿನ ಉಪ್ಪನ್ನ ಕೂಡ ಖರೀದಿ ಮಾಡಿ ಮನೆಗೆ ತರಬಾರದು. ಸ್ನೇಹಿತರೆ ಈ ಎಲ್ಲಾ ವಸ್ತುಗಳು ಶನಿ ದೇವರಿಗೆ ಇಷ್ಟವಾಗದ ವಸ್ತುಗಳು ಆದಕಾರಣ ಯಾವುದೇ ಕಾರಣಕ್ಕೂ ಶನಿವಾರದ ದಿನ ಈ ವಸ್ತುಗಳನ್ನ ಮನೆಗೆ ತರಬಾರದು.

Join Nadunudi News WhatsApp Group