ಮಹಿಳೆಯರ ಶರ್ಟ್ ಬಟನ್ ಎಡಭಾಗದಲ್ಲಿ ಯಾಕಿರುತ್ತದೆ ಗೊತ್ತಾ, ಶರ್ಟ್ ಧರಿಸುವ ಎಲ್ಲರೂ ಓದಿ.

ಈಗಿನ ಕಾಲದಲ್ಲಿ ವಿಧವಿಧವಾದ ಬಟ್ಟೆಗಳು ಇದ್ದು ಜನರು ತಾನೇ ಇಷ್ಟವಾದ ಬಟ್ಟೆಯನ್ನ ಧರಿಸುತ್ತಾರೆ ಎಂದು ಹೇಳಬಹುದು. ಇನ್ನು ಹಿಂದಿನ ಕಾಲದಲ್ಲಿ ಮಹಿಳೆಯರು ಹೆಚ್ಚಾಗಿ ಸೀರೆ ಮತ್ತು ಮೈಮುಚ್ಚುವ ಬಟ್ಟೆಯನ್ನ ಧರಿಸುತ್ತಿದ್ದರು, ಆದರೆ ಈಗಿನ ಕಾಲದ ಯುವತಿಯರು ಹುಡುಗರ ಹಾಗೆ ಬಟ್ಟೆಗಳನ್ನ ಧರಿಸುತ್ತಾರೆ ಎಂದು ಹೇಳಬಹುದು. ಇನ್ನು ಮಾರುಕಟ್ಟೆಯಲ್ಲಿ ಹಲವು ಹೊಸ ಬಗೆಯ ಬಟ್ಟೆಗಳು ಜನರ ಗಮನ ಆ ಬಟ್ಟೆಗಳತ್ತ ಸೆಳೆಯುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ವಿಷಯಕ್ಕೆ ಬರುವುದಾದರೆ ಈಗಿನ ಕಾಲದಲ್ಲಿ ಶರ್ಟ್ ಗಳನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ಧರಿಸುತ್ತಾರೆ ಎಂದು ಹೇಳಬಹುದು.

ಹೌದು ಮಾರುಕಟ್ಟೆಯಲ್ಲಿ ವಿಧವಿಧವಾದ ಶರ್ಟ್ ಗಳು ಇದ್ದು ಜನರು ತಮಗೆ ಇಷ್ಟವಾದ ಶರ್ಟ್ ಗಳನ್ನ ಆಯ್ಕೆ ಮಾಡಿಕೊಂಡು ಧರಿಸುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಮಹಿಳೆಯರು ಕೂಡ ಪುರುಷರ ಹಾಗೆ ಶರ್ಟ್ ಗಳನ್ನ ಧರಿಸುತ್ತಾರೆ ಎಂದು ಹೇಳಬಹುದು, ಆದರೆ ಪುರುಷರು ಧರಿಸುವ ಶರ್ಟ್ ಗೂ ಮಹಿಳೆಯರು ಧರಿಸುವ ಶರ್ಟ್ ಗೂ ಕೆಲವು ವ್ಯತ್ಯಾಸ ಇದ್ದು ಅದನ್ನ ಸಾಮಾನ್ಯವಾಗಿ ಯಾರು ಕೂಡ ಗಮನಿಸಿರುವುದಿಲ್ಲ ಎಂದು ಹೇಳಬಹುದು. ಹೌದು ಪುರುಷರು ಧರಿಸುವ ಶರ್ಟಿನ ಬಟನ್ ಬಲಭಾಗದಲ್ಲಿ ಇದ್ದರೆ ಮಹಿಳೆಯರು ಧರಿಸುವ ಶರ್ಟಿನ ಬಟನ್ ಎಡಭಾಗದಲ್ಲಿ ಇರುತ್ತದೆ. ಹೌದು ಈ ವ್ಯತ್ಯಾಸವನ್ನ ಸಾಮಾನ್ಯವಾಗಿ ಯಾರು ಕೂಡ ಗಮನಿಸಿರಲು ಸಾಧ್ಯವಿಲ್ಲ ಎಂದು ಹೇಳಬಹುದು.

shirt button differance

ಹಾಗಾದರೆ ಮಹಿಳೆಯರು ಧರಿಸುವ ಶರ್ಟಿನ ಬಟನ್ ಎಡಭಾಗದಲ್ಲಿ ಇರುವ ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಮಹಿಳೆ ಹಾಗೂ ಪುರುಷ ಇಬ್ಬರೂ ಶರ್ಟ್ ಧರಿಸ್ತಾರೆ, ಆದರೆ ಈ ಶರ್ಟ್ ಬಟನ್ ಮಾತ್ರ ಬೇರೆ ಬೇರೆಯಾಗಿರುತ್ತವೆ, ಪುರುಷರ ಶರ್ಟ್ ಬಟನ್ ಬಲಕ್ಕಿದ್ದರೆ ಮಹಿಳೆಯದ ಶರ್ಟ್ ಬಟನ್ ಗಳು ಎಡಕ್ಕಿರುತ್ತವೆ. ಒಂದು ವಾದದ ಪ್ರಕಾರ ಹಿಂದಿನ ದಿನಗಳಲ್ಲಿ ಪುರುಷರು ತಮ್ಮ ಬಟ್ಟೆಯನ್ನು ತಾವೇ ಧರಿಸುತ್ತಿದ್ದರಂತೆ, ಆದರೆ ಮಹಿಳೆಯರಿಗೆ ಈ ಸ್ವಾತಂತ್ರ್ಯವಿರಲಿಲ್ಲ ಮತ್ತು ಬೇರೆಯವರು ಅವರಿಗೆ ಬಟ್ಟೆ ತೊಡಿಸುತ್ತಿದ್ದರು ಮತ್ತು ಆ ವೇಳೆ ಹೆಚ್ಚಿನ ಜನರು ಬಲಗೈಯನ್ನು ಬಳಸುತ್ತಿದ್ದರು, ಆದ್ದರಿಂದ ಮುಂದೆ ನಿಂತು ಅವರಿಗೆ ಬಟನ್ ಹಾಕಲು ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಮಹಿಳೆಯರ ಬಟನ್ನನ್ನು ಎಡಕ್ಕೆ ಇಡಲಾಗಿದೆಯಂತೆ.

ಇನ್ನು ಇನ್ನೊಂದು ವಾದದ ಪ್ರಕಾರ ಹಿಂದಿನ ದಿನಗಳಲ್ಲಿ ಪುರುಷರು ಬಲಗೈನಲ್ಲಿ ಕತ್ತಿಯನ್ನು ಹಿಡಿಯುತ್ತಿದ್ದರಂತೆ, ಬಟನ್ ತೆಗೆಯಲು ಅವರು ಎಡಗೈ ಬಳಸುತ್ತಿದ್ದರಂತೆ, ಹಾಗಾಗಿ ಅವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಬಲ ಭಾಗಕ್ಕೆ ಬಟನ್ ಇಡಲಾಗುತ್ತಿತ್ತು. ಇತಿಹಾಸದ ಪ್ರಕಾರ ನೆಪೋಲಿಯನ್ ಬೊನಾಪಾರ್ಟೆ ಬಟನ್ ನಿಯಮ ಬದಲಾಯಿಸಿದ್ದಾನೆ ಎನ್ನಲಾಗುತ್ತದೆ. ಪೋಲಿಯನ್ ಬೊನಾಪಾರ್ಟೆ ಒಂದು ಕೈಯನ್ನು ಸದಾ ತನ್ನ ಡ್ರೆಸ್ ಮೇಲಿಡುತ್ತಿದ್ದನಂತೆ ಮತ್ತು ಇದನ್ನು ಮಹಿಳೆಯರು ಕಾಪಿ ಮಾಡಲು ಶುರುಮಾಡಿದರಂತೆ, ಇದರಿಂದ ಕೋಪಗೊಂಡ ನೆಪೋಲಿಯನ್ ಬೊನಾಪಾರ್ಟೆ ಮಹಿಳೆಯದ ಶರ್ಟ್ ಬಟನ್ ಎಡಭಾಗಕ್ಕಿರಬೇಕೆಂದು ಆದೇಶ ಹೊರಡಿಸಿದನಂತೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

shirt button differance

Join Nadunudi News WhatsApp Group