Shiva Rajakumar Instagram: ಅಪ್ಪು ನೆನೆದು ಮತ್ತೆ ಕಣ್ಣೀರು ಹಾಕಿದ ಶಿವಣ್ಣ, ಭಾವುಕದಿಂದ ಪೋಸ್ಟ್ ಮಾಡಿದ ಶಿವಣ್ಣ.

Actor Shiva Rajakumar Shared An Emotional Post About Puneeth Rajkumar: ಇಂದು ಮಾರ್ಚ್ 17 ನಟ ದಿವಂಗತ ಪುನೀತ್ ರಾಜಕುಮಾರ್ (Puneeth Rajkumar) ಹುಟ್ಟುಹಬ್ಬದ ಸಂಭ್ರಮ. ರಾಜ್ಯದಲ್ಲಿ ಅಪ್ಪು ಅಭಿಮಾನಿಗಳು ಅಪ್ಪು ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಅಪ್ಪು ಸಮಾಧಿ ಬಳಿ ಅಭಿಮಾನಿಗಳು ಬಂದು ದರ್ಶನ ಪಡೆಯುತ್ತಿದ್ದಾರೆ.

Talking about the moments spent with Puneeth Rajkumar and his achievements, Shiva Rajkumar wished Puneeth Rajkumar on his birthday with emotion.
Image Credit: instagram

ಇನ್ನು ಅಪ್ಪು ಕುಟುಂಬಸ್ಥರು ಸಮಾಧಿ ಬಳಿ ಬಂದು ಪೋಯೆ ಸಲ್ಲಿಸಿದ್ದಾರೆ. ಅಲ್ಲಿ ಬೆಳಿಗ್ಗೆಯಿಂದ ಅನ್ನದಾನವು ಸಹ ನಡೆಯುತ್ತಿದೆ. ಇದೀಗ ತಮ್ಮ ನೆನಪಿನಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ (Shiva Rajkumar) ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮನ ಬಗ್ಗೆ ಅವರು ಬರೆದ ಒಂದೊಂದು ಸಾಲುಗಳು ಮನಕಲಕುವಂತೆ ಇದೆ.

Shiva Rajkumar has written about Puneeth Rajkumar on Instagram and his words are now very viral.
Image Credit; instagram

ಶಿವರಾಜ್​ಕುಮಾರ್ ತಮ್ಮನ ನೆನಪಿನಲ್ಲಿ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ತಮ್ಮನ ಜೊತೆಗಿನ ಫೋಟೋ ಕೂಡ ಹಂಚಿಕೊಂಡಿದ್ದಾರೆ.

 

View this post on Instagram

 

A post shared by DrShivaRajkumar (@nimmashivarajkumar)

ಅಪ್ಪು ನೆನಪಿನಲ್ಲಿ ಭಾವುಕತೆಯ ಪೋಸ್ಟ್ ಹಂಚಿಕೊಂಡ ನಟ ಶಿವರಾಜ್ ಕುಮಾರ್
ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗುವುದನ್ನು ಆವಾಗಲೇ ಹೇಳುತ್ತಿತ್ತು. ನೀನು ನಕ್ಕರೆ ಎಲ್ಲರೂ ಸಹ ನಗುತ್ತ ಇದ್ದರು. ನೀನು ಕುಣಿದರೆ ಎಲ್ಲರೂ ಸಹ ರೋಮಾಂಚನದಿಂದ ನೋಡುತ್ತಾ ಇದ್ದರು.

Join Nadunudi News WhatsApp Group

Shiva Rajkumar shared an emotional post on Instagram on Puneeth Rajkumar's birthday
Image Credit; instagram

ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು ಹೆಮ್ಮರವಾಗಿ, ಕೋಟ್ಯಾಂತರ ಜನರಿಗೆ ನೆರಳಾಗಿದ್ದನ್ನು ನೋಡಿದ ನಾನೇ ಪುನೀತ.

ನಿನ್ನನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗ, ಹಬ್ಬ ಯಾವುದೇ ಆಗಿದ್ದರು ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳುತ್ತಾ ಇದೀನಿ, ನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ. ನಿನ್ನ ನೆನಪುಗಳು ಎಂದಿಗೂ ಅಮರ ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ಎಂದು ಶಿವರಾಜ್​ಕುಮಾರ್ ಪೋಸ್ಟ್​ ನಲ್ಲಿ ಬರೆದಿದ್ದಾರೆ.

Join Nadunudi News WhatsApp Group