ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶಿವಣ್ಣನ ಮಗಳು, ನೋಡಿ ಯಾವ ಸಿನೆಮಾ ಹೀರೋ ಯಾರು

ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಎಂದೇ ಕರೆಸಿಕೊಂಡಿರುವ ಅಣ್ಣಾವ್ರ ಮನೆಯಲ್ಲಿ ಇಲ್ಲದ ಕಲಾವಿದರೇ ಇಲ್ಲ. ಇಡೀ ಕುಟುಂಬವೇ ಚಿತ್ರರಂಗದ ಭಾಗವಾಗಿದೆ. ಹೀಗಿರುವಾಗ ಸದ್ಯ ದೊಡ್ಮನೆ ಕುಟುಂಬದಿಂದ ಮತ್ತೊಂದು ದೊಡ್ಡ ಸಿಹಿಸುದ್ದಿ ಇದೀಗ ಚಿತ್ರರಂಗಕ್ಕೆ ಸಿಕ್ಕಿದೆ. ಇಷ್ಟಕ್ಕೂ ಯಾರಾದರೂ ಸಿನೆಮಾಗೆ ಕಾಲಿಡುತ್ತಿದ್ದಾರೆಯೇ ಏನು ಈ ಸುದ್ದಿ ಎನ್ನುವ ಕುತೂಹಲ ನಿಮಗಿದ್ದರೆ ಈ ವರದಿ ನೋಡಿ.

ಸದ್ಯ ವೇದ ಸೇರಿದಂತೆ ಹಲವು ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್. ವೇದ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದು, ಈ ಚಿತ್ರಕ್ಕೆ ಇವರ ಪತ್ನಿಯೇ ನಿರ್ಮಾಪಕರು. ಈಗಾಗಲೇ ಮೈಸೂರಿನಲ್ಲಿ ಎರಡು ಹಂತದ ಶೂಟಿಂಗ್ ಕೂಡ ಮುಗಿದಿದೆ.Shivarajkumar Daughter Latest Photos | Dr Shiv Rajkumar Family |  Shivarajkumar Daughter Niveditha - YouTube

ಈ ಸಿನಿಮಾದ ನಂತರ ಮತ್ತಷ್ಟು ಚಿತ್ರಗಳಿಗೆ ಅವರು ಸಹಿ ಮಾಡಿದ್ದಾರೆ. ವೇದ ಶೂಟಿಂಗ್ ನಡುವೆಯೂ ಅವರು ಇನ್ನೂ ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಒಂದು ಚಿತ್ರಕ್ಕೆ ಶ್ರೀನಿ ನಿರ್ದೇಶನ ಮಾಡುತ್ತಿದ್ದರೆ, ಮತ್ತೊಂದು ಸಿನಿಮಾವನ್ನು ಸಚಿನ್ ಎನ್ನುವವರು ನಿರ್ದೇಶನ ಮಾಡಲಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಮತ್ತೊಂದು ಹೊಸ ಸುದ್ದಿ ನೀಡಿದ್ದಾರೆ ಶಿವರಾಜ್ ಕುಮಾರ್. ಅದು ನಿಜಕ್ಕೂ ಅಚ್ಚರಿ ಮೂಡಿಸುವಂತಹ ಸುದ್ದಿ ಆಗಿದೆ.

ಶಿವರಾಜ್ ಕುಮಾರ್ ಪುತ್ರಿ ಈಗಾಗಲೇ ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟಾಗಿದೆ. ಹನಿಮೂನ್ ಎಂಬ ವೆಬ್ ಸಿರೀಸ್ ಅನ್ನು ಅವರು ನಿರ್ಮಾಣ ಮಾಡಿದ್ದಾರೆ. ಅಲ್ಲದೇ, ಈ ಹಿಂದೆ ಪ್ರದೀಪ್ ಜೊತೆಗೂಡಿ ಲೂಸ್ ಕನೆಕ್ಷನ್ ಎಂಬ ವೆಬ್ ಸೀರಿಸ್ ಕೂಡ ಮಾಡಿದ್ದರು. ಇದೀಗ ಮತ್ತೊಂದು ವೆಬ್ ಸೀರಿಸ್ ಮಾಡಲು ಮುಂದಾಗಿದೆ ಈ ಟೀಮ್. ಶಿವರಾಜ್ ಕುಮಾರ್ ಅವರಿಗಾಗಿಯೇ ಕತೆಯನ್ನು ಸಿದ್ಧ ಮಾಡಿಕೊಂಡಿದೆಯಂತೆ.Shivarajkumar Daughters Recent Photos | Dr Rajkumar Family | Top Kannada  Actor | Shiva Rajkumar Wife - YouTube

ಓಂಕಾರ ಹೆಸರಿನ ಕಥೆಯನ್ನು ವೆಬ್ ಸೀರಿಸ್ ಗಾಗಿಯೇ ಈ ಟೀಮ್ ರೆಡಿ ಮಾಡಿಕೊಂಡಿದ್ದು, ಶಿವರಾಜ್ ಕುಮಾರ್ ಅವರಿಗೆ ಕಥೆಯನ್ನು ಹೇಳಿದೆಯಂತೆ. ಕಥೆ ಕೇಳಿ ಶಿವಣ್ಣ ಥ್ರಿಲ್ ಆಗಿದ್ದು, ಮುಂದಿನ ದಿನಗಳಲ್ಲಿ ಕಾಲ್ ಶೀಟ್ ಕೊಡುವುದಾಗಿಯೂ ಹೇಳಿದ್ದಾರೆ ಎನ್ನುವ ಸುದ್ದಿಯಿದೆ. ಈಗಾಗಲೇ ಕೈಯಲ್ಲಿ ಇರುವ ಸಿನಿಮಾಗಳನ್ನು ಮುಗಿಸಿ, ನಂತರ ವೆಬ್ ಸೀರಿಸ್ ನಲ್ಲಿ ಅವರು ನಟಿಸಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅದೇನೇ ಇರಲಿ ಶಿವಣ್ಣನ ಪುತ್ರಿ ಈ ಕಾರ್ಯದಲ್ಲಿ ಯಶಸ್ಸಾಗಲಿ ಎನ್ನುವುದೇ ಎಲ್ಲರ ಆಶಯ.

Join Nadunudi News WhatsApp Group

Join Nadunudi News WhatsApp Group