Shivarajkumar: ತಮ್ಮನ ಮಗನ ವಿಚ್ಛೇದನದ ಬಗ್ಗೆ ಖಡಕ್ ಹೇಳಿಕೆ ನೀಡಿದ ಶಿವಣ್ಣ, ಶಿವಣ್ಣ ಹೇಳಿದ್ದೇನು ನೋಡಿ

ಮಗನ ವಿಚ್ಛೇದನದ ಬಗ್ಗೆ ಶಿವಣ್ಣ ಯಾವ ರೀತಿ ಸ್ಪಷ್ಟನೆ ನೀಡಿದ್ದಾರೆ

Shivarajkumar About Yuva Divorce: ಜೂನ್ 6 ರಂದು ಯುವ ರಾಜ್ ಕುಮಾರ್ ತಮ್ಮ ಪತ್ನಿ ಶ್ರೀದೇವಿಗೆ ವಿಚ್ಛೇದನ ನೀಡುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಶ್ರೀದೇವಿಗೂ ವಿಚ್ಛೇದನ ನೋಟಿಸ್ ಕಳುಹಿಸಲಾಗಿದೆ. ಯುವರಾಜ್ ಕುಮಾರ್ ತಮ್ಮ ಪತ್ನಿಗೆ ವಿರುದ್ಧ ಆರೋಪಗಳನ್ನು ಮಾಡಿದ್ದು, ಯುವ ಮಾಡುತ್ತಿರುವ ಆರೋಪಗಳಿಗೆ ಶ್ರೀದೇವಿ ಕೂಡ ಉತ್ತರ ನೀಡಿದ್ದಾರೆ.

ಆರೋಪ ಪ್ರತ್ಯಾರೋಪಗಳ ನಡುವೆ ಯುವ ಹಾಗೂ ಶ್ರೀದೇವಿ ವಿಚ್ಛೇದನದ ವಿಚಾರ ಬಾರಿ ಚರ್ಚೆಗೆ ಕಾರಣವಾಗಿದೆ. ಸದ್ಯ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಇದೀಗ ಯುವ ಹಾಗೂ ಶ್ರೀದೇವಿ ಅವರ ವಿಚ್ಛೇದನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ತಮ್ಮ ಮಗನ ವಿಚ್ಛೇದನದ ಬಗ್ಗೆ ಶಿವಣ್ಣ ಯಾವ ರೀತಿ ಸ್ಪಷ್ಟನೆ ನೀಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Shivarajkumar Reacts On Yuva Rajkumar and Sridevi Divorce
Image Credit: Vistaranews

ಯುವ ವಿಚ್ಛೇದನದ ಬಗ್ಗೆ ಶಿವಣ್ಣ ಫಸ್ಟ್ ರಿಯಾಕ್ಷನ್
ಇದೀಗ ಯುವರಾಜ್ ಕುಮಾರ್ ವಿಚ್ಛೇದನದ ಬಗ್ಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮಗನ ವಿಚ್ಛೇದನ ಬಗ್ಗೆ ಶಿವಣ್ಣ ಮಾಧ್ಯಮದ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮದ ಮುಂದೆ ಮಾತನಾಡಿದ ಶಿವಣ್ಣ, ನಮಗೆ ಇಲ್ಲಿಯ ತನಕ ವಿಚ್ಛೇದನದ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ. ಈ ಬಗ್ಗೆ ನಮಗೆ ಈಗಷ್ಟೆ ಮಾಹಿತಿ ಲಭಿಸಿದೆ.

ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಅವರ ಜೀವನದಲ್ಲಿ ಏನಾಗಿದೆ ಎನ್ನುವುದನ್ನು ನಾವು ತಿಳಿಯದೆ ಅದರ ಬಗ್ಗೆ ತಪ್ಪು ಹೇಳಿಕೆಯನ್ನು ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಾವು ಯುವ ಮತ್ತು ಶ್ರೀದೇವಿಯ ಜೋತೆ ಚರ್ಚೆ ಮಾಡುತ್ತೇವೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಇದು ನಮ್ಮ ಕುಟುಂಬದ ವಿಚಾರವಾಗಿದ್ದು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯದೆ ಮಾಧ್ಯಮದ ಮುಂದೆ ಏನನ್ನು ಹೇಳಲು ಸಾಧ್ಯವಿಲ್ಲ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. ಹಾಗೆಯೆ ಯಾವುದೇ ನಿಖರ ಮಾಹಿತಿ ಸಿಗುವವರೆಗೆ ಅಪಪ್ರಚಾರ ಮಾಡದಿರುವಂತೆ ಮನವಿ ಮಾಡಿದ್ದಾರೆ.

Join Nadunudi News WhatsApp Group

ಯುವ-ಶ್ರೀದೇವಿ ವಿಚ್ಛೇದನದ ಬಗ್ಗೆ ಶ್ರೀದೇವಿ ತಂದೆ ಶಾಕಿಂಗ್ ಹೇಳಿಕೆ
ಇನ್ನು ಬೈರಪ್ಪ ತಮ್ಮ ಮಗಳ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಯುವ ನನ್ನೊಂದಿಗೆ ಈ ಬಗ್ಗೆ ಮಾತನಾಡಲಿಲ್ಲ. ಇದುವರೆಗೂ ನನ್ನ ಬಳಿ ಬಂದಿಲ್ಲ ಎಂದಿದ್ದಾರೆ. ನನ್ನ ಮಗಳು ಕಿರುಕುಳಕ್ಕೊಳಗಾಗಿದ್ದರು ನಾನು ನೊಂದುಕೊಳ್ಳುತ್ತೇನೆ ಎಂದು ಹೇಳಿರಲಿಲ್ಲ ಎಂದು ಶ್ರೀದೇವಿ ತಂದೆ ಬೈರಪ್ಪ ಹೇಳಿದ್ದಾರೆ. ಶ್ರೀದೇವಿಗೆ ನಿಜಕ್ಕೂ ದೊಡ್ಮನೆ ಕಿರುಕುಳ ಆಗಿದ್ಯಾ….? ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ.

Shivarajkumar About Yuva Rajkumar And Sridevi Divorce
Image Credit: TV9kannada

Join Nadunudi News WhatsApp Group