Fire Crackers: ಇನ್ನುಮುಂದೆ ಈ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ, ರಾಜೆಯಾದ ಜನತೆಗೆ ಹೊಸ ನಿಯಮ ಘೋಷಿಸಿದ ಸಿದ್ದರಾಮಯ್ಯ.

ಪಟಾಕಿ ಬಳಕೆಗೆ ಹೊಸ ನಿಯಮ ಜಾರಿಗೊಳಿಸಿದ ರಾಜ್ಯ ಸರ್ಕಾರ.

Siddaramaiah Abour Fire Crackers: ದೇಶದಲ್ಲಿ ಈಗಾಗಲೇ ಪಟಾಕಿ ದುರಂತದಿಂದ ಸಾಕಷ್ಟು ಸಾವು ನೋವುಗಳು ಎದುರಾಗಿದೆ ಎನ್ನಬಹುದು. ಅನೇಕ ಪ್ರದೇಶಗಲ್ಲಿ ಆಗಾಗ ಪಟಾಕಿಯಿಂದ ಭಯಾನಕ ದುರಂತ ಸಂಭವಿಸುತ್ತದೆ. ಇತೀಚೆಗಷ್ಟೇ ಅತ್ತಿಬೆಲೆಯ ಬಾಲಾಜಿ ಟ್ರೇಡರ್ಸ್‌ ನ ಪಟಾಕಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು 14 ಮಂದಿ ಬಲಿಯಾದ ಘಟನೆ ಬೆಳಕಿಗೆ ಬಂದಿದೆ.

ಈ ದುರಂತದಲ್ಲಿ ಅಮಾಯಕರು ಸಜೀವ ದಹನವಾಗಿದ್ದು, ಪಟಾಕಿ ಅಂಗಡಿಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ ಎನ್ನುವುದು ತಿಳಿದಿದೆ. ಸದ್ಯ ಅತ್ತಿಬೆಲೆ ಪಟಾಕಿ ದುರಂತದ ಬಳಿಕ ರಾಜ್ಯ ಸರ್ಕಾರ ಎಚ್ಚುಟ್ಟುಕೊಂಡು ಇದೀಗ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

Siddaramaiah ban firecrackers
Image Credit: Esakal

ಅತ್ತಿಬೆಲೆ ಪಟಾಕಿ ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ
ಅತ್ತಿಬೆಲೆ ಪಟಾಕಿ ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಇದೀಗ ರಾಜ್ಯಾದ್ಯಂತ ಪಟಾಕಿ ಲೈಸೆನ್ಸ್ ದಾರರ ಸ್ಥಳ ಪರಿಶೀಲನೆ ನಡೆಸಿದೆ. ಪಟಾಕಿ ಅಂಗಡಿಯ ಮಾಲೀಕರು ಪಡೆದ ಲೈಸೆನ್ಸ್ ನಲ್ಲಿ ಯಾವುದೇ ತಪ್ಪಿದ್ದರು ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳೂ ಸರ್ಕಾರ ಮುಂದಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ರಾಜ್ಯದ ಮುಖ್ಯಮಂತ್ರಿ Siddaramaiah ಅವರು ಆದೇಶ ಹೊರಡಿಸಿದ್ದಾರೆ.

ಪಟಾಕಿ ಬಳಕೆಗೆ ಹೊಸ ನಿಯಮ ಜಾರಿಗೊಳಿಸಿದ ಸಿದ್ದರಾಮಯ್ಯ
ರಾಜ್ಯ ಸರ್ಕಾರ ಇದೀಗ ಅತ್ತಿಬೆಲೆ ದುರಂತದ ಹಿನ್ನೆಲೆ ಮಹತ್ವದ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದೆ. ಇದೀಗ Siddaramaiah ಪಟಾಕಿ ಬಳಕೆಗೆ ಹೊಸ ನಿಯಮ ಜಾರಿಗೊಳಿಸಿದ್ದಾರೆ. ಗಣೇಶ ಹಬ್ಬ, ಮದುವೆ, ರಾಜಕೀಯ ಸಮಾರಂಭಗಳಲ್ಲಿ ಪಟಾಕಿ ನಿಷೇಧಗೊಳಿಸಲಾಗುತ್ತದೆ. ಹಾಗು ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ. ಪ್ರತಿಯೊಬ್ಬರೂ, ದೀಪಾವಳಿಯಲ್ಲಿ ಹಸಿರು ಪಟಾಕಿ ಬಳಸಬೇಕು.

Siddaramaiah Latest News
Image Credit: TV9kannada

ಸುಪ್ರೀಂ ಕೋರ್ಟ್ ಆದೇಶದಂತೆ ಕಡ್ಡಾಯವಾಗಿ ಹಸಿರು ಪಟಾಕಿಯನ್ನೇ ಹೊಡೆಯಬೇಕು, ಇನ್ನಿತರ ಸಮಾರಂಭಗಳಲ್ಲಿ ಪಟಾಕಿ ನಿಷೇಧಗೊಳಿಸಲಾಗುತ್ತದೆ. ರಾಜಕೀಯ ಕಾರ್ಯಕ್ರಮ ,ಗಣೇಶ ಹಬ್ಬ ಹಾಗೂ ಮದುವೆಯಲ್ಲಿ ಪಟಾಕಿ ಸಿಡಿಸುವಂತಿಲ್ಲ, ಪಟಾಕಿ ಸಿಡಿಸುವಾಗ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಮಹತ್ವದ ಆದೇಶ ಹೊರಡಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group