Siddaramaiah: CM ಸಿದ್ದರಾಮಯ್ಯ ಸಿಗರೇಟ್ ಸೇದುವುದು ಬಿಟ್ಟುದ್ದು ಯಾಕೆ ಗೊತ್ತಾ…? ಈ ಒಂದು ಕಾರಣಕ್ಕೆ.

CM ಸಿದ್ದರಾಮಯ್ಯ ಸಿಗರೇಟ್ ಸೇದುವುದು ಬಿಟ್ಟುದ್ದು ಯಾಕೆ ಗೊತ್ತಾ...?

Siddaramaiah Latest News: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಾಗ ಸುದ್ದಿಯಾಗುತ್ತ ಇರುತ್ತಾರೆ. ಸದ್ಯ ಸಿದ್ದರಾಮಯ್ಯ ಅವರು ತಮ್ಮ ಜೀವನಶೈಲಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ನಿನ್ನೆ ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ ನಲ್ಲಿ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿದ್ದಾರೆ.

ಈ ವೇಳೆ ಸಿದ್ದರಾಮಯ್ಯ ಅವರು ಈ ಹಿಂದೆ ತಮಗಿದ್ದ ಸೀಗೆರಿಟ್ ಸೇದುವ ಅಭ್ಯಾಸದ ಬಗ್ಗೆ ಮಾತನಾಡಿದ್ದಾರೆ. ಸಿಗರೇಟ್ ಸೇದುವುದರಿಂದ ಏನೆಲ ಸಮಸ್ಯೆ ಎದುರಾಗಿದೆ..? ಹಾಗೂ ಸಿಕ್ಕಾಪಟ್ಟೆ ಸೇದುತ್ತಿದ್ದ ಸಿಗರೇಟ್ ತಕ್ಷಣ ಬಿಡಲು ಕಾರಣವೇನು..? ಎನ್ನುವ ಬಗ್ಗೆ ಮಾತನಾಡಿದ್ದಾರೆ.

Siddaramaiah Latest News Update
Image Credit: Oneindia

CM ಸಿದ್ದರಾಮಯ್ಯ ಸಿಗರೇಟ್ ಸೇದುವುದು ಬಿಟ್ಟುದ್ದು ಯಾಕೆ ಗೊತ್ತಾ…? ಈ ಒಂದು ಕಾರಣಕ್ಕೆ
ನಾನು ಕಡಿಮೆ ಸಮಯದಲ್ಲಿ ಹೆಚ್ಚು ಸಿಗರೇಟ್ ಸೇದಿದೆ. ಅದು ನನಗೆ ಮನವರಿಕೆಯಾಯಿತು. ಆಗಸ್ಟ್ 27 ರಂದು ಮನವರಿಕೆಯಾಗಿದೆ. ಅದೇ ದಿನ ನಾನು ಸಿಗರೇಟ್ ಸೇದುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟೆ ಎಂದು ಹಳೆಯ ವಿಚಾರವನ್ನು ನೆನಪಿಸಿಕೊಂಡರು. ದೈಹಿಕ ಚಟುವಟಿಕೆಯಿಲ್ಲದೆ ಕುಳಿತುಕೊಳ್ಳುವ ಜನರು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದ್ದರಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆ ಅಗತ್ಯ.

ಜೀವನಶೈಲಿ ಮತ್ತು ಆಹಾರ ಪದ್ಧತಿಯು ಮಾನವನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಎಲ್ಲ ವರ್ಗದ ಜನರಿಗೆ ಆರೋಗ್ಯ ಹಾಗೂ ಅಗತ್ಯ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ನಿರಂತರವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕ್ಯಾನ್ಸರ್‌ ನಂತಹ ಮಾರಣಾಂತಿಕ ಕಾಯಿಲೆಗಳನ್ನು ಸಹ ಗುಣಪಡಿಸಬಹುದು.

ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಿದರೆ ದೀರ್ಘ ಕಾಲ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು. ಹಿಂದಿನವರ ಆರೋಗ್ಯ ವ್ಯವಸ್ಥೆ ಮತ್ತು ಕಠಿಣ ಪರಿಶ್ರಮದ ಜೀವನಶೈಲಿ ಅವರನ್ನು ಸದೃಢವಾಗಿ ಮತ್ತು ಸದೃಢವಾಗಿ ಇರಿಸಿದೆ ಎಂದು ಅವರು ಹೇಳಿದರು. ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ಮೇಲಿಂದ ಮೇಲೆ ಮಾಡಬೇಕು. ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Join Nadunudi News WhatsApp Group

Siddaramaiah Free health checkup and treatment Camp
Image Credit: Vijay Karnataka

Join Nadunudi News WhatsApp Group