Siddaramaiah: ಹಾಲಿಗೆ ಒಂದು ನ್ಯಾಯ…. ಎಣ್ಣೆಗೆ ಒಂದು ನ್ಯಾಯ…? ಎಣ್ಣೆ ಪ್ರಿಯರ ಬೇಸರದ ಕಾರಣರಾದ ಸಿದ್ದು.

ಹಾಲಿಗೆ ಒಂದು ನ್ಯಾಯ.... ಎಣ್ಣೆಗೆ ಒಂದು ನ್ಯಾಯ...?

Siddaramaiah Latest Update: ಸದ್ಯ ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆಯಾಗಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಹಾಲಿನ ದರ ಏರಿಕೆಯ ಬಗ್ಗೆ ಜನಸಾಮಾನ್ಯರು ಹಾಗೂ ವಿರೋಧ ಪಕ್ಷದವರು ದ್ವನಿಯೆತ್ತಿದ್ದರು. ಈ ಹಿನ್ನಲೆ ಸಿದ್ದರಾಮಯ್ಯ ಸರ್ಕಾರ ಹಾಲಿನ ದರ ಏರಿಕೆಯ ಬಗ್ಗೆ ಸ್ಪಷ್ಟ ನಿಲುವು ನೀಡಿತ್ತು. ಹಾಲಿನ ಪ್ಯಾಕೆಟ್ ನಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಿಸಿ.

ಹೆಚ್ಚಿಸಿದ ಹಾಲಿನ ಪ್ರಮಾಣಕ್ಕೆ ದರ ಏರಿಕೆ ಮಾಡಲಾಗಿದೆಯೇ ಹೊರತು ಹಾಲಿನ ದರವನ್ನು ಏರಿಕೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರ ಜನರಿಗೆ ಮನವರಿಕೆ ಮಾಡಿದೆ. ನೀವು ಹೆಚ್ಚುವರಿ ಹಣ ನೀಡಿ ಹಾಲನ್ನು ಖರೀದಿಸಿದರು, ಹಾಲಿನ ಪ್ರಮಾಣ ನಿಮಗೆ ಹೆಚ್ಚು ಸಿಗಲಿದೆ ಎನ್ನುವುದು ಸರ್ಕಾರದ ಸ್ಪಷ್ಟನೆಯಾಗಿದೆ. ಸದ್ಯ ಸರ್ಕಾರ ಈ ಮಾತಿನ ವಿರುದ್ಧ ಮದ್ಯಪ್ರಿಯರು ತಿರುಗಿ ಬಿದ್ದಿದ್ದಾರೆ. ಹಾಲಿಗೆ ಒಂದು ನ್ಯಾಯ…. ಎಣ್ಣೆಗೆ ಒಂದು ನ್ಯಾಯ…? ಎನ್ನುವ ಕೂಗೂ ಸದ್ಯ ರಾಜ್ಯದೆಲ್ಲೆಡೆ ಜೋರಾಗಿದೆ ಎನ್ನಬಹುದು.

Milk Price Hike In Karnataka
Image Credit: Zee News

ಎಣ್ಣೆ ಪ್ರಿಯರ ಬೇಸರದ ಕಾರಣರಾದ ಸಿದ್ದು
ನಂದಿನಿ ಹಾಲಿನ ಪ್ಯಾಕೆಟ್ 1,000 ಎಂಎಲ್ ಗೆ 42 ರೂ., 500 ಎಂಎಲ್ ಲೀಟರ್ ಹಾಲಿನ ದರ 22 ರೂ. ಆದರೆ ಇದೀಗ ಕೆಎಂಎಫ್ 1 ಲೀಟರ್ ಬದಲಿಗೆ 1,050 ಎಂಎಲ್ ಮತ್ತು 500 ಎಂಎಲ್ ಬದಲಿಗೆ 550 ಎಂಎಲ್ ಪ್ಯಾಕೆಟ್ ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಹೀಗಾಗಿ ನಂದಿನಿ ಹಾಲಿನ 1,050 ಮಿಲಿ ಲೀಟರ್ ಪ್ಯಾಕೆಟ್ ಗೆ 44 ರೂ., 550 ಮಿಲಿ ಲೀಟರ್ ಪ್ಯಾಕೆಟ್ ಗೆ 24 ರೂ. ಫಿಕ್ಸ್ ಮಾಡಲಾಗಿದೆ. ಇದೇ ಹಿನ್ನಲೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ, ಹಾಲಿನ ದರ ಏರಿಕೆ ಬಳಿಕ ಕುಡುಕರೂ ಸಿದ್ದರಾಮಯ್ಯ ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ.

ಹಾಲಿಗೆ ಒಂದು ನ್ಯಾಯ…. ಎಣ್ಣೆಗೆ ಒಂದು ನ್ಯಾಯ…?
ಸಿದ್ದರಾಮಯ್ಯ ಸರ್ಕಾರ ಹಾಲಿನ ದರ ಏರಿಸಿ ಹೆಚ್ಚು ಹಾಲು ನೀಡುತ್ತಿರುವ ಸರಕಾರ, ಎಣ್ಣೆ, ಬ್ರಾಂಡಿ, ವಿಸ್ಕಿ, ರಮ್ ದರ ಏರಿಸಿದರೂ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಯನ್ನು ಏಕೆ ನೀಡುತ್ತಿಲ್ಲ..? ಬರೀ ಎಣ್ಣೆ ದರ ಹೆಚ್ಚಿಸುತ್ತಿರುವ ಸರಕಾರಕ್ಕೆ ಕುಡುಕರ ಕಷ್ಟ ಅರ್ಥವಾಗುತ್ತಿಲ್ಲ. ಕುಡುಕರಿಗೆ ಮಾತ್ರ ಹೀಗೇಕೆ ಮೋಸ…? ಎಂದು ಕುಡುಕರು ಈ ಎಲ್ಲ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳುತ್ತಿದ್ದಾರೆ.

ಎಣ್ಣೆ ಬೆಲೆ ಏರಿಕೆಯಾದ ರೀತಿಯಲ್ಲಿಯೇ ಹೆಚ್ಚಿನ ಎಣ್ಣೆ ನೀಡಬೇಕು ಎಂದು ಕುಡುಕರು ಸರ್ಕಾರಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈಗಂತೂ ಏಕಾಏಕಿ ಎಣ್ಣೆ ಬೆಲೆ ಏರಿಕೆ ಆಗಿದೆ, ಹಾಲಿಗೆ ಒಂದು ನ್ಯಾಯ, ಎಣ್ಣೆಗೆ ಒಂದು ನ್ಯಾಯವಾದರೆ ಹೋರಾಟ ಮಾಡುತ್ತೇವೆ ಎಂದು ಮಧ್ಯ ಪ್ರಿಯರು ಹೇಳುತ್ತಿದ್ದಾರೆ. ಅದಾಗ್ಯೂ, ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಕುಡುಕರ ಬೇಡಿಕೆಯ ಬಗ್ಗೆ ಏನು ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group

Liquor Price Hike In Karnataka
Image Credit: Mumbai Mirror

Join Nadunudi News WhatsApp Group