Milk Price Hike: ನಂದಿನಿ ಹಾಲಿನ ದರ ಮತ್ತೆ ಇಷ್ಟು ಹೆಚ್ಚಳ, ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ.

ಹಾಲಿನ ದರ ಹೆಚ್ಚಳದ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Siddraramaiah About Milk Price Hike: ಪ್ರಸ್ತುತ ದೇಶದಲ್ಲಿ ಕಳೆದ ವರ್ಷದಿಂದ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರು ಹಣದುಬ್ಬರತೆಯ ಪರಿಸ್ಥಿಯನ್ನು ಎದುರಿಸುತ್ತಲೇ ಇದ್ದಾರೆ. ವರ್ಷದ ಪ್ರತಿ ತಿಂಗಳಲ್ಲಿ ಒಂದಲ್ಲ ಒಂದು ವಸ್ತುವಿನ ಬೆಲೆ ಏರಿಕೆ ಆಗುತ್ತಲೇ ಇದೆ.

ದಿನ ಬಳಕೆಯ ವಸ್ತುಗಳ ಬೆಲೆಯಂತು ಆಗಾಗ ಹೆಚ್ಚಳವಾಗುತ್ತ ಇರುತ್ತದೆ. ಸದ್ಯ ರಾಜ್ಯದಲ್ಲಿ ಪ್ರತಿನಿತ್ಯ ಬಳಸುವಂತಹ ಹಾಲಿನ ಬೆಲೆ ಏರಿಕೆಯಾಗಿದೆ. ಈ ಮೂಲಕ ಮೊದಲೇ ಹಣದುಬ್ಬರತೆಯ ಪರಿಸ್ಥಿತಿ ಎದುರಿಸುತ್ತಿರುವವರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಾಗಿದೆ ಎನ್ನಬಹುದು. ಇದೀಗ ಹಾಲಿನ ದರದ ಹೆಚ್ಚಳದ ಬಗ್ಗೆ ರಾಜ್ಯದ ಮುಖ್ಯಮಂತ್ರಿ Siddraramaiah ಅವರು ಸ್ಪಷ್ಟನೆ ನೀಡಿದ್ದಾರೆ.

Siddaramaiah About Milk Price Hike
Image Credit: etvbharat

 ನಂದಿನಿ ಹಾಲಿನ ದರ ಮತ್ತೆ ಇಷ್ಟು ಹೆಚ್ಚಳ
ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ರೂ. 2 ರಷ್ಟು ಏರಿಕೆ ಮಾಡಲಾಗಿದೆ. ಈ ಬೆಲೆ ಏರಿಕೆಯ ಬಗ್ಗೆ ಜನಸಾಮಾನ್ಯರು ಚಿಂತಿಸುತ್ತಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಂದಿನಿ ಹಾಲಿನ ಪ್ಯಾಕೆಟ್ ಗಳಲ್ಲಿ ಹಾಲಿನ ಪ್ರಮಾಣವನ್ನು 50ml ಹೆಚ್ಚಿಸಿ, ಹೆಚ್ಚುವರಿ ಹಾಲಿಗೆ 2 ರೂ. ದರ ನಿಗದಿಪಡಿಸಿ, ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆಯೇ ಹೊರತು ಹಾಲಿನ ದರ ಏರಿಕೆ ಮಾಡಿಲ್ಲ. ಭವಿಷ್ಯದಲ್ಲಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ ನಲ್ಲಿ 550 ಎಂಎಲ್ ಮತ್ತು ಲೀಟರ್ ಪ್ಯಾಕೆಟ್‌ ನಲ್ಲಿ 1,050 ml ಹಾಲು ಲಭ್ಯವಾಗಲಿದೆ ಎಂದು ಅವರು ಸಿದ್ದರಾಮಯ್ಯ ಮಾಹಿತಿ ನೀಡಿದರು.

Milk Price Hike Update
Image Credit: Hindustantimes

ಹಾಲಿನ ದರ ಹೆಚ್ಚಳದ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಹಾಲು ಸಂಗ್ರಹಣಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ರೈತರು ತಂದಿರುವ ಹೆಚ್ಚುವರಿ ಹಾಲನ್ನು ರೈತರು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಕೆಎಂಎಫ್ ಸಂಸ್ಥೆ ಹಾಲಿನ ಪ್ರಮಾಣವನ್ನು ಪ್ಯಾಕೆಟ್ ಗಳಲ್ಲಿ ಹೆಚ್ಚಿಸಲು ನಿರ್ಧರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದಲ್ಲಿ ಶೇ.15 ರಷ್ಟು ಹಾಲು ಉತ್ಪಾದನೆ ಹೆಚ್ಚಾಗಿದೆ. ಹಿಂದಿನ ವರ್ಷಗಳಲ್ಲಿ, ಈ ಹೊತ್ತಿಗೆ ದೈನಂದಿನ ಸರಾಸರಿ 90 ಲಕ್ಷ ಲೀಟರ್ ಉತ್ಪಾದನೆಯು ಸರಾಸರಿ 99 ಲಕ್ಷ ಲೀಟರ್‌ಗೆ ಏರಿದೆ.

ಉತ್ಪಾದನೆಯಾಗುವ ಹೆಚ್ಚುವರಿ ಹಾಲನ್ನು ರೈತರಿಂದ ಖರೀದಿಸಬೇಕು. ಯಾವುದೇ ಕಾರಣಕ್ಕೂ ಅವರಿಂದ ಹಾಲು ಪಡೆಯಲು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಒಂದು ಲೀಟರ್ ಹಾಲಿನ ಪ್ಯಾಕೆಟ್ ಗೆ ಹೆಚ್ಚುವರಿಯಾಗಿ 50ml ಹಾಲನ್ನು ಸೇರಿಸಿ ಈ ಹೆಚ್ಚುವರಿ ಹಾಲಿನ ಬೆಲೆ ಕೇವಲ 2 ರೂ. ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆ. ಹಾಲಿನ ದರ ಏರಿಕೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Join Nadunudi News WhatsApp Group

Nandini Milk Price Hike
Image Credit: Deccanherald

Join Nadunudi News WhatsApp Group